ETV Bharat / science-and-technology

RCS ಮೆಸೇಜಿಂಗ್ ಅಳವಡಿಸಿಕೊಳ್ಳದ ಆ್ಯಪಲ್; ಐಫೋನ್​ಗೆ iPager ಎಂದು ಗೇಲಿ ಮಾಡಿದ ಗೂಗಲ್!

author img

By ETV Bharat Karnataka Team

Published : Sep 24, 2023, 12:29 PM IST

Google mocks Apple in new video for lack of RCS
Google mocks Apple in new video for lack of RCS

ಆರ್​ಸಿಎಚ್ ತಂತ್ರಜ್ಞಾನ ಅಳವಡಿಸಿಕೊಳ್ಳದ ಆ್ಯಪಲ್​ ಅನ್ನು ಪೇಜರ್​ಗೆ ಹೋಲಿಸುವ ಮೂಲಕ ಗೂಗಲ್ ಗೇಲಿ ಮಾಡಿದೆ.

ಸ್ಯಾನ್ ಫ್ರಾನ್ಸಿಸ್ಕೋ : ಐಫೋನ್ ಅನ್ನು 'ಐಪೇಜರ್' ಗೆ ಹೋಲಿಸುವ ಮೂಲಕ ಗೂಗಲ್ ಆ್ಯಪಲ್​ ಅನ್ನು ಗೇಲಿ ಮಾಡಿದೆ. ಈ ಬಗ್ಗೆ ಹೊಸ ವೀಡಿಯೊ ಬಿಡುಗಡೆ ಮಾಡಿರುವ ಗೂಗಲ್, ಐಫೋನ್​ಗಳನ್ನು ಹಳೆಯ ಕಾಲದ ಪೇಜರ್​ಗಳಿಗೆ ಹೋಲಿಸಿದೆ. ಆ್ಯಪಲ್​ ಈಗಲೂ ಆಧುನಿಕ ಆರ್​ಸಿಎಚ್​ ಅಂದರೆ ರಿಚ್ ಕಮ್ಯುನಿಕೇಷನ್ ಸರ್ವೀಸಸ್ ಮೆಸೇಜಿಂಗ್ ಪ್ರೋಟೋಕಾಲ್ ಅನ್ನು ಅಳವಡಿಸಿಕೊಂಡಿಲ್ಲ ಮತ್ತು ಆಂಡ್ರಾಯ್ಡ್ ಬಳಕೆದಾರರೊಂದಿಗೆ ಸಂದೇಶ ಕಳುಹಿಸಲು ದಶಕಗಳಷ್ಟು ಹಳೆಯ ಎಸ್ಎಂಎಸ್ / ಎಂಎಂಎಸ್ ಪ್ರೋಟೋಕಾಲ್ ಅನ್ನೇ ಬಳಸುತ್ತಿದೆ.

ಆರ್​ಸಿಎಚ್​ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಂತೆ ಗೂಗಲ್ ಆಗಾಗ ಆ್ಯಪಲ್​ಗೆ ತಿವಿಯುತ್ತಲೇ ಇದೆ. ಇದರ ಮುಂದುವರಿದ ಭಾಗವಾಗಿ ಗೂಗಲ್ ಈಗ Get the Message ಅಂದರೆ 'ಈಗಲಾದರೂ ಅರ್ಥ ಮಾಡಿಕೋ' ಎಂಬರ್ಥದಲ್ಲಿ ಆ್ಯಪಲ್​ ವಿರುದ್ಧ ಆನ್ಲೈನ್ ಅಭಿಯಾನ ನಡೆಸುತ್ತಲೇ ಇದೆ. ಅದಕ್ಕಾಗಿಯೇ ಆ್ಯಪಲ್​ ಫೋನ್​ ಅನ್ನು ಐಪೇಜರ್ ಎಂದು ವ್ಯಂಗ್ಯವಾಡಿರುವ ಗೂಗಲ್ ಈಗಲಾದರೂ Get the Message ಎಂದು ಹೇಳಿದೆ.

