ETV Bharat / international

ಮುಂಬೈ ದಾಳಿ ಆರೋಪಿ ರಾಣಾ ಭಾರತ ಹಸ್ತಾಂತರ ವಿರುದ್ಧ ಅಮೆರಿಕ​ ಕೋರ್ಟ್‌ಗೆ ಅರ್ಜಿ

author img

By

Published : Jun 2, 2023, 2:11 PM IST

ಮುಂಬೈ ದಾಳಿಯ ಪ್ರಮುಖ ಆರೋಪಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಕೋರಿ ಭಾರತ ಸರ್ಕಾರ ಸಲ್ಲಿಸಿದ್ದ ಮನವಿಗೆ ಯುಎಸ್‌ಎ ನ್ಯಾಯಾಲಯ ಈಗಾಗಲೇ ಒಪ್ಪಿಗೆ ಸೂಚಿಸಿದೆ.

Tahawwur hussain Rana challenges US court  Rana challenges US court order on extradition  US court order on extradition to India  ಮುಂಬೈ ದಾಳಿ ಆರೋಪಿ ರಾಣಾ  ಅಮೆರಿಕ​ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ  ಮುಂಬೈ ದಾಳಿಯ ಪ್ರಮುಖ ಆರೋಪಿ ತಹವ್ವುರ್ ರಾಣಾ  ಭಾರತ ಸರ್ಕಾರ ಸಲ್ಲಿಸಿದ್ದ ಮನವಿ  ಯುಎಸ್‌ಎ ನ್ಯಾಯಾಲಯ ಒಪ್ಪಿಗೆ  ಕೆನಡಾದ ಉದ್ಯಮಿ ತಹವ್ವುರ್ ಹುಸೇನ್ ರಾಣಾ  ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆ  ಯುಎಸ್ ಡಿಸ್ಟ್ರಿಕ್ಟ್ ಕೋರ್ಟ್ ಸೆಂಟ್ರಲ್ ಡಿಸ್ಟ್ರಿಕ್ಟ್
ಮುಂಬೈ ದಾಳಿ ಆರೋಪಿ ರಾಣಾ

ವಾಷಿಂಗ್ಟನ್: ಪಾಕಿಸ್ತಾನಿ ಮೂಲದ ಕೆನಡಾ ಉದ್ಯಮಿ ತಹವ್ವುರ್ ಹುಸೇನ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ದಾರಿ ಮಾಡಿಕೊಟ್ಟ ಅಮೆರಿಕ ನ್ಯಾಯಾಲಯದ ಇತ್ತೀಚಿನ ಆದೇಶವನ್ನು ಪ್ರಶ್ನಿಸಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆಯಾಗಿದೆ. 26/11 ಮುಂಬೈ ದಾಳಿಯ ಆರೋಪಿಯನ್ನು ಭಾರತಕ್ಕೆ ಹಸ್ತಾಂತರಿಸಲು ಕ್ಯಾಲಿಫೋರ್ನಿಯಾದ ಯುಎಸ್ ಡಿಸ್ಟ್ರಿಕ್ಟ್ ಕೋರ್ಟ್ ಸೆಂಟ್ರಲ್ ಡಿಸ್ಟ್ರಿಕ್ಟ್ ಅನುಮೋದಿಸಿತ್ತು. ಈಗ ಈ ಆದೇಶದ ವಿರುದ್ಧ ಅರ್ಜಿ ಸಲ್ಲಿಕೆಯಾಗಿದೆ.

ರಾಣಾ 2008 ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಆರೋಪವನ್ನು ಹೊಂದಿದ್ದು, ಭಾರತದಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ರಾಣಾ (62) ತಮ್ಮ ವಕೀಲರ ಮೂಲಕ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿ ಸಲ್ಲಿಸುವಾಗ ಭಾರತ ಸರ್ಕಾರಕ್ಕೆ ತನ್ನ ಹಸ್ತಾಂತರವನ್ನು ಪ್ರಶ್ನಿಸಿದ್ದಾರೆ. ರಾಣಾ ಅವರ ಹಸ್ತಾಂತರವು ಯುಎಸ್-ಭಾರತದ ಹಸ್ತಾಂತರ ಒಪ್ಪಂದವನ್ನು ಎರಡು ರೀತಿಯಲ್ಲಿ ಉಲ್ಲಂಘಿಸುತ್ತದೆ ಎಂದು ಅವರ ವಕೀಲರು ವಾದಿಸಿದ್ದಾರೆ.

ಅಮೆರಿಕದಲ್ಲಿ ಈ ಪ್ರಕರಣದಲ್ಲಿ ತಪ್ಪಿತಸ್ಥ ಅಥವಾ ನಿರಪರಾಧಿ ಎಂದು ಕಂಡುಬಂದರೂ ಸಹ ಯುಎಸ್-ಭಾರತ ಒಪ್ಪಂದದ ಪ್ರಕಾರ ಆ ವ್ಯಕ್ತಿಯನ್ನು ಹಸ್ತಾಂತರಿಸಲಾಗುವುದಿಲ್ಲ. ಈ ಪ್ರಕರಣದಲ್ಲಿ ಭಾರತವು ನೀಡಿರುವ ವಿವರಗಳನ್ನು ಈಗಾಗಲೇ ಇಲಿನಾಯ್ಸ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಪ್ರಸ್ತುತಪಡಿಸಲಾದ ಪ್ರತಿಗಳು ಮತ್ತು ಸಾಕ್ಷ್ಯಗಳಿಂದ ಆತನನ್ನು ಅಪರಾಧಿ ಎಂದು ಸಾಭೀತು ಪಡಿಸುವಲ್ಲಿ ವಿಫಲವಾಗಿದೆ ಎಂದು ರಾಣಾ ಅವರ ಅರ್ಜಿಯಲ್ಲಿ ತಿಳಿಸಲಾಗಿದೆ.

