ETV Bharat / international

ಬಿಟ್ ಕಾಯಿನ್ ಹಗರಣವನ್ನು ಬಳಸಿ ಟ್ವಿಟರ್ ಹ್ಯಾಕ್ ಮಾಡಿದ್ದ ಮೂವರ ವಿರುದ್ಧ ಪ್ರಕರಣ

author img

By

Published : Aug 1, 2020, 2:38 PM IST

ಬರಾಕ್ ಒಬಾಮ, ಬಿಲ್ ಗೇಟ್ಸ್, ಜೆಫ್ ಬೆಜೋಸ್ ಮತ್ತು ಎಲೋನ್ ಮಸ್ಕ್ ಸೇರಿದಂತೆ 130 ಉನ್ನತ ಬಳಕೆದಾರರ ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡಿದ್ದ ಮೂವರ ವಿರುದ್ಧ ಕೇಸ್‌ ದಾಖಲು..

ಸ್ಯಾನ್ ಫ್ರಾನ್ಸಿಸ್ಕೋ : ಯುಕೆಯ 19 ವರ್ಷದ ಮೇಸನ್ ಶೆಪರ್ಡ್ ವಿರುದ್ಧ ಕ್ಯಾಲಿಫೋರ್ನಿಯಾದ ಉತ್ತರ ಜಿಲ್ಲೆಯಲ್ಲಿ ಕ್ರಿಮಿನಲ್ ದೂರಿನಡಿ ವೈರ್ ಫ್ರಾಡ್ ಮಾಡಲು ಸಂಚು, ಮನಿ ಲಾಂಡ್‌ರಿಂಗ್ ಸಂಚು ಮತ್ತು ಸಂರಕ್ಷಿತ ಕಂಪ್ಯೂಟರ್​ನೊಳಗೆ ಉದ್ದೇಶಪೂರ್ವಕವಾಗಿ ಆ್ಯಕ್ಸೆಸ್ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ.

tech world- twitter hack justice
ಟ್ವಿಟರ್ ಹ್ಯಾಕ್ ಮಾಡಿದ್ದವರ ವಿರುದ್ಧ ಪ್ರಕರಣ ದಾಖಲು

ಫ್ಲೋರಿಡಾದ ಒರ್ಲ್ಯಾಂಡೊದ ನಿಮಾ ಫಜೇಲಿ ಮೇಲೆ ಕ್ಯಾಲಿಫೋರ್ನಿಯಾದ ಉತ್ತರ ಜಿಲ್ಲೆಯಲ್ಲಿ ಕ್ರಿಮಿನಲ್ ದೂರಿನ ಆರೋಪಿತರ ಸುರಕ್ಷತೆಗೆ ಸಹಾಯ ಮಾಡಿದ ಹಾಗೂ ಕಂಪ್ಯೂಟರ್‌ನ ಉದ್ದೇಶಪೂರ್ವಕ ಆ್ಯಕ್ಸೆಸ್​ಗೆ ಸಹಾಯ ಮಾಡಿದ ಆರೋಪ ಹೊರಿಸಲಾಗಿದೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.

tech world- twitter hack justice
ಟ್ವಿಟರ್ ಹ್ಯಾಕ್ ಮಾಡಿದ್ದವರ ವಿರುದ್ಧ ಪ್ರಕರಣ ದಾಖಲು

ಮೂರನೇ ಅಪರಾಧಿ ಬಾಲಾಪರಾಧಿಯಾಗಿದ್ದಾನೆ. ಬಾಲಾಪರಾಧಿಗಳ ಗುರುತನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದು ಹೇಳಿಕೆ ತಿಳಿಸಿದೆ.

tech world- twitter hack justice
ಟ್ವಿಟರ್ ಹ್ಯಾಕ್ ಮಾಡಿದ್ದವರ ವಿರುದ್ಧ ಪ್ರಕರಣ ದಾಖಲು

ಕ್ರಿಪ್ಟೋಕರೆನ್ಸಿ ಹಗರಣದಲ್ಲಿ ಸೆಲೆಬ್ರಿಟಿಗಳು, ರಾಜಕಾರಣಿಗಳು ಮತ್ತು ವ್ಯವಹಾರಗಳ ಬೃಹತ್ ಟ್ವಿಟರ್ ಖಾತೆಗಳು ಹ್ಯಾಕಿಂಗ್​ಗೆ ಒಳಗಾಗಿವೆ ಎಂದು ಟ್ವಿಟರ್ ನಿನ್ನೆ ಬಹಿರಂಗಪಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.