ETV Bharat / international

ಉಕ್ರೇನ್‌ಗೆ ಹಾಲಿವುಡ್ ತಾರೆ ಏಂಜಲೀನಾ ಜೋಲಿ ಭೇಟಿ.. ನಿರಾಶ್ರಿತ ಮಕ್ಕಳೊಂದಿಗೆ ಮಾತು

author img

By

Published : May 1, 2022, 2:46 PM IST

Angelina Jolie meets children in Ukrain
ಉಕ್ರೇನ್‌ಗೆ ಹಾಲಿವುಡ್‌ ನಟಿ ಏಂಜಲಿನಾ ಜೋಲಿ ಭೇಟಿ

ವಿಶ್ವಸಂಸ್ಥೆಯ ನಿರಾಶ್ರಿತ ಸಂಸ್ಥೆಯ ವಿಶೇಷ ರಾಯಭಾರಿ, ಹಾಲಿವುಡ್ ತಾರೆ ಏಂಜಲಿನಾ ಜೋಲಿ ಉಕ್ರೇನ್‌ನ ಲೀವ್‌ ನಗರಕ್ಕೆ ಭೇಟಿ ನೀಡಿದ್ದಾರೆ.

ಲೀವ್‌(ಉಕ್ರೇನ್): ರಷ್ಯಾ-ಉಕ್ರೇನ್​​ ಸಂಘರ್ಷದ ನಡುವೆ ಸೇನಾ ಪಡೆಗಳಿಂದ ಆಕ್ರಮಣಕ್ಕೆ ಒಳಗಾಗಿರುವ ಉಕ್ರೇನ್‌ನ ಲೀವ್‌ ನಗರಕ್ಕೆ ಹಾಲಿವುಡ್‌ ನಟಿ ಏಂಜಲಿನಾ ಜೋಲಿ ಭೇಟಿ ನೀಡಿದ್ದರು. ವಿಶ್ವಸಂಸ್ಥೆಯ ನಿರಾಶ್ರಿತ ಸಂಸ್ಥೆಯ ವಿಶೇಷ ರಾಯಭಾರಿ ಏಂಜಲಿನಾ ಜೋಲಿ (46), ಉಕ್ರೇನ್‌ನಲ್ಲಿ ಯುದ್ಧದಿಂದಾಗಿ ಚದುರಿ ಹೋಗಿರುವ ಜನರು ಮತ್ತು ಮಕ್ಕಳನ್ನು ಅವರು ಭೇಟಿಯಾದರು.

ಕಳೆದ ಎರಡು ತಿಂಗಳಲ್ಲಿ 1.27 ಕೋಟಿಗೂ ಹೆಚ್ಚು ಜನರು ಉಕ್ರೇನ್​ನಲ್ಲಿ ಅವರ ಮನೆಗಳನ್ನು ತೊರೆದು ವಲಸೆ ಹೋಗಿದ್ದಾರೆ. ಅಂದಾಜಿನ ಪ್ರಕಾರ, ಉಕ್ರೇನ್‌ನಲ್ಲಿ ಶೇ. 30ರಷ್ಟು ಜನರು ನೆಲೆ ಕಳೆದುಕೊಂಡಿದ್ದಾರೆ. ನಿರಾಶ್ರಿತ ಕೇಂದ್ರಗಳಲ್ಲಿ ಸ್ವಯಂ ಸೇವಕರೊಂದಿಗೆ ಜೋಲಿ ಮಾತುಕತೆ ನಡೆಸಿದ್ದಾರೆ. ಕೇಂದ್ರದಲ್ಲಿ ಕರ್ತವ್ಯದಲ್ಲಿರುವ ಮನೋವೈದ್ಯರು ನಿತ್ಯ 15 ಜನರೊಂದಿಗೆ ಮಾತನಾಡುತ್ತಾರೆ. ಅವರಲ್ಲಿ ಬಹುತೇಕರು ಎರಡು ವರ್ಷದಿಂದ 10 ವರ್ಷದೊಳಗಿನ ಮಕ್ಕಳು ಎಂದು ಸ್ವಯಂ ಸೇವಕರು ಜೋಲಿ ಅವರಿಗೆ ತಿಳಿಸಿದ್ದಾರೆ.‌

ಅವರೆಲ್ಲರೂ ಆಘಾತಕ್ಕೆ ಒಳಗಾಗಿರಬೇಕು. ಪ್ರಕ್ಷುಬ್ಧ ಪರಿಸ್ಥಿತಿಯು ಮಕ್ಕಳ ಮನಸಿನ ಮೇಲೆ ಎಂಥ ಪರಿಣಾಮ ಬೀರಬಹುದೆಂಬುದು ನನಗೆ ತಿಳಿದಿದೆ. ಅವರ ಬಳಿ ಯಾರೋ ಒಬ್ಬರು ಇರುವುದು, ಮಾತನಾಡುವುದು ಮುಖ್ಯವಾಗುತ್ತದೆ. ಅವರಿಗೆ ಅದುವೇ ಚೇತೋಹಾರಿಯಾಗುತ್ತದೆ ಎಂದು ಜೋಲಿ ಹೇಳಿದ್ದಾರೆ. ವಿಶೇಷ ರಾಯಭಾರಿಯಾಗಿರುವ ಅವರು ಕಳೆದ ತಿಂಗಳು ಯೆಮೆನ್‌ಗೆ ಭೇಟಿ ನೀಡಿದ್ದರು.

ಯುಎನ್​​ಹೆಚ್‌ಸಿಆರ್ ವರದಿ ಪ್ರಕಾರ, ಮೂರನೇ ತಿಂಗಳಿಗೆ ಕಾಲಿಟ್ಟ ರಷ್ಯಾ-ಉಕ್ರೇನ್‌ ಸಂಘರ್ಷ ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಸಿದೆ. 5 ಮಿಲಿಯನ್‌ಗಿಂತಲೂ ಹೆಚ್ಚು ಉಕ್ರೇನಿಯನ್‌ಗಳು ನೆರೆಯ ಪಾಶ್ಚಿಮಾತ್ಯ ದೇಶಗಳಿಗೆ ಪಲಾಯನ ಮಾಡಿದ್ದಾರೆ. ಏಪ್ರಿಲ್ 28 ರ ಹೊತ್ತಿಗೆ ಯುದ್ಧದಲ್ಲಿ ಸುಮಾರು 3 ಸಾವಿರ ನಾಗರಿಕರು ಸಾವನ್ನಪ್ಪಿದ್ದಾರೆ. ಅವರಲ್ಲಿ 70 ಮಕ್ಕಳು ಸೇರಿದ್ದಾರೆ.

ಇದನ್ನೂ ಓದಿ: 'ನಮ್ಮ ಭೂಮಿಯಲ್ಲಿ ನಾಶವಾಗುವುದಕ್ಕಿಂತ ನೀವು ರಷ್ಯಾದಲ್ಲಿ ಬದುಕುವುದು ಉತ್ತಮ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.