ETV Bharat / entertainment

'ಆದಿಪುರುಷ್​' ವೀಕ್ಷಿಸಲು ಥಿಯೇಟರ್​ಗೆ ಬಂದ ಹನುಮಂತ..ವಿಡಿಯೋ ವೈರಲ್​

author img

By

Published : Jun 16, 2023, 12:35 PM IST

Viral Video: 'ಆದಿಪುರುಷ್​' ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದ ಚಿತ್ರಮಂದಿರದಲ್ಲಿ ಮಂಗವೊಂದು ಕಾಣಿಸಿಕೊಂಡಿದೆ. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

Adipurush
ಆದಿಪುರುಷ್

2023ರ ಬಹುನಿರೀಕ್ಷಿತ 'ಆದಿಪುರುಷ್'​ ಚಿತ್ರ ಇಂದು ಅದ್ದೂರಿಯಾಗಿ ಪ್ರಪಂಚದಾದ್ಯಂತ ಬಿಡುಗಡೆಯಾಗಿದೆ. ಸಿನಿಮಾದ ಮುಂಗಡ ಟಿಕೆಟ್​ ಬುಕ್ಕಿಂಗ್​ಗೂ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದ್ದರಿಂದ, ದಾಖಲೆಯ ಟಿಕೆಟ್​ಗಳು​ ಮಾರಾಟವಾಗಿದೆ. ಹೀಗಾಗಿ ಇಂದಿನಿಂದ ಥಿಯೇಟರ್​ಗಳು ಹೌಸ್​ ಫುಲ್​ ಆಗಲಿವೆ. ಭಾರತದಾದ್ಯಂತ ಇಂದು 7,000 ಸ್ಕ್ರೀನ್​ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಈ ವೇಳೆ, ಸಿನಿ ಪ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸಲು ಕೋತಿಯೊಂದು ಥಿಯೇಟರ್​ಗೆ ಪ್ರವೇಶಿಸಿದೆ. ಸದ್ಯ ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

  • Hanuman Ji watching 🥹🤲🏻❤️

    absolutely correct!! Lord Hanuman resides at each and every corner of the universe where SHRI RAM KATHA is told!!
    Jai shree ram 🙏 #Adipurush #Prabhas pic.twitter.com/o9H9QfeNZY

    — 𝘾𝙝𝙖𝙧𝙪 (@Charanyaa007) June 16, 2023 " class="align-text-top noRightClick twitterSection" data=" ">

ಸಾಮಾಜಿಕ ಬಳಕೆದಾರರೊಬ್ಬರು ಹಂಚಿಕೊಂಡ ವಿಡಿಯೋದಲ್ಲಿ, ಕೋತಿಯೊಂದು ಕಿಟಕಿಯಿಂದ ಇಣುಕಿ ಆದಿಪುರುಷ್​ ಸಿನಿಮಾವನ್ನು ವೀಕ್ಷಿಸುತ್ತಿರುವುದು ಕಂಡು ಬಂದಿದೆ. ಈ ವೇಳೆ ಮಂಗನನ್ನು ಕಂಡು ಪ್ರೇಕ್ಷಕರು ಜೋರು ಬೊಬ್ಬೆ ಹೊಡೆದಿದ್ದಾರೆ. ಆದರೆ, ಕೆಲವರು ಜೈ ಶ್ರೀರಾಮ್​ ಎಂದು ಹಾಡನ್ನು ಹಾಡಿದ್ದಾರೆ. ಸಾಕ್ಷಾತ್​ ಹನುಮಂತನೇ ಆದಿಪುರುಷ್​ ಸಿನಿಮಾವನ್ನು ವೀಕ್ಷಿಸಲು ಬಂದಿರುವುದಾಗಿ ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

