ETV Bharat / international

ಇಂಡೋ-ಫೆಸಿಫಿಕ್​​ಗಾಗಿ ಕ್ವಾಡ್‌ನಿಂದ ರಚನಾತ್ಮಕ ಕಾರ್ಯಸೂಚಿ​: ಪ್ರಧಾನಿ ಮೋದಿ

author img

By

Published : May 24, 2022, 11:04 AM IST

PM Narendra Modi in Quad summit in Tokyo
ಟೋಕಿಯೋ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ

ಜಪಾನ್​ ಪ್ರಧಾನಿ ಜೊತೆಗಿನ ಮಾತುಕತೆಯಲ್ಲಿ, ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಬಲಪಡಿಸುವುದಕ್ಕೆ ಒತ್ತು ನೀಡುವುದಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಟೋಕಿಯೊ(ಜಪಾನ್​): ಟೋಕಿಯೊದಲ್ಲಿ ಮಹತ್ವದ ಕ್ವಾಡ್ ಶೃಂಗಸಭೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ಕ್ವಾಡ್‌ನ ಪ್ರಯತ್ನಗಳು ಸ್ವತಂತ್ರ, ಮುಕ್ತ ಇಂಡೋ-ಪೆಸಿಫಿಕ್ ಪ್ರದೇಶವನ್ನು ಪ್ರೋತ್ಸಾಹಿಸುತ್ತಿವೆ. ಇದು ಪರಸ್ಪರ ನಂಬಿಕೆ ಮತ್ತು ಪ್ರಜಾಪ್ರಭುತ್ವದ ತತ್ವಗಳಿಗೆ ಹೊಸ ಭರವಸೆ ನೀಡುತ್ತಿದೆ. ಇದನ್ನು ಇನ್ನಷ್ಟು ಗಟ್ಟಿಗೊಳಿಸುವುದು ನಮ್ಮೆಲ್ಲರ ಗುರಿ ಎಂದರು.

ಅತ್ಯಂತ ಕಡಿಮೆ ಸಮಯದಲ್ಲಿ ಕ್ವಾಡ್​ ಪ್ರಪಂಚದಲ್ಲಿ ತನ್ನ ಸ್ಥಾನವನ್ನು ನಿರೂಪಿಸಿಕೊಂಡಿದೆ. ಇಂದು ವಿಸ್ತಾರವಾದ ವ್ಯಾಪ್ತಿ ಹೊಂದಿರುವ ಸಂಘಟನೆಯು ಪರಿಣಾಮಕಾರಿಯಾಗಿದೆ. ನಮ್ಮ ಪರಸ್ಪರ ನಂಬಿಕೆ ಮತ್ತು ನಮ್ಮ ನಿರ್ಣಯವು ಪ್ರಜಾಸತ್ತಾತ್ಮಕ ಶಕ್ತಿಗಳಿಗೆ ಹೊಸ ಶಕ್ತಿ, ಉತ್ಸಾಹ ತುಂಬುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಕೋವಿಡ್-19 ಪ್ರತಿಕೂಲ ಪರಿಸ್ಥಿತಿಯನ್ನು ಸೃಷ್ಟಿಸಿದರೂ ಲಸಿಕೆ ವಿತರಣೆ, ಹವಾಮಾನ ವೈಪರೀತ್ಯ, ವಿಪತ್ತು ಪ್ರತಿಕ್ರಿಯೆ, ಆರ್ಥಿಕ ಸಹಕಾರ ಮತ್ತು ಇತರ ಕ್ಷೇತ್ರಗಳಲ್ಲಿ ನಮ್ಮ ನಡುವಿನ ಸಮನ್ವಯವನ್ನು ಮತ್ತಷ್ಟು ಹೆಚ್ಚಿಸಿತು. ಇದು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಯನ್ನು ನಿರೂಪಿಸಿದೆ ಎಂದು ಮೋದಿ ತಿಳಿಸಿದರು.

ಹೊಸದಾಗಿ ಆಯ್ಕೆಯಾದ ಆಸ್ಟ್ರೇಲಿಯಾದ ಪ್ರಧಾನಿ ಅಂಥೋನಿ ಅಲ್ಬನೀಸ್ ಅವರನ್ನು ಅಭಿನಂದಿಸಿದ ಭಾರತದ ಪ್ರಧಾನಿ, 24 ಗಂಟೆಗಳೊಳಗೆ ಕ್ವಾಡ್​ ಶೃಂಗದಲ್ಲಿ ಭಾಗಿಯಾಗಲು ನೀವು ಇಲ್ಲಿಗೆ ಬಂದಿರುವುದು ನೀವು ಎಷ್ಟು ಬದ್ಧತೆ ಹೊಂದಿದ್ದೀರಿ ಎಂಬುದನ್ನು ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಪಾನ್​ ಪ್ರಧಾನಿ ಅವರೊಂದಿಗಿನ ಮಾತುಕತೆಯಲ್ಲಿ, ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಬಲಪಡಿಸುವ ಬಗ್ಗೆ ಇನ್ನಷ್ಟು ಮಾತು ಮುಂದುವರಿಸಲು ಎದುರು ನೋಡುತ್ತಿದ್ದೇನೆ.

ಇದನ್ನೂ ಓದಿ: ಜಪಾನ್​​ನಲ್ಲಿ ನಮೋ; ಇಂಡೋ - ಪೆಸಿಫಿಕ್ ಪ್ರದೇಶಕ್ಕೆ ಭಾರತ ಬದ್ಧ ಎಂದ ಪ್ರಧಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.