ETV Bharat / entertainment

ಪೃಥ್ವಿರಾಜ್​ ಸುಕುಮಾರನ್​ ಹುಟ್ಟುಹಬ್ಬ: ಫಸ್ಟ್​ ಲುಕ್​ ಪೋಸ್ಟರ್​ನೊಂದಿಗೆ ಶುಭಕೋರಿದ 'ಸಲಾರ್​' ಚಿತ್ರತಂಡ

author img

By ETV Bharat Karnataka Team

Published : Oct 16, 2023, 5:48 PM IST

ನಟ ಪೃಥ್ವಿರಾಜ್​ ಸುಕುಮಾರನ್ ಹುಟ್ಟುಹಬ್ಬದ ಹಿನ್ನೆಲೆ 'ಸಲಾರ್​' ಚಿತ್ರದಿಂದ ಅವರ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆಯಾಗಿದೆ.

'Wishing Vardharaja Mannaar The King a majestic birthday': Team Salaar drops Prithviraj Sukumaran's poster on his special day
ಪೃಥ್ವಿರಾಜ್​ ಸುಕುಮಾರನ್​ ಹುಟ್ಟುಹಬ್ಬ: ಫಸ್ಟ್​ ಲುಕ್​ ಪೋಸ್ಟರ್​ನೊಂದಿಗೆ ಶುಭಕೋರಿದ 'ಸಲಾರ್​' ಚಿತ್ರತಂಡ

ಖ್ಯಾತ ಮಲಯಾಳಂ ನಟ ಪೃಥ್ವಿರಾಜ್​ ಸುಕುಮಾರನ್​ 40ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ಸಲಾರ್​'. 'ಕೆಜಿಎಫ್​' ಖ್ಯಾತಿಯ ನಿರ್ದೇಶಕ ಪ್ರಶಾಂತ್​ ನೀಲ್​ ಹಾಗೂ ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ಕಾಂಬೋದಲ್ಲಿ ತಯಾರಾಗುತ್ತಿರುವ ಚಿತ್ರ. ಇಂದು ಪೃಥ್ವಿರಾಜ್​ ಜನ್ಮದಿನದ ನಿಮಿತ್ತ 'ಸಲಾರ್​' ಚಿತ್ರತಂಡ ಅವರ ಫಸ್ಟ್​ ಲುಕ್​ ರಿವೀಲ್​ ಮಾಡಿದೆ. ವಿಲನ್​ ಲುಕ್​ನಲ್ಲಿ ಮಾಲಿವುಡ್​ ನಟ ಕಾಣಿಸಿಕೊಂಡಿದ್ದಾರೆ.

ಆ್ಯಕ್ಷನ್​ ಥ್ರಿಲ್ಲರ್​ ಚಿತ್ರದಲ್ಲಿ ಪೃಥ್ವಿರಾಜ್​ ಸುಕುಮಾರನ್​ ಅವರು ವರ್ಧರಾಜ ಮನ್ನಾರ್​ ಪಾತ್ರವನ್ನು ನಿರ್ವಹಿಸಲಿದ್ದಾರೆ. ಎಕ್ಸ್​​ನಲ್ಲಿ ನಟನಿಗೆ ಜನ್ಮದಿನದ ಶುಭಾಶಯ ಕೋರಲು ಫಸ್ಟ್​ ಲುಕ್​ ಪೋಸ್ಟರ್​ ಹಂಚಿಕೊಂಡಿರುವ ಸಲಾರ್​ ಚಿತ್ರತಂಡ, "ವರ್ಧರಾಜ ಮನ್ನಾರ್, ದಿ ಕಿಂಗ್.. ಪೃಥ್ವಿರಾಜ್​ ಸುಕುಮಾರನ್​ಗೆ ಜನ್ಮದಿನದ ಶುಭಾಶಯಗಳು​" ಎಂದು ಬರೆದುಕೊಂಡಿದೆ. ಫಸ್ಟ್​ ಲುಕ್​ ಪೋಸ್ಟರ್​ನಲ್ಲಿ ಭಯಾನಕ ನೋಟದಲ್ಲಿ ಪೃಥ್ವಿ ಕಂಡಿದ್ದಾರೆ.

'ಸಲಾರ್​' ಚಿತ್ರತಂಡದ ಈ ವಿಶೇಷ ಶುಭಾಶಯಕ್ಕೆ ಧನ್ಯವಾದ ತಿಳಿಸಲು ಪೋಸ್ಟರ್​ ಹಂಚಿಕೊಂಡಿರುವ ಪೃಥ್ವಿರಾಜ್​, "ಹೊಂಬಾಳೆ ಫಿಲ್ಮ್ಸ್​, ಪ್ರಶಾಂತ್​ ನೀಲ್​, ಪ್ರಭಾಸ್​ ಹಾಗೂ ಇಡೀ ಸಲಾರ್ ಚಿತ್ರತಂಡಕ್ಕೆ ಧನ್ಯವಾದಗಳು. ಇಡೀ ಜಗತ್ತು ಈ ಮಹಾಕಾವ್ಯ ನೋಡಲು ಇನ್ನಷ್ಟು ಸಮಯ ಕಾಯಲು ಸಾಧ್ಯವಿಲ್ಲ" ಎಂದು ಬರೆದುಕೊಂಡಿದ್ದಾರೆ. ​

ಇದನ್ನೂ ಓದಿ: Salaar VS Dunki: ಒಂದೇ ದಿನ ಶಾರುಖ್​​ - ಪ್ರಭಾಸ್ ಸಿನಿಮಾ ರಿಲೀಸ್​​; ಬಾಕ್ಸ್ ಆಫೀಸ್​ ಪೈಪೋಟಿ ಪಕ್ಕಾ!

