ETV Bharat / entertainment

ಅಭಿಮಾನಿಗಳ ನಿದ್ದೆಕೆಡಿಸಿದ ಕತ್ರಿನಾ ಕೈಪ್​ - ವಿಕ್ಕಿ ಕೌಶಲ್​ ವೀಕೆಂಡ್​ ಫೋಟೋ

author img

By

Published : May 7, 2022, 3:06 PM IST

ಮದುವೆ ನಂತರ ಹೆಚ್ಚು ಸಮಯ ಜೊತೆಯಾಗಿ ಕಳೆದಿರದ ಬಾಲಿವುಡ್​ ತಾರಾ ಜೋಡಿ ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಇದೀಗ ವಾರಾಂತ್ಯದಲ್ಲಿ ಚಿಲ್​ ಮಾಡಿಕೊಂಡಿದ್ದಾರೆ. ತಾವು ಪೂಲ್​ನಲ್ಲಿ ಜೊತೆಯಾಗಿ ಕಳೆದ ಕ್ಷಣಗಳ ಪೋಟೋವನ್ನು ನಟಿ ಕತ್ರಿನಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Kathrina Kaif and Vikki Koushal
ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​

ಹೈದರಾಬಾದ್ (ತೆಲಂಗಾಣ): ಬಹುದಿನಗಳ ನಂತರ ಬಾಲಿವುಡ್​ ತಾರಾ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ವಾರಾಂತ್ಯದ ಹಾಟ್​ ಫೋಟೋವೊಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಫೋಟೋ ನೋಡಿ ಫುಲ್​ ಚಿತ್​​​ ಆಗಿದ್ದಾರೆ. ಮದುವೆ ನಂತರ ತಮ್ಮ ಕಮಿಟ್​ಮೆಂಟ್​ಗಳಲ್ಲಿ ಬ್ಯುಸಿಯಾಗಿದ್ದ ಜೋಡಿ ಜೊತೆಯಾಗಿ ಹೆಚ್ಚು ಸಮಯ ಕಳೆದಿರಲಿಲ್ಲ. ಆದರೂ ಸಿಕ್ಕ ಸ್ವಲ್ಪ ಸಮಯವನ್ನೇ ತಾರಾ ಜೋಡಿ ಖುಷಿಯಾಗಿ ಕಳೆದಿದೆ.

ಇಂದು ಬೆಳಗ್ಗೆ, ಕತ್ರಿನಾ ತಮ್ಮ ಇನ್​​ಸ್ಟಾಗ್ರಾಂ​ ಖಾತೆಯಲ್ಲಿ ಪತಿ ವಿಕ್ಕಿಯೊಂದಿಗೆ ಕಾಣಿಸಿಕೊಂಡಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ ಕತ್ರಿನಾ ಈಜುಕೊಳದಲ್ಲಿ ವಿಕ್ಕಿ ತಬ್ಬಿಕೊಂಡಿರುವುದನ್ನು ಕಾಣಬಹುದು. ಬಿಳಿ ಮೊನೊಕಿನಿ ಧರಿಸಿ, ತನ್ನ ಗಂಡನೊಂದಿಗೆ ಉತ್ತಮ ಸಮಯ ಆನಂದಿಸುತ್ತಿದ್ದಾರೆ. ಚಿತ್ರದ ಜೊತೆಗೆ ಕತ್ರಿನಾ, "ನಾನು ಮತ್ತು ನನ್ನವರು" ಎಂದು ಬರೆದು ಹೃದಯದ ಎಮೋಜಿ ಹಾಕಿದ್ದಾರೆ.

ಕತ್ರಿನಾ ಕೈಫ್​ ಅವರು ಟೈಗರ್ ಫ್ರಾಂಚೈಸ್‌ನ ಮೂರನೇ ಕಂತು ಟೈಗರ್ 3 ಚಿತ್ರೀಕರಣದಲ್ಲಿದ್ದಾರೆ. ಜೊತೆಗೆ ಶ್ರೀರಾಮ್ ರಾಘವನ್ ಅವರ ಮೆರಿ ಕ್ರಿಸ್‌ಮಸ್ ಸಿನಿಮಾದಲ್ಲಿ ವಿಜಯ್ ಸೇತುಪತಿ ಜೊತೆಗೆ ನಟಿಸುತ್ತಿದ್ದಾರೆ. ಅವರು ಫರ್ಹಾನ್ ಅಖ್ತರ್ ಅವರ ಜೀ ಲೆ ಜರಾ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಆಲಿಯಾ ಭಟ್ ಅವರೊಂದಿಗೆ ನಟಿಸಲು ಸಿದ್ಧರಾಗಿದ್ದಾರೆ.

ಇದನ್ನೂ ಓದಿ: ಸದ್ದಿಲ್ಲದೇ ನಡೀತು ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಮಗಳ ಮದುವೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.