ಈಗಾಗಲೇ ಟಿಕೆಟ್ ಮಾರಾಟದ ವೇಳೆ ಚಿತ್ರತಂಡ ಮಹತ್ವದ ನಿರ್ಧಾರವನ್ನು ಕೈಗೊಂಡಿತ್ತು. ರಾಮಾಯಣ ಪಾರಾಯಣ ನಡೆಯುವ ಸ್ಥಳಕ್ಕೆ ಹನುಮಂತ ದೇವರು ಬರುತ್ತಾನೆ ಎಂಬ ನಂಬಿಕೆಯನ್ನು ಗೌರವಿಸಿ, ಚಿತ್ರ ಪ್ರದರ್ಶನಗೊಳ್ಳುವ ಪ್ರತಿ ಥಿಯೇಟರ್‌ನಲ್ಲಿ ಹನುಮಂತ ದೇವರಿಗೆ ಆಸನವನ್ನು ಮೀಸಲಿಡಲಾಗುವುದು ಎಂದು ಘೋಷಿಸಲಾಗಿತ್ತು. ಬಹುಶಃ ಈ ನಿರ್ಧಾರ ಸಾರ್ಥಕವಾದಂತಿದೆ. 'ಹನುಮಂತ ಬಂದು ಆದಿಪುರುಷ್​ಗೆ ಆಶೀರ್ವಾದ ಮಾಡಿದ್ದಾನೆ' ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಇದನ್ನೂ ಓದಿ: Adipurush: 24 ಗಂಟೆಯಲ್ಲಿ 36 ಸಾವಿರ 'ಆದಿಪುರುಷ್' ಟಿಕೆಟ್​ಗಳ ಮಾರಾಟ.. ಆರ್​ಆರ್​ಆರ್​​, ಪಠಾಣ್​ ದಾಖಲೆಗಳು ಉಡೀಸ್​!

ಬಿಗ್​ ಬಜೆಟ್​ ಸಿನಿಮಾ: ಭಾರತದ ಮಹಾಕಾವ್ಯ ರಾಮಾಯಣ ಆಧಾರಿತ ಪೌರಾಣಿಕ ಚಿತ್ರ ಆದಿಪುರುಷ್​. ಸುಮಾರು 500 ಕೋಟಿ ರೂ.ಗಳ ಬೃಹತ್ ಬಜೆಟ್‌ನಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಓಂ ರಾವುತ್​​ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಈ ಸಿನಿಮಾದಲ್ಲಿ ದಕ್ಷಿಣದ ಸೂಪರ್​ ಸ್ಟಾರ್​​ ಪ್ರಭಾಸ್​ ರಾಘವ್​ ಪಾತ್ರದಲ್ಲಿ, ಬಾಲಿವುಡ್​ ಬಹುಬೇಡಿಕೆ ನಟಿ ಕೃತಿ ಸನೋನ್​ ಜಾನಕಿ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಲಂಕೇಶ್ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್, ಸನ್ನಿ ಸಿಂಗ್ ಲಕ್ಷ್ಮಣನ ಪಾತ್ರದಲ್ಲಿ, ದೇವ್​ದತ್ತ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರವು ವಿಶ್ವಾದ್ಯಂತ 10,000 (ಭಾರತದಲ್ಲಿ 7,000 ಮತ್ತು ವಿದೇಶದಲ್ಲಿ 3,000) ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ. ತೆಲುಗು, ಹಿಂದಿ, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಈಗಾಗಲೇ ಸಿನಿಮಾ ನೋಡಿದ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. 'ಕಲ್ಪನೆಗೂ ನಿಲುಕದ ದೃಶ್ಯಗಳಿರುವ ಆದಿಪುರುಷ್​ ಉತ್ತಮ ಸಿನಿಮಾ' ಎಂದು ಕೆಲವರು ಅಭಿಪ್ರಾಯ ಪಟ್ಟರೆ, ಇನ್ನು ಕೆಲವರು 'ಪ್ರಭಾಸ್ ರಾಮನಾಗಿ ತೆರೆಯ ಮೇಲೆ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ' ಎಂದು ಹೇಳುತ್ತಿದ್ದಾರೆ. ಜೊತೆಗೆ ಹಿನ್ನೆಲೆ ಸಂಗೀತ ಮತ್ತು ಹಾಡುಗಳ ಬಗ್ಗೆಯೂ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: Adipurush: ರಾಮಾಯಣ ಆಧಾರಿತ ಪೌರಾಣಿಕ ಚಿತ್ರದ ಟ್ವಿಟರ್ ವಿಮರ್ಶೆ.. ಹೇಗಿದೆಯಂತಾ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.