"ಐಪೇಜರ್ ಎಂಬುದು ನಿಜವಲ್ಲ, ಆದರೆ ಆ್ಯಪಲ್ ಬಳಸುತ್ತಿರುವ ಹಳೆಯ ಎಸ್ಎಂಎಸ್ ತಂತ್ರಜ್ಞಾನದಿಂದ ಸಮಸ್ಯೆಗಳು ನಿಜವಾಗಿಯೂ ಇವೆ" ಎಂದು ಗೂಗಲ್ ಯೂಟ್ಯೂಬ್​ ವೀಡಿಯೊ ವಿವರಣೆಯಲ್ಲಿ ಹೇಳಿದೆ. "ಟೆಕ್ಸ್ಟ್​ ಮೆಸೇಜ್ ಕಳುಹಿಸುವ ಪ್ರಕ್ರಿಯೆಯನ್ನು ಎಲ್ಲರಿಗಾಗಿ ಮತ್ತಷ್ಟು ಉತ್ತಮಗೊಳಿಸೋಣ ಮತ್ತು ಆ್ಯಪಲ್​ಗೆ ಇದರ ಸಂದೇಶ ತಲುಪಿಸೋಣ. ಆ್ಯಪಲ್ ಆರ್​ಸಿಎಸ್​ ತಂತ್ರಜ್ಞಾನಕ್ಕೆ ಅಪ್​ಗ್ರೇಡ್​ ಆಗಲು ಸಹಾಯ ಮಾಡೋಣ #GetTheMessage" ಎಂದು ಅದು ಹೇಳಿದೆ.

ಆರ್​ಸಿಎಸ್​ ಇದು ಸಂದೇಶಗಳಲ್ಲಿ ಎಂಡ್-ಟು-ಎಂಡ್ ಎನ್ಕ್ರಿಪ್ಷನ್ ಅನ್ನು ಖಾತರಿಗೊಳಿಸುತ್ತದೆ ಮತ್ತು ರೀಡ್ ರಿಸೀಪ್ಟ್​ಗಳು ಕಾಣಿಸುತ್ತವೆ. ಜೊತೆಗೆ ಆರ್​ಸಿಎಸ್​ನಿಂದ ಹೆಚ್ಚಿನ ರೆಸಲ್ಯೂಶನ್​ನ ಫೋಟೋಗಳು ಮತ್ತು ವೀಡಿಯೊಗಳನ್ನು ಶೇರ್ ಮಾಡಲು ಸಾಧ್ಯವಾಗುತ್ತದೆ.

ಈ ವಿಶ್ವದಲ್ಲಿ ಸೆಲ್ ಫೋನ್ ಗಳು ಬರುವ ಮೊದಲು ತ್ವರಿತವಾಗಿ ಸಂದೇಶ ಕಳುಹಿಸಲು ಪೇಜರ್​ಗಳು ಬಹಳ ಉಪಯುಕ್ತವಾಗಿದ್ದವು. ಆಗ ಪೇಜಿಂಗ್ ಎಂಬ ತ್ವರಿತ ಸಂದೇಶ ವ್ಯವಸ್ಥೆಯೊಂದು ಚಾಲ್ತಿಯಲ್ಲಿತ್ತು. 1990ರ ದಶಕದಲ್ಲಿ ಪೇಜರ್​ಗಳು ಬಹಳ ಜನಪ್ರಿಯವಾಗಿದ್ದವು ಮೊಬೈಲ್​ಗಳು ಬಂದ ನಂತರ ಇವುಗಳ ಬಳಕೆ ನಿಂತು ಹೋಯಿತು. ಪೇಜರ್ ಎಂಬುದು ಒಂದು ಸಣ್ಣ ವೈಯಕ್ತಿಕ ರೇಡಿಯೋ ರಿಸೀವರ್ ಆಗಿದ್ದು, ಅದನ್ನು ಜೇಬಿನಲ್ಲಿ ಇಟ್ಟುಕೊಂಡು ಸುತ್ತಾಡಬಹುದಿತ್ತು. ಆದರೆ ಪೇಜರ್​ ಮೊಬೈಲ್​ಗಳ ರೀತಿ ಟು ವೇ ಕಮ್ಯುನಿಕೇಶನ್ ಸಾಧನಗಳಲ್ಲ. ಇವು ಒನ್ ವೇ ಸಂಪರ್ಕ ಸಾಧನಗಳು ಮಾತ್ರ.

ಇದನ್ನೂ ಓದಿ : ಯಾರಿಗೂ ಉಚಿತವಾಗಿರಲ್ಲ 'X'! ಮಸ್ಕ್ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.