ETV Bharat / entertainment

ವೇದ ಸಕ್ಸಸ್ ಹಿನ್ನೆಲೆ ಹೆಸರಿಡದ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಕರುನಾಡ ಚಕ್ರವರ್ತಿ

author img

By

Published : Jan 7, 2023, 9:22 PM IST

shivarajkumar-has-given-the-green-signal-for-a-new-untitled-film-behind-veda-success
Etv Bharatವೇದ ಸಕ್ಸಸ್ ಹಿನ್ನಲೆ ಹೆಸರಿಡದ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಕರುನಾಡ ಚಕ್ರವರ್ತಿ

ಹೊಸ ಚಿತ್ರಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟ ‘ಹ್ಯಾಟ್ರಿಕ್​ ಹೀರೊ’-​ ಹಿಂದೆಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಕರುನಾಡ ಚಕ್ರವರ್ತಿ- ಚಿತ್ರದ ಶೀರ್ಷಿಕೆಯನ್ನು ಸದ್ಯದಲ್ಲೇ ತಿಳಿಸುತ್ತೇವೆ ಎಂದ ಚಿತ್ರದ ನಿರ್ದೇಶಕ.

ಕನ್ನಡ ಚಿತ್ರರಂಗದ ನಿರ್ಮಾಪಕರ ಅಚ್ಚುಮೆಚ್ಚಿನ ನಟ ಎಂದು ಕರೆಯಿಸಿಕೊಂಡಿರುವ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸದ್ಯ ವೇದ ಸಿನಿಮಾದ ದೊಡ್ಡ ಸಕ್ಸಸ್​ ಎಂಜಾಯ್ ಮಾಡುತ್ತಿದ್ದಾರೆ. ಈಗಾಗಲೇ ಕರಟಕ ಧಮನಕ, ಘೋಸ್ಟ್, ಯೋಗರಾಜ್ ಭಟ್ ನಿರ್ದೇಶನದ ಚಿತ್ರ ಸೇರಿದಂತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡಲು ಒಪ್ಪಿಕೊಂಡಿದ್ದು, ಈಗ ಕರುನಾಡ ಚಕ್ರವರ್ತಿ ಹೆಸರಿಡದ ಚಿತ್ರವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ವೇದ ಸಕ್ಸಸ್ ಹಿನ್ನಲೆ ಹೆಸರಿಡದ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಕರುನಾಡ ಚಕ್ರವರ್ತಿ
ವೇದ ಸಕ್ಸಸ್ ಹಿನ್ನಲೆ ಹೆಸರಿಡದ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಕರುನಾಡ ಚಕ್ರವರ್ತಿ

ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗಿರುವ ವೇದ ಸಿನಿಮಾ ಬಿಡುಗಡೆ ಆದ ಎಲ್ಲ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ಕರುನಾಡ ಚಕ್ರವರ್ತಿ ಹೆಸರಿಡದ ಹೊಸ ಚಿತ್ರಕ್ಕೆ ಸೈ ಅಂದಿದ್ದಾರೆ. ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ಮಂಜುಳಾ ಶಿವಾರ್ಜುನ್ ನಿರ್ಮಾಣ ಮಾಡುತ್ತಿರುವ ಈ ನೂತನ ಚಿತ್ರಕ್ಕೆ ಓಕೆ ಎಂದಿದ್ದಾರೆ. ಕನ್ನಡದ ಸುಪ್ರಸಿದ್ಧ ರಿಯಾಲಿಟಿ ಶೋ ಮಜಾಟಾಕೀಸ್ ಹಾಗೂ ಸೃಜನ್ ಲೋಕೇಶ್ ಅಭಿನಯದ ‘ಎಲ್ಲಿದೆ ಇಲ್ಲಿ ತನಕ’ ಚಿತ್ರದ ನಿರ್ದೇಶಕ ತೇಜಸ್ವಿ ಕೆ ನಾಗ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.‌

ಈ ಹಿಂದೆ ಶಿವಾರ್ಜುನ ಸಿನಿಮಾವನ್