ಬಿಗ್​ ಬಜೆಟ್​ ಸಿನಿಮಾ.. 'ಸಲಾರ್​' ಚಿತ್ರ ಬಿಗ್​ ಬಜೆಟ್​ ಮತ್ತು ಬಿಗ್​ ಸ್ಟಾರ್​ ಕಾಸ್ಟ್​ ಮೂಲಕ ಗಮನ ಸೆಳೆಯುತ್ತಿದೆ. ಬಹುಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್​ನ ವಿಜಯ್​ ಕಿರಗಂದೂರ್​ ನಿರ್ಮಿಸಿದ್ದಾರೆ. ದೊಡ್ಡ ತಾರಾಗಣ ಇರುವ ಚಿತ್ರದಲ್ಲಿ ಪ್ರಭಾಸ್​ಗೆ ನಾಯಕಿಯಾಗಿ ಶ್ರುತಿ ಹಾಸನ್​ ನಟಿಸಿದ್ದು, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ.

ಕೆಜಿಎಫ್​ ಚಿತ್ರಗಳಿಗೆ ಕೆಲಸ ಮಾಡಿದ್ದ ತಾಂತ್ರಿಕ ತಂಡವೇ ಈ ಚಿತ್ರಕ್ಕೂ ಕೆಲಸ ಮಾಡಿದೆ. ರವಿ ಬಸ್ರೂರು ಸಂಗೀತ, ಭುವನ್​ ಗೌಡ ಛಾಯಾಗ್ರಹಣ, ಶಿವಕುಮಾರ್​ ಅವರ ಕಲಾ ನಿರ್ದೇಶನವಿದೆ. ಚಿತ್ರವನ್ನು ಈ ವರ್ಷದ ಏಪ್ರಿಲ್​ 14ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಕೋವಿಡ್​ 19ನಿಂದಾಗಿ ನಿರೀಕ್ಷೆಗಿಂತ ಹೆಚ್ಚಿನ ಸಮಯ ತೆಗೆದುಕೊಂಡ ಕಾರಣ ವಿಳಂಬವಾಯಿತು. ಬಳಿಕ ಈ ವರ್ಷ ಸೆಪ್ಟೆಂಬರ್ 28ರಂದು ರಿಲೀಸ್​ ಮಾಡಲು ಯೋಜಿಸಲಾಗಿತ್ತು. ಆದರೆ, ಕೆಲವು ಕಾರಣಾಂತರಗಳಿಂದ ಸಿನಿಮಾವು ಈ ವರ್ಷದ ಕೊನೆಯಲ್ಲಿ ಡಿಸೆಂಬರ್​ 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ​

ಡಂಕಿ Vs ಸಲಾರ್​: ಭಾರತೀಯ ಚಿತ್ರರಂಗದ ಈ ವರ್ಷದ ಎರಡು ಬಹುನಿರೀಕ್ಷಿತ ಸಿನಿಮಾಗಳೆಂದರೆ 'ಸಲಾರ್'​ ಮತ್ತು 'ಡಂಕಿ'. ಪ್ರಶಾಂತ್​ ನೀಲ್​ ನಿರ್ದೇಶಿಸಿ, ಪ್ರಭಾಸ್​ ನಟಿಸಿರುವ 'ಸಲಾರ್'​ ಮತ್ತು ರಾಜ್​ಕುಮಾರ್​ ಹಿರಾನಿ ನಿರ್ದೇಶನದ, ಶಾರುಖ್​ ಖಾನ್​ ನಟನೆಯ 'ಡಂಕಿ' ಡಿಸೆಂಬರ್​ 22ರಂದು ಒಮ್ಮೆಲೇ ತೆರೆಗಪ್ಪಳಿಸಲಿದೆ. ಈ ಎರಡು ಸಿನಿಮಾಗಳ ಮಧ್ಯೆ ಭಾರಿ ಪೈಪೋಟಿ ಏರ್ಪಡುವುದಂತೂ ಪಕ್ಕಾ.

ಇದನ್ನೂ ಓದಿ: ನಟ ಪ್ರಭಾಸ್ ಇನ್​ಸ್ಟಾಗ್ರಾಮ್​ ಖಾತೆ ಮಾಯ, ಫ್ಯಾನ್ಸ್​ಗೆ ಶಾಕ್-ಇದು 'ಸಲಾರ್'​ ಪ್ರಚಾರದ ಭಾಗವೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.