ETV Bharat / international

ಉಕ್ರೇನ್, ರಷ್ಯಾ ಯುದ್ಧದಲ್ಲಿ ಈವರೆಗೆ 12 ಮಂದಿ ಪತ್ರಕರ್ತರು ಮೃತ

author img

By

Published : Mar 27, 2022, 12:56 PM IST

12 journalists killed in Ukraine since beginning of war
ಉಕ್ರೇನ್, ರಷ್ಯಾ ಯುದ್ಧದಲ್ಲಿ ಈವರೆಗೆ 12 ಮಂದಿ ಪತ್ರಕರ್ತರು ಮೃತ

ಈಗಾಗಲೇ ಶೆಲ್ ದಾಳಿ, ಟಿವಿ ಟವರ್‌ಗಳು ಮತ್ತು ಟಿವಿ ಮತ್ತು ರೇಡಿಯೊ ಕಂಪನಿಗಳಿಗೆ ಹಾನಿಯ ವಿಚಾರಕ್ಕೆ ಸಂಬಂಧಿಸಿದಂತೆ ಕನಿಷ್ಠ ಏಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಇನ್ಸ್ಟಿಟ್ಯೂಟ್ ಆಫ್ ಮಾಸ್ ಮೀಡಿಯಾದ ಸಹಕಾರದೊಂದಿಗೆ ಪ್ರಾಸಿಕ್ಯೂಟರ್ ಕಚೇರಿಯು ಪತ್ರಕರ್ತರ ವಿರುದ್ಧದ ಅಪರಾಧಗಳನ್ನು ವಿಚಾರಣೆ ನಡೆಸುತ್ತಿದೆ ಎಂದು ವೆನೆಡಿಕ್ಟೋವಾ ಹೇಳಿದ್ದಾರೆ..

ಕೀವ್, ಉಕ್ರೇನ್ : ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದೆ. ಫೆಬ್ರವರಿ 24ರಂದು ಯುದ್ಧ ಪ್ರಾರಂಭವಾದಾಗಿನಿಂದಲೂ ವಿವಿಧ ದೇಶಗಳಿಗೆ ಸೇರಿದ 12 ಮಂದಿ ಪತ್ರಕರ್ತರು ರಷ್ಯಾದ ದಾಳಿಯಲ್ಲಿ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಪತ್ರಕರ್ತರು ಗಾಯಗೊಂಡಿದ್ದಾರೆ. ಈ ಕುರಿತು ಉಕ್ರೇನ್‌ನ ಪ್ರಾಸಿಕ್ಯೂಟರ್ ಜನರಲ್ ಐರಿನಾ ವೆನೆಡಿಕ್ಟೋವಾ ಫೇಸ್​ಬುಕ್ ಪೋಸ್ಟ್​ನಲ್ಲಿ ಮಾಹಿತಿ ನೀಡಿದ್ದಾರೆ ಎಂದು ಉಕಯಿನ್ಸ್​ಕಾ ಪ್ರಾವ್ಡಾ ವರದಿ ಮಾಡಿದೆ.

ಪ್ರಾಸಿಕ್ಯೂಟರ್ ಜನರಲ್ ಪ್ರಕಾರ, ರಷ್ಯನ್ ಪಡೆಗಳು ಕನಿಷ್ಠ 56 ಮಾಧ್ಯಮಗಳ ಪ್ರತಿನಿಧಿಗಳ ವಿರುದ್ಧ ಅಪರಾಧಗಳನ್ನು ಮಾಡಿದ್ದಾರೆ ಎಂದು ಯೂನಿಫೈಡ್ ರಿಜಿಸ್ಟರ್ ಆಫ್ ಪ್ರಿ-ಟ್ರಯಲ್ ಇನ್ವೆಸ್ಟಿಗೇಷನ್ಸ್ ಹೇಳಿದೆ. 56 ಮಾಧ್ಯಮ ಪ್ರತಿನಿಧಿಗಳು 15 ದೇಶಗಳಿಗೆ ಸಂಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. 15 ಮಂದಿಯಲ್ಲಿ ನಾಲ್ವರು ಬ್ರಿಟನ್​ನವರು ಮತ್ತು ಅಮೆರಿಕ, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಯುನೈಟೆಡ್ ಅರಬ್ ಎಮಿರೇಟ್​​ನಿಂದ ತಲಾ ಇಬ್ಬರು, ಸ್ವಿಟ್ಜರ್​ಲೆಂಡ್​​ನಿಂದ ಬಂದ ಓರ್ವ ಪತ್ರಕರ್ತ ಸೇರಿದ್ದಾನೆ ಎಂದು ತಿಳಿದು ಬಂದಿದೆ.

ಶುಕ್ರವಾರ, ಚೆರ್ನಿಹಿವ್ ನಗರದ ಮೇಲೆ ಬಾಂಬ್ ದಾಳಿ ನಡೆಸಲಾಗಿದ್ದು, ಈ ವೇಳೆ ವರದಿ ಮಾಡುತ್ತಿದ್ದ ಉಕ್ರೇನ್​ನ 1+1 ಟಿವಿ ಮತ್ತು ಟರ್ಕಿಯ ಟಿಆರ್‌ಟಿ ವರ್ಲ್ಡ್ ಟಿವಿ ಚಾನೆಲ್‌ಗಳ ಕಾರು ಹಾನಿಗಳಿಗೆ ಒಳಗಾಗಿವೆ. ಈ ವೇಳೆ ವರದಿಗಾರರಾದ ಆ್ಯಂಡ್ರಿ ತ್ಸಾಪ್ಲಿಯೆಂಕೊ ಸಣ್ಣಪುಟ್ಟ ಗಾಯಕ್ಕೆ ಒಳಗಾಗಿದ್ದಾರೆ. ರಷ್ಯಾದ ಪಡೆಗಳು ಯುದ್ಧದ ಕಾನೂನುಗಳನ್ನು ಉಲ್ಲಂಘಿಸುತ್ತಿವೆ ಎಂದು ಆರೋಪಿಸಲಾಗಿದೆ.

ಈಗಾಗಲೇ ಶೆಲ್ ದಾಳಿ, ಟಿವಿ ಟವರ್‌ಗಳು ಮತ್ತು ಟಿವಿ ಮತ್ತು ರೇಡಿಯೊ ಕಂಪನಿಗಳಿಗೆ ಹಾನಿಯ ವಿಚಾರಕ್ಕೆ ಸಂಬಂಧಿಸಿದಂತೆ ಕನಿಷ್ಠ ಏಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಇನ್ಸ್ಟಿಟ್ಯೂಟ್ ಆಫ್ ಮಾಸ್ ಮೀಡಿಯಾದ ಸಹಕಾರದೊಂದಿಗೆ ಪ್ರಾಸಿಕ್ಯೂಟರ್ ಕಚೇರಿಯು ಪತ್ರಕರ್ತರ ವಿರುದ್ಧದ ಅಪರಾಧಗಳನ್ನು ವಿಚಾರಣೆ ನಡೆಸುತ್ತಿದೆ ಎಂದು ವೆನೆಡಿಕ್ಟೋವಾ ಹೇಳಿದ್ದಾರೆ.

ಇದನ್ನೂ ಓದಿ: ಅಮೆರಿಕ ಅಧ್ಯಕ್ಷರ ಪೊಲೆಂಡ್‌ ಭೇಟಿ: ಉಕ್ರೇನ್​ನ ಎಲ್ವಿವ್ ನಗರದ ಮೇಲೆ ರಷ್ಯಾ ರಾಕೆಟ್ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.