ETV Bharat / entertainment

ವಿನಯ್ ರಾಜ್​ಕುಮಾರ್ ಹುಟ್ಟುಹಬ್ಬ..'ಅಂದೊಂದಿತ್ತು ಕಾಲ' ಹಾಗೂ 'ಪೆಪೆ' ಟೀಸರ್​ಗೆ ಫ್ಯಾನ್ಸ್ ಫಿದಾ

author img

By

Published : May 7, 2022, 9:56 PM IST

vinay-rajkumar-movie-teasers-released-on-his-birthday
'ಅಂದೊಂದಿತ್ತು ಕಾಲ' ಹಾಗೂ 'ಪೆಪೆ' ಟೀಸರ್​ಗೆ ಫ್ಯಾನ್ಸ್ ಫಿದಾ

32ನೇ ವಸಂತಕ್ಕೆ ಕಾಲಿಟ್ಟಿರುವ ನಟ ವಿನಯ್ ರಾಜ್​ಕುಮಾರ್ ಹುಟ್ಟುಹಬ್ಬಕ್ಕೆ ಅವರ ಬಹುನಿರೀಕ್ಷಿತ ಸಿನಿಮಾಗಳಾದ 'ಅಂದೊಂದಿತ್ತು ಕಾಲ' ಹಾಗೂ 'ಪೆಪೆ' ಟೀಸರ್ ಬಿಡುಗಡೆ ಆಗಿದೆ.

'ಸಿದ್ದಾರ್ಥ್', 'ಅನಂತ್ ವರ್ಸಸ್ ನುಸ್ರತ್' ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದ ನಟ ವಿನಯ್ ರಾಜ್​ಕುಮಾರ್. ಡಾ ರಾಜ್​ಕುಮಾರ್ ಕುಟುಂಬದ ಮೂರನೇ ತಲೆಮಾರಿನ, ಕುಡಿಯಾಗಿರುವ ವಿನಯ್​ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದರು. 32ನೇ ವಸಂತಕ್ಕೆ ಕಾಲಿಟ್ಟಿರುವ ವಿನಯ್ ಹುಟ್ಟುಹಬ್ಬಕ್ಕೆ ಅವರ ಬಹುನಿರೀಕ್ಷಿತ ಸಿನಿಮಾಗಳಾದ 'ಅಂದೊಂದಿತ್ತು ಕಾಲ' ಹಾಗೂ 'ಪೆಪೆ' ಟೀಸರ್ ಬಿಡುಗಡೆ ಆಗಿದೆ.

ಲವರ್ ಬಾಯ್ ಇಮೇಜ್​ನಿಂದ ಗುರುತಿಸಿಕೊಂಡಿದ್ದ ವಿನಯ್, ಸದ್ಯ ಮಾಸ್ ಅಂಡ್​​ ಕ್ಲಾಸ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ 'ಅಂದೊಂದಿತ್ತು ಕಾಲ' ಟೀಸರ್​​ನಲ್ಲಿ ಸಖತ್ ಕ್ಲಾಸ್ ಆಗಿ ಕಾಣುತ್ತಿದ್ದಾರೆ. ಇದು 90ರ ದಶಕದ ಕಥೆಯಾಗಿದ್ದು, ಪ್ರೀತಿ, ಪ್ರೇಮ ಹಾಗೂ ಸಂಬಂಧಗಳ ಬಗ್ಗೆ ಇರಲಿದೆ. ಚಿತ್ರದಲ್ಲಿ ಇಬ್ಬರು ನಾಯಕಿಯರಾದ ಅದಿತಿ ಪ್ರಭುದೇವ ಹಾಗೂ ಗಟ್ಟಿಮೇಳ ಖ್ಯಾತಿಯ ನಿಶಾ ಮಿಲನ ವಿನಯ್​ಗೆ ಜೊತೆಯಾಗಿದ್ದಾರೆ. ಅದಿತಿ ಮ್ಯೂಸಿಕ್ ಟೀಚರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯುವ ನಿರ್ದೇಶಕ ಕೀರ್ತಿ ಆ್ಯಕ್ಷನ್​ ಕಟ್​ ಹೇಳಿದ್ದಾರೆ.

  • " class="align-text-top noRightClick twitterSection" data="">

'ಪೆಪೆ' ರಗಡ್ ಲುಕ್​​: ಮತ್ತೊಂದೆಡೆ 'ಪೆಪೆ' ಚಿತ್ರದಲ್ಲಿ ವಿನಯ್​ ರಾಜ್​ಕುಮಾರ್​ ಪಕ್ಕಾ ಔಟ್ ಅಂಡ್​​ ಔಟ್ ರಗಡ್ ಲುಕ್​​ನಲ್ಲಿ ಮಿಂಚಿದ್ದಾರೆ. ಪಂಚಿಂಗ್ ಡೈಲಾಗ್​ಗಳ ಜೊತೆಗೆ ಸಿನಿಮಾದಲ್ಲಿ ಬರುವ ಒಂದೊಂದು ಕ್ಯಾರೆಕ್ಟರ್​​ಗಳ ಅನಾವರಣ ಮಾಡಲಾಗಿದೆ. ಶ್ರೀಲೇಶ್ ಎಸ್. ನಾಯರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದ್ದು, ಸಮರ್ಥ ಉಪಾಧ್ಯ ಅವರ ಸಿನಿಮಾಟೋಗ್ರಫಿ ನೋಡುಗರ ಗಮನ ಸೆಳೆಯುತ್ತಿದೆ.

  • " class="align-text-top noRightClick twitterSection" data="">

ಒಟ್ಟಾರೆ, ವಿನಯ್​ ರಾಜ್​ಕುಮಾರ್ ಹುಟ್ಟುಹಬ್ಬಕ್ಕೆ ಈ ಎರಡೂ ಸಿನಿಮಾದ ಟೀಸರ್​​ಗಳು ಬಿಡುಗಡೆಯಾಗಿ ಸಿನಿಪ್ರಿಯರನ್ನು ಸೆಳೆಯುತ್ತಿವೆ. ದೊಡ್ಮನೆ ಕುಡಿಯ ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳ ನಿದ್ದೆಕೆಡಿಸಿದ ಕತ್ರಿನಾ ಕೈಪ್​ - ವಿಕ್ಕಿ ಕೌಶಲ್​ ವೀಕೆಂಡ್​ ಫೋಟೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.