ETV Bharat / international

ಹೊಸ ವ್ಯಾಪಾರ ನಿಯಮ: ಯುರೋಪಿಯನ್​ ಒಕ್ಕೂಟ, ಬ್ರಿಟನ್​ ಮಧ್ಯೆ ಟ್ರೇಡ್​ ವಾರ್! ​

author img

By

Published : Mar 4, 2021, 10:49 AM IST

EU and Britain clash, EU and Britain clash again in latest post, European Union, European Union news, trade rule, trade rule news, ಯುರೋಪಿಯನ್ ಯೂನಿಯನ್ ಮತ್ತು ಬ್ರಿಟನ್​ ಮಧ್ಯೆ ವಾಗ್ವಾದ, ಹೊಸ ನಿಯಮದ ಹಿನ್ನೆಲೆ ಇಯು ಮತ್ತು ಬ್ರಿಟನ್​ ಮಧ್ಯೆ ವಾಗ್ವಾದ, ಯುರೋಪಿಯನ್ ಯೂನಿಯನ್, ಯುರೋಪಿಯನ್ ಯೂನಿಯನ್ ಸುದ್ದಿ, ವ್ಯಾಪಾರ ನಿಯಮ, ವ್ಯಾಪಾರ ನಿಯಮ ಸುದ್ದಿ,
ಹೊಸ ವ್ಯಾಪಾರ ನಿಯಮ

ಹೊಸ ವ್ಯಾಪಾರ ನಿಯಮದ ಹಿನ್ನೆಲೆ ಯುರೋಪಿಯನ್​ ಒಕ್ಕೂಟ ಮತ್ತು ಬ್ರಿಟನ್​ ಮಧ್ಯೆ ಬೂದಿ ಮುಚ್ಚಿದ ಕೆಂಡದಂತ ಸ್ಥಿತಿ ನಿರ್ಮಾಣವಾಗಿದೆ.

ಬ್ರಸೆಲ್ಸ್: ವ್ಯಾಪಾರ ನಿಯಮಗಳ ಬಗ್ಗೆ ಬ್ರಿಟನ್‌ನ "ಏಕಪಕ್ಷೀಯ ಕ್ರಮ" ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸುತ್ತಿದೆ ಮತ್ತು ಬ್ರೆಕ್ಸಿಟ್ ನಂತರ ಎರಡು ಕಡೆ ಉದ್ವಿಗ್ನತೆ ಉಲ್ಬಣಗೊಳ್ಳುತ್ತಿದ್ದು, ಕಾನೂನು ಕ್ರಮಕ್ಕೆ ಬೆದರಿಕೆ ಹಾಕುತ್ತಿದೆ ಎಂದು ಯುರೋಪಿಯನ್ ಯೂನಿಯನ್ ಆರೋಪಿಸಿದೆ.

ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ ನಡುವೆ ಸರಕು ಸಾಗಣೆ ಚೆಕ್‌ಗಳ ಮೇಲಿನ ಅವಧಿಯನ್ನು ಏಕಪಕ್ಷೀಯವಾಗಿ ವಿಸ್ತರಿಸುವ ಯುಕೆ ನಿರ್ಧಾರವು ಉತ್ತರ ಐರ್ಲೆಂಡ್ ಪ್ರೋಟೋಕಾಲ್ ಎಂದು ಕರೆದಿದೆ ಅಂತಾ ಆಯೋಗದ ಉಪಾಧ್ಯಕ್ಷ ಮಾರೊ ಸೆಫ್ಕೊವಿಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬ್ರೆಕ್ಸಿಟ್ ನಂತರ ಉತ್ತರ ಐರ್ಲೆಂಡ್ ಮತ್ತು ಐರಿಶ್ ಗಣರಾಜ್ಯದ ನಡುವೆ ಮುಕ್ತ ಗಡಿ ಖಚಿತಪಡಿಸಿಕೊಳ್ಳಲು ಈ ಶಿಷ್ಟಾಚಾರ ವಿನ್ಯಾಸಗೊಳಿಸಲಾಗಿದೆ. ಇದು ಎರಡನೇ ಬಾರಿಗೆ ಯುಕೆ ಸರ್ಕಾರವು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸಲು ಸಜ್ಜಾಗಿದೆ ಎಂದು ಸೆಫ್ಕೊವಿಕ್ ಹೇಳಿದ್ದಾರೆ.

