ETV Bharat / entertainment

ರಾಮೋಜಿ ಫಿಲ್ಮ್ ಸಿಟಿಯಲ್ಲಿ 'ಬುಜ್ಜಿ'ಯನ್ನು ಪರಿಚಯಿಸಿದ ಪ್ರಭಾಸ್​​​: ಯಾರಿದು? - Bujji

author img

By ETV Bharat Karnataka Team

Published : May 23, 2024, 1:42 PM IST

Kalki 2898 AD: ಜೂನ್ 27 ರಂದು ಚಿತ್ರಮಂದಿರ ಪ್ರವೇಶಿಸಲಿರುವ 'ಕಲ್ಕಿ 2898 ಎಡಿ' ಚಿತ್ರದ ರೋಬೋಟಿಕ್ ಪಾತ್ರ 'ಬುಜ್ಜಿ'ಯ ವಿಶೇಷ ವಿಡಿಯೋ ಅನಾವರಣಗೊಂಡಿದೆ.

Kalki 2898 AD poster, Prabhas
ಕಲ್ಕಿ 2898 ಎಡಿ ಪೋಸ್ಟರ್, ಪ್ರಭಾಸ್ (Instagram images)

ಈ ಸಾಲಿನ ಬಹುನಿರೀಕ್ಷಿತ ಸಿನಿಮಾ 'ಕಲ್ಕಿ 2898 ಎಡಿ'. ಬಿಡುಗಡೆಗೆ ಸಜ್ಜಾಗಿರುವ ಈ ಸಿನಿಮಾ ಈಗಾಗಲೇ ಪ್ರಚಾರ ಪ್ರಾರಂಭಿಸಿದೆ. ಒಂದಿಲ್ಲೊಂದು ಕಾರಣಗಳಿಂದ ಸಿನಿಪ್ರಿಯರ ಗಮನ ಸೆಳೆಯುತ್ತಿರುವ ಚಿತ್ರತಂಡ ಇದೀಗ 'ಬುಜ್ಜಿ'ಯನ್ನು ಪರಿಚಯಿಸುವ ಮೂಲಕ ಸದ್ದು ಮಾಡಿದೆ.

ಪ್ಯಾನ್-ಇಂಡಿಯಾ ಚಿತ್ರ 'ಕಲ್ಕಿ 2898 ಎಡಿ' ನಿರ್ಮಾಪಕರು ಫೈನಲಿ ತಮ್ಮ ವಿಶೇಷ ರೋಬೋಟ್ ಪಾತ್ರ 'ಬುಜ್ಜಿ'ಯ ವಿಡಿಯೋ ಅನಾವರಣಗೊಳಿಸಿದ್ದಾರೆ. ಹೈದರಾಬಾದ್​ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಅದ್ಧೂರಿ ಪ್ರೀ ರಿಲೀಸ್​ ಈವೆಂಟ್​ನಲ್ಲಿ ಮುಖ ಪಾತ್ರ ಭೈರವ (ಪ್ರಭಾಸ್​) ಮತ್ತು 'ಬುಜ್ಜಿ' (ರೋಬೋಟ್​) ಜೋಡಿಯ ವಿಶೇಷ ವಿಡಿಯೋ ಅನಾವರಣಗೊಳಿಸಿದ್ದಾರೆ. ಬುಜ್ಜಿಯು ನಾಗ್ ಅಶ್ವಿನ್ ಅವರ ಕಲ್ಕಿ 2898 ಎಡಿಯ ಅವಿಭಾಜ್ಯ ಅಂಗ ಅಂತಲೇ ಹೇಳಬಹುದು. ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮನೆಮಾಡಿರುವ ಈ ಹೊತ್ತಲ್ಲಿ ಬುಜ್ಜಿ ವಿಡಿಯೋ ಹೊರಬಿದ್ದಿದೆ.

ಚಿತ್ರದ ಕಥಾವಸ್ತು ವಿಶಿಷ್ಟ ಪಾತ್ರ ರೋಬೋಟ್ ಬುಜ್ಜಿಯ ಸುತ್ತ ಸುತ್ತುತ್ತದೆ. ನಟಿ ಕೀರ್ತಿ ಸುರೇಶ್ ಈ ಪಾತ್ರಕ್ಕೆ ದನಿ ನೀಡಿದ್ದಾರೆ. ಬುಜ್ಜಿಯು ಭೈರವನ ಜೊತೆಗಾರನಾಗಿ ಕಾರ್ಯನಿರ್ವಹಿಸುತ್ತದೆ. ವಿಶೇಷವಾಗಿ ವಿನ್ಯಾಸಗೊಳಿಸಿರುವ ಕಾರನ್ನು ಹೈದರಾಬಾದ್​ನ ಆರ್‌ಎಫ್‌ಸಿಯಲ್ಲಿ ಬುಧವಾರದಂದು ಅನಾವರಣಗೊಳಿಸಲಾಯಿತು. ಜೊತೆಗೆ, ಪ್ರಭಾಸ್ ಅವರು ತಮ್ಮ 'ವಿಶೇಷ ವ್ಯಕ್ತಿ'ಯಾದ ''ಬುಜ್ಜಿ''ಯನ್ನು ಪರಿಚಯಿಸುವ ಸಣ್ಣ ವಿಡಿಯೋ ಹಂಚಿಕೊಂಡರು.

