ETV Bharat / international

ಸ್ಫೋಟಕ ವಸ್ತುಗಳು ಸಾಗಿಸುತ್ತಿದ್ದ ಲಾರಿಗೆ ಬೈಕ್​ ಡಿಕ್ಕಿ.. ನೂರಾರು ಮನೆಗಳು ನಾಶ, 17 ಮಂದಿ ಸಾವು

author img

By

Published : Jan 21, 2022, 6:46 AM IST

ಆಫ್ರಿಕಾದ ಘಾನಾದಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ 17 ಮಂದಿ ಸಾವನ್ನಪ್ಪಿದ್ದು, ಹತ್ತಾರು ಮಂದಿ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ. ಕೂಡಲೇ ವೈದ್ಯಕೀಯ ಮತ್ತು ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಹಾರ ಕ್ರಮಗಳನ್ನು ಕೈಗೊಂಡಿವೆ. ಹಲವಾರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.

huge explosion in ghana, Ghana gold mines, Ghana explosion news, Ghana tragedy news, Ghana news, ಘನಾದಲ್ಲಿ ಭಾರೀ ಪ್ರಮಾಣದಲ್ಲಿ ಸ್ಫೋಟ, ಘನಾ ಚಿನ್ನದ ಗಣಿ, ಘನಾ ಸ್ಫೋಟ ಸುದ್ದಿ, ಘನಾ ದುರಂತ ಸುದ್ದಿ, ಘನಾ ಸುದ್ದಿ,
ಸ್ಫೋಟಕ ವಸ್ತುಗಳು ಸಾಗಿಸುತ್ತಿದ್ದ ಲಾರಿಗೆ ಬೈಕ್​ ಡಿಕ್ಕಿ

ಘಾನಾ: ಘಾನಾದ ಪಶ್ಚಿಮದಲ್ಲಿರುವ ಬೊಗೊಸೊ ಪಟ್ಟಣದಲ್ಲಿ ಭಾರಿ ಪ್ರಮಾಣದ ಸ್ಫೋಟ ಸಂಭವಿಸಿದೆ. ಚಿನ್ನದ ಗಣಿಗೆ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಟ್ರಕ್‌ಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ. ಇದರಿಂದ ದ್ವಿಚಕ್ರ ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಲಾರಿಗೂ ವ್ಯಾಪಿಸಿದೆ.

  • Another Video An explosion in #Ghana's rural Western Region on Thursday razed hundreds of buildings and killed an unknown number of residents when a truck carrying explosives to a gold mine collided with a motorcycle: pic.twitter.com/DbJTWtsPDb

    — Journalist Siraj Noorani (@sirajnoorani) January 20, 2022 " class="align-text-top noRightClick twitterSection" data=" ">

ಬೆಂಕಿ ಹರಡಿದ ನಂತರ ದೊಡ್ಡ ಪ್ರಮಾಣದ ಸ್ಫೋಟ ಸಂಭವಿಸಿದೆ. ಸ್ಫೋಟದ ಸಮೀಪ ನೂರಾರು ಮನೆಗಳು ನಾಶವಾಗಿವೆ. ಇದುವರೆಗೆ ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ಖಚಿತವಾಗಿ ಮಾಹಿತಿ ನೀಡಿಲ್ಲ. ಆದರೆ, ಸ್ಥಳೀಯ ಮಾಧ್ಯಮಗಳ ಪ್ರಕಾರ 17 ಮಂದಿ ಸಾವನ್ನಪ್ಪಿದ್ದು, ಹತ್ತಾರ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿ ಮಾಡಿವೆ.

  • An explosion in #Ghana's rural Western Region on Thursday razed hundreds of buildings and killed an unknown number of residents when a truck carrying explosives to a gold mine collided with a motorcycle: pic.twitter.com/PHCjZnp9R4

    — Journalist Siraj Noorani (@sirajnoorani) January 20, 2022 " class="align-text-top noRightClick twitterSection" data=" ">

ಇನ್ನೂ ಸ್ಫೋಟದ ನಂತರದ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೊಂದು ಅತ್ಯಂತ ನೋವಿನ ಹಾಗೂ ದುರದೃಷ್ಟಕರ ಘಟನೆ ಎಂದು ಕಮಾಂಡ್ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಓದಿ: 1200 ಕೋಟಿ ರೂ. ವೆಚ್ಚದಲ್ಲಿ ‘ಶಿರಾಡಿ ಘಾಟ್​ ರಸ್ತೆ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಅನುಮೋದನೆ: ಸಿಎಂ ಬೊಮ್ಮಾಯಿ

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.