ಭಾರತ ಸರ್ಕಾರದ ಹಸ್ತಾಂತರ ಕೋರಿಕೆ ಒಪ್ಪಂದದ 9.3(ಸಿ) ವಿಧಿಯನ್ನು ಪೂರೈಸಲು ವಿಫಲವಾಗಿದೆ. ನ್ಯಾಯಾಲಯವು ಹೇಬಿಯಸ್ ಕಾರ್ಪಸ್ ರಿಟ್ ಅನ್ನು ನೀಡಬೇಕು ಮತ್ತು ಹಸ್ತಾಂತರವನ್ನು ನಿರಾಕರಿಸಬೇಕು. ರಾಣಾ ಅವರನ್ನು ಬಿಡುಗಡೆ ಮಾಡುವಂತೆ ಆದೇಶಿಸಬೇಕು ಎಂದು ರಿಟ್ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

26/11 ಮುಂಬೈ ದಾಳಿಗೆ ಸಂಬಂಧಿಸಿದಂತೆ ಆರೋಪಿಗಳಲ್ಲಿ ಒಬ್ಬನಾದ ತಹವ್ವುರ್ ರಾಣಾನನ್ನು ಹಸ್ತಾಂತರಿಸಬೇಕೆಂಬ ಭಾರತದ ಮನವಿಯ ಪರವಾಗಿ ಕ್ಯಾಲಿಫೋರ್ನಿಯಾ ಜಿಲ್ಲಾ ನ್ಯಾಯಾಲಯವು ಇತ್ತೀಚೆಗೆ ತೀರ್ಪು ನೀಡಿತು. ಭಾರತ ಮತ್ತು ಅಮೆರಿಕ ನಡುವಿನ ಹಸ್ತಾಂತರ ಒಪ್ಪಂದದ ಪ್ರಕಾರ ನ್ಯಾಯಾಲಯ ಈ ಆದೇಶ ನೀಡಿತ್ತು. ಗಮನಾರ್ಹವಾಗಿ, ಜೂನ್ 10, 2020 ರಂದು, ಹಸ್ತಾಂತರಕ್ಕಾಗಿ ರಾಣಾ ಅವರನ್ನು ತಾತ್ಕಾಲಿಕವಾಗಿ ಬಂಧಿಸುವಂತೆ ಭಾರತವು ದೂರು ಸಲ್ಲಿಸಿತು. ಯುಎಸ್ ಅಧ್ಯಕ್ಷ ಜೋ ಬೈಡನ್ ಅವರ ಆಡಳಿತವು ರಾಣಾ ಅವರನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ಬೆಂಬಲಿಸಿತು ಮತ್ತು ಅನುಮೋದಿಸಿತು. ನಂತರ, ಆತನನ್ನು ಬಂಧಿಸಲಾಯಿತು. ರಾಣಾ ಪ್ರಸ್ತುತ ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಡಿಟೆನ್ಶನ್ ಸೆಂಟರ್‌ನಲ್ಲಿದ್ದಾರೆ.

ಭಾರತದಲ್ಲಿ, ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು 26 ನವೆಂಬರ್ 2008 ರ ಮುಂಬೈ ದಾಳಿಯಲ್ಲಿ ರಾಣಾ ಪಾತ್ರವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ನಡೆಸುತ್ತಿದೆ. ಪಾಕಿಸ್ತಾನಿ ಮೂಲದ ರಾಣಾ 2008 ರ ಮುಂಬೈ ದಾಳಿಗೆ ಹಣಕಾಸು ಒದಗಿಸಿದ ಆರೋಪವನ್ನೂ ಸಹ ಹೊತ್ತಿದ್ದಾರೆ. ಈ ದಾಳಿಗಳ ಸಮಯದಲ್ಲಿ ಅಜ್ಮಲ್ ಕಸಬ್ ಎಂಬ ಭಯೋತ್ಪಾದಕನನ್ನು ಜೀವಂತವಾಗಿ ಹಿಡಿಯಲಾಯಿತು. ಬಳಿಕ ಆತನನ್ನು 21 ನವೆಂಬರ್ 2012 ರಂದು ಭಾರತದಲ್ಲಿ ಗಲ್ಲಿಗೇರಿಸಲಾಯಿತು. ದಾಳಿಯ ವೇಳೆ ಉಳಿದ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದರು. ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಆರು ಅಮೆರಿಕನ್ ಪ್ರಜೆಗಳು ಸೇರಿದಂತೆ ಒಟ್ಟು 166 ಜನರು ಪ್ರಾಣ ಕಳೆದುಕೊಂಡಿದ್ದರು.

ಇದನ್ನೂ ಓದಿ: ಮುಂಬೈ ದಾಳಿ ಆರೋಪಿ ತಹವ್ವುರ್ ರಾಣಾ ಭಾರತ ಹಸ್ತಾಂತರಕ್ಕೆ ಅಮೆರಿಕ​ ಕೋರ್ಟ್‌ ಒಪ್ಪಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.