ETV Bharat / international

ರನ್‌ವೇಯಿಂದ ನಿಯಂತ್ರಣ ಕಳೆದುಕೊಂಡು ಸಮುದ್ರಕ್ಕೆ ಬಿದ್ದ ಅಮೆರಿಕ ನೌಕಾಪಡೆ ವಿಮಾನ-ವಿಡಿಯೋ

author img

By ETV Bharat Karnataka Team

Published : Nov 21, 2023, 11:13 AM IST

US Navy plane ends up in a bay in Hawaii: ಅಮೆರಿಕದ ಬೃಹತ್ ಕಣ್ಗಾವಲು ವಿಮಾನವೊಂದು ರನ್ ವೇಯಿಂದ ನಿಯಂತ್ರಣ ಕಳೆದುಕೊಂಡು ಹವಾಯಿ ಸಮುದ್ರಕ್ಕೆ ಬಿದ್ದಿದೆ.

US Navy plane overshoots runway  plane overshoots runway and ends up in a bay  US Navy plane overshoots runway in Hawaii  ಸಮುದ್ರದಲ್ಲಿ ಇಳಿದ ಅಮೆರಿಕಾದ ಬೃಹತ್​ ವಿಚಕ್ಷಣ ವಿಮಾನ  ಲ್ಯಾಡಿಂಗ್​ ವೇಳೆ ದುರಂತ  ಅಮೆರಿಕದ ಬೃಹತ್ ಕಣ್ಗಾವಲು ವಿಮಾನ  ರನ್ ವೇಯಿಂದ ನಿಯಂತ್ರಣ ಕಳೆದುಕೊಂಡು ಸಮುದ್ರ  ಯುಎಸ್ ನೌಕಾಪಡೆಗೆ ಸೇರಿದ ಬೃಹತ್ ಕಣ್ಗಾವಲು ವಿಮಾನ  ಹವಾಯಿಯ ಮೆರೈನ್ ಕಾರ್ಪ್ಸ್ ಬೇಸ್‌  ಕೋರ್‌ನ ಪ್ರತಿನಿಧಿಯಾದ ಒರ್ಲ್ಯಾಂಡೊ ಪ್ರೆಜ್  ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್
ಸಮುದ್ರದಲ್ಲಿ ಇಳಿದ ಅಮೆರಿಕಾದ ಬೃಹತ್​ ವಿಚಕ್ಷಣ ವಿಮಾನ

ಹವಾಯಿ: ಅಮೆರಿಕ ನೌಕಾಪಡೆಯ ಬೃಹತ್ ಕಣ್ಗಾವಲು ವಿಮಾನವೊಂದು ರನ್‌ವೇಯಲ್ಲಿ ನಿಯಂತ್ರಣ ಕಳೆದುಕೊಂಡು ಸಮುದ್ರಕ್ಕೆ ಬಿದ್ದಿದೆ. ವಿಮಾನದಲ್ಲಿ ಒಂಬತ್ತು ಜನರಿದ್ದು, ಎಲ್ಲರೂ ಈಜಿ ದಡ ತಲುಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಮಾನ ಸಮುದ್ರದಲ್ಲಿ ತೇಲುತ್ತಿದ್ದ ದೃಶ್ಯ ದೊರೆತಿದೆ.

  • 🇺🇸 US Navy plane overshoots runway and ends up in a bay in Hawaii

    The P-8A "Poseidon" overshot the runway at a Marine base on Kaneohe Bay, said U.S. Marine Corps Spox Gunnery Sgt. Orlando Perez said that all nine people on board the aircraft made it safely to shore@DlugajJuly pic.twitter.com/ltXxVgpvCU

    — Velerie (@velerie_a) November 21, 2023 " class="align-text-top noRightClick twitterSection" data=" ">

ಹವಾಯಿ ಮೆರೈನ್ ಕಾರ್ಪ್ಸ್ ಬೇಸ್‌ನಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಈ ಅಪಘಾತವನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಘಟನೆ ತಿಳಿದ ತಕ್ಷಣ ಕೋಸ್ಟ್ ಗಾರ್ಡ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು. ಮೂಲಗಳ ಪ್ರಕಾರ, ಎಲ್ಲಾ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಅವರು ತಾವಾಗಿಯೇ ಈಜಿ ದಡ ತಲುಪಿದರು ಎಂದು ತಿಳಿದುಬಂದಿದೆ.