ವಿಶೇಷವಾಗಿ ತಯಾರಿಸಿದ ಈ ಕಾರನ್ನು ಓಡಿಸುತ್ತಲೇ ಸೂಪರ್ ಸ್ಟಾರ್ ಪ್ರಭಾಸ್ ಕಾರ್ಯಕ್ರಮಕ್ಕೆ ಸಖತ್​ ಸ್ಟೈಲಿಶ್ ಆಗಿ ಎಂಟ್ರಿಕೊಟ್ಟರು. ಈವೆಂಟ್​ನಲ್ಲಿ ಸೇರಿದ್ದವರನ್ನು ಉದ್ದೇಶಿಸಿ ಮಾತನಾಡಿದ ಸಲಾರ್​ ಸ್ಟಾರ್, ಕಲ್ಕಿ 2898 ಎಡಿ ತಂಡಕ್ಕೆ, ಸಹ-ನಟರಿಗೆ ಧನ್ಯವಾದ ಅರ್ಪಿಸಿದರು. ಹಿರಿಯ ನಟರಾದ ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಅವರನ್ನು ವಿಶೇಷವಾಗಿ ಉಲ್ಲೇಖಿಸಿದರು. ಪ್ರಮುಖ ಪಾತ್ರಗಳನ್ನು ನಿರ್ವಹಿಸಿರುವ ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಅವರ ಬಗ್ಗೆಯೂ ಗುಣಗಾನ ಮಾಡಿದರು.

ಇದನ್ನೂ ಓದಿ: ಚಾಲೆಂಜಿಂಗ್​ ಸ್ಟಾರ್ ದರ್ಶನ್​ ನಟನೆಯ 'ಡೆವಿಲ್'​​ ಬಿಡುಗಡೆಗೆ ಮುಹೂರ್ತ ಫಿಕ್ಸ್ - Devil Release Date

ಅಮಿತಾಭ್ ಮತ್ತು ಕಮಲ್ ಹಾಸನ್ ಅಭಿನಯ ಭಾರತಕ್ಕೆ ಸ್ಫೂರ್ತಿ ನೀಡಿದೆ ಎಂದ ಪ್ರಭಾಸ್, ಇಂತಹ ಮಹಾನ್ ಕಲಾವಿದರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಅಮಿತಾಭ್​​ ಬಚ್ಚನ್ ಅವರಂತಹ ನಟ ನಮ್ಮ ದೇಶದಲ್ಲಿರುವುದಕ್ಕೆ ಹೆಮ್ಮೆಪಡುತ್ತೇನೆ. ನಾನು ಚಿಕ್ಕವನಿದ್ದಾಗ ಕಮಲ್ ಹಾಸನ್ ಸರ್ ಅವರ 'ಸಾಗರಸಂಗಮ'ವನ್ನು ನೋಡಿ, ನನ್ನ ತಾಯಿ ಬಳಿ ಇದೇ ರೀತಿಯ ಡ್ರೆಸ್ ಖರೀದಿಸಲು ಕೇಳಿಕೊಂಡಿದ್ದೆ. ಇನ್ನು ದೀಪಿಕಾ ಪಡುಕೋಣೆ ಅವರ ಜೊತೆ ಕೆಲಸ ಮಾಡಿದ್ದು, ಒಂದೊಳ್ಳೆ ಅನುಭವ ಎಂದು ತಿಳಿಸಿದರು.

ಇದನ್ನೂ ಓದಿ: ಶಾರುಖ್ ಖಾನ್​ ಆರೋಗ್ಯದಲ್ಲಿ ಚೇತರಿಕೆ, ಭಾನುವಾರ ಫೀಲ್ಡ್​​ಗೆ: ಜೂಹಿ ಚಾವ್ಲಾ - Shah Rukh Khan Health

ಈವೆಂಟ್‌ನ ದೃಶ್ಯಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಬುಜ್ಜಿ ಟೀಸರ್‌ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು, "ನೆಕ್ಸ್ಟ್ ಲೆವೆಲ್​ ಸ್ಟಫ್​​'' ಎಂದು ಬರೆದಿದ್ದಾರೆ. ಈ ಬಾರಿ ಪ್ಯಾನ್ ಇಂಡಿಯಾ ಅಲ್ಲ, ಇದು ಪ್ಯಾನ್ ವರ್ಲ್ಡ್ ಎಂದು ಮತ್ತೋರ್ವರು ಬಣ್ಣಿಸಿದ್ದಾರೆ. "ಈ ಚಿತ್ರ ಭಾರತೀಯ ಚಿತ್ರರಂಗವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ" ಎಂದು ಅಭಿಮಾನಿಯೋರ್ವರು ಅಭಿಪ್ರಾಯಪಟ್ಟಿದ್ದಾರೆ. ಮತ್ತೋರ್ವರು ಕಾಮೆಂಟ್​ ಮಾಡಿ, "ನನ್ನ ರೆಬೆಲ್ ಸ್ಟಾರ್, ಪ್ರಭಾಸ್ ಎಲ್ಲಾ ದಾಖಲೆಗಳನ್ನು ಪುಡಿಗಟ್ಟಲಿದ್ದಾರೆ'' ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.