ETV Bharat / international

ಶ್ರೀಲಂಕಾದಲ್ಲಿ ತೈಲದರ ಸಾರ್ವಕಾಲಿಕ ದಾಖಲೆ.. ಲೀಟರ್​ ಪೆಟ್ರೋಲ್​ ₹420, ಡೀಸೆಲ್ ₹400

author img

By

Published : May 24, 2022, 3:08 PM IST

sri-lanka-hikes-fuel-prices
ಶ್ರೀಲಂಕಾದಲ್ಲಿ ತೈಲದರ ಸಾರ್ವಕಾಲಿಕ ದಾಖಲೆ

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದ ಜನರಿಗೆ ಇದೀಗ ತೈಲ ದರ ವಿಪರೀತ ಏರಿಕೆ ಕಂಡು ಗಾಯದ ಮೇಲೆ ಬರೆ ಎಳೆದಂತಾಗಿದೆ. ಲೀಟರ್​ ಪೆಟ್ರೋಲ್​ 420 ರೂ. ಆದರೆ, ಡೀಸೆಲ್​ 400ರೂಪಾಯಿ ಆಗಿದೆ.

ಕೊಲಂಬೊ: ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ನೆರೆಯ ದ್ವೀಪ ರಾಷ್ಟ್ರವಾದ ಶ್ರೀಲಂಕಾದಲ್ಲಿ ಇಂಧನ ಕೊರತೆಯೂ ಹೆಚ್ಚಾಗಿದೆ. ತೈಲ ಬೆಲೆ ಮಂಗಳವಾರ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿದೆ. ಲೀಟರ್ ಪೆಟ್ರೋಲ್ ಬೆಲೆ ಶೇ.24.3ರಷ್ಟು, ಡೀಸೆಲ್ ಬೆಲೆ ಶೇ.38.4ರಷ್ಟು ಏರಿಕೆಯಾಗಿದ್ದು, ಜನರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆರ್ಥಿಕವಾಗಿ ಸಂಕಷ್ಟದಲ್ಲಿರುವ ಲಂಕಾದಲ್ಲಿ ಪೆಟ್ರೋಲ್​ ಬೆಲೆ ಏರಿಕೆಯಾಗಿದ್ದು ಇದು 2ನೇ ಸಲ. ಇದೀಗ 1 ಲೀಟರ್ ಪೆಟ್ರೋಲ್ ಬೆಲೆ 82 ರೂಪಾಯಿ ಏರಿಕೆಯಾಗಿ 420 ರೂಪಾಯಿಗೆ ತಲುಪಿದೆ. 111 ರೂ.ಗಳ ಏರಿಕೆ ಕಂಡ ಡೀಸೆಲ್​ 1 ಲೀಟರ್​ಗೆ 400 ರೂ. ಆಗಿದೆ. ಲಂಕಾದ ಪೆಟ್ರೋಲಿಯಂ ಕಾರ್ಪೊರೇಷನ್ ಮಂಗಳವಾರ ಇಂಧನ ಬೆಲೆಯನ್ನು ಪರಿಷ್ಕರಣೆ ಮಾಡಿದೆ. ಪರಿಷ್ಕೃತ ಬೆಲೆಗಳು ಮಂಗಳವಾರದಿಂದಲೇ ಜಾರಿಗೆ ಬಂದಿವೆ. ಇದನ್ನು 15 ದಿನಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಪರಿಷ್ಕರಣೆ ಮಾಡಲಾಗುವುದು ಎಂದು ಇಂಧನ ಸಚಿವರು ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿ ತೈಲದರ ವಿಪರೀತ ಏರಿಕೆಯಿಂದ ಆಟೋ ಚಾಲಕರಿಗೆ ಹೆಚ್ಚಿನ ಹೊರೆಯಾಗಲಿದೆ. ಪ್ರಯಾಣಿಕರಿಂದ ಮೊದಲ ಕಿಲೋಮೀಟರ್​ಗೆ 90 ರೂಪಾಯಿ, ಎರಡನೇ ಕಿಲೋಮೀಟರ್​ಗೆ 80 ರೂಪಾಯಿ ಶುಲ್ಕ ವಿಧಿಸಲಾಗುವುದು ಎಂದು ತಿಳಿದುಬಂದಿದೆ.

ಈಗಾಗಲೇ ಸಾರಿಗೆ ವೆಚ್ಚವನ್ನು ಕಡಿತ ಮಾಡಲು ಸರ್ಕಾರ ಶಾಲಾ- ಕಾಲೇಜುಗಳಿಗೆ ರಜೆ ನೀಡಿದೆ. ಅಲ್ಲದೇ, ಸರ್ಕಾರ ಕಚೇರಿ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡಲು ಆದೇಶಿಸಿದೆ. ಇಂಧನ ಕೊರತೆಯನ್ನು ಪೂರೈಸಲು ಸರ್ಕಾರ ಎಲ್ಲಾ ರೀತಿಯ ಸಾಧ್ಯತೆಗಳನ್ನು ಹುಡುಕುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓದಿ: ಶೇ.1ರಷ್ಟು ಕಮಿಷನ್​ ಆರೋಪ: ಪಂಜಾಬ್‌ ಆರೋಗ್ಯ ಸಚಿವ ವಜಾ, ಪೊಲೀಸರಿಂದ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.