ಸಮುದ್ರದಲ್ಲಿ ಬೋಟಿಂಗ್ ಮಾಡುತ್ತಿದ್ದ ಜನರು ವಿಮಾನ ನೀರಿನ ಮೇಲೆ ತೇಲುತ್ತಿರುವುದನ್ನು ಕಂಡು ಅಚ್ಚರಿಗೊಂಡಿದ್ದರು. ವಿಮಾನ ಸಮುದ್ರದಲ್ಲಿ ಇಳಿದ ಸಂದರ್ಭದಲ್ಲಿ ದಟ್ಟ ಮಂಜು ಆವರಿಸಿ ಗೋಚರತೆ ಕ್ಷೀಣಿಸಿತ್ತು. P-8A ಪೋಸಿಡಾನ್ ವಿಮಾನವು ಅಮೆರಿಕ ನೌಕಾಪಡೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜಲಾಂತರ್ಗಾಮಿ ನೌಕೆಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಇದಕ್ಕಿದೆ ಎಂದು ವರದಿಯಾಗಿದೆ.

ಜಲಾಂತರ್ಗಾಮಿ ನೌಕೆಗಳ ಮೇಲ್ವಿಚಾರಣೆ ಮತ್ತು ದಾಳಿಗೆ P-8A ಪೋಸಿಡಾನ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದಲ್ಲದೆ, ವಿಚಕ್ಷಣ ಮತ್ತು ಗುಪ್ತಚರ ಮಾಹಿತಿ ಸಂಗ್ರಹಕ್ಕಿದು ಅನುಕೂಲಕಾರಿಯಾಗಿದೆ. ಈ ವಿಮಾನವನ್ನು ಬೋಯಿಂಗ್ ಕಂಪನಿ ಅಭಿವೃದ್ಧಿಪಡಿಸಿದೆ. ಟಾರ್ಪಿಡೊ ಮತ್ತು ಕ್ರೂಸ್ ಕ್ಷಿಪಣಿಗಳನ್ನು ಕೂಡಾ ಇದು ಸಾಗಿಸಬಲ್ಲದು. ಅಪಘಾತದ ಸಮಯದಲ್ಲಿ ವಿಮಾನದಲ್ಲಿ ಶಸ್ತ್ರಾಸ್ತ್ರಗಳು ಇದ್ದವೇ ಎಂಬುದು ಬಹಿರಂಗವಾಗಿಲ್ಲ.

ಈ ವಿಮಾನವನ್ನು ನಿರ್ವಹಿಸುವ ಗಸ್ತು ಸ್ಕ್ವಾಡ್ರನ್ ಕಾನೋಹೆ ಕೊಲ್ಲಿಯಲ್ಲಿದೆ. ಮೆರೈನ್ ಕಾರ್ಪ್ಸ್ ಕೂಡ ಹವಾಯಿಯಲ್ಲಿ ಪ್ರಧಾನ ಕಚೇರಿ ಹೊಂದಿದೆ. ಪ್ರಪಂಚದಲ್ಲಿ, P8 ವಿಮಾನವನ್ನು ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಬ್ರಿಟನ್, ನಾರ್ವೆ ಮತ್ತು ಭಾರತದ ಸೇನೆ ಳಸುತ್ತವೆ. 2009ರಲ್ಲಿ ಅಮೆರಿಕದ ಹಡ್ಸನ್ ನದಿ ಮಧ್ಯದಲ್ಲಿ ಬೃಹತ್ ವಿಮಾನವೊಂದು ಇಳಿದಿತ್ತು. ಆದರೆ, ಪೈಲಟ್ ಚಾಣಾಕ್ಷತನದಿಂದ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದರು.

ಇದನ್ನೂ ಓದಿ: ಒಂದೇ ದಿನ ಮಂಗಳೂರು ವಿಮಾನ ನಿಲ್ದಾಣದಲ್ಲಿ ದಾಖಲೆಯ 7399 ಪ್ಯಾಸೆಂಜರ್ಸ್​ ಪ್ರಯಾಣ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.