ಉತ್ತರ ಐರ್ಲೆಂಡ್‌ಗೆ ಪ್ರವೇಶಿಸುವ ಕೃಷಿ - ಆಹಾರದ ತಪಾಸಣೆಗಾಗಿ ಅಕ್ಟೋಬರ್ ಅಂತ್ಯದವರೆಗೆ ವಿಸ್ತರಿಸುವ ಬ್ರಿಟಿಷ್ ಸರ್ಕಾರದ ನಿರ್ಧಾರದಿಂದಾಗಿ ಯರೋಪ್​ ಒಕ್ಕೂಟದ ಕೋಪಕ್ಕೆ ಕಾರಣವಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಯುಕೆ 27 ರಾಷ್ಟ್ರಗಳ ಒಕ್ಕೂಟವನ್ನು ಅಸಮಾಧಾನಗೊಳಿಸಿತ್ತು. ನಂತರ ಉತ್ತರ ಐರ್ಲೆಂಡ್‌ಗೆ ಸಂಬಂಧಿಸಿದ ಬ್ರೆಕ್ಸಿಟ್ ವಾಪಸಾತಿ ಒಪ್ಪಂದದ ಭಾಗವನ್ನು ಅತಿಕ್ರಮಿಸುವ ಅಧಿಕಾರವನ್ನು ನೀಡಿತ್ತು. ಈಗ ಮತ್ತೆ ಬ್ರಿಟನ್​ ಖ್ಯಾತೆ ತೆಗೆದಿದೆ.

ಈ ವರ್ಷದ ಆರಂಭದಲ್ಲಿ ಉತ್ತರ ಐರ್ಲೆಂಡ್‌ಗೆ ಕೊರೊನಾವೈರಸ್ ಲಸಿಕೆಗಳನ್ನು ಸಾಗಿಸುವುದನ್ನು ನಿಷೇಧಿಸುವುದಾಗಿ ಇಯು ಬೆದರಿಕೆ ಹಾಕಿದಾಗ ಉತ್ತರ ಐರ್ಲೆಂಡ್‌ನ ಸ್ಥಿತಿ ಸೂಕ್ಷ್ಮತೆ ಬಗ್ಗೆ ಒತ್ತಿ ಹೇಳಲಾಗಿತ್ತು.

ಇಯು ಸಂಬಂಧಗಳಿಗೆ ಈಗ ಜವಾಬ್ದಾರರಾಗಿರುವ ಮಾಜಿ ಮುಖ್ಯ ಬ್ರೆಕ್ಸಿಟ್ ಸಮಾಲೋಚಕರಾದ ಕ್ಯಾಬಿನೆಟ್ ಮಂತ್ರಿ ಡೇವಿಡ್ ಫ್ರಾಸ್ಟ್ ಅವರೊಂದಿಗೆ ಸೆಫ್ಕೊವಿಕ್ ಬುಧವಾರ ಚರ್ಚೆ ನಡೆಸಿದರು. ಚರ್ಚೆ ಬಳಿಕ ಮಾತನಾಡಿದ ಲಾರ್ಡ್ ಫ್ರಾಸ್ಟ್, ಈ ವಾರದ ಆರಂಭದಲ್ಲಿ ಆಯೋಗಕ್ಕೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಈಗಾಗಲೇ ಅಧಿಸೂಚನೆ ಸಹ ಹೊರಡಿಸಲಾಗಿದೆ. ಆದಾಗ್ಯೂ ಈ ಕ್ರಮಗಳು ತಾತ್ಕಾಲಿಕ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಸದ್ಯ ಯುರೋಪಿಯನ್​ ಒಕ್ಕೂಟ ಮತ್ತು ಬ್ರಿಟನ್​ ಮಧ್ಯೆ ಟ್ರೇಡ್​ ವಾರ್​ ನಡೆಯುತ್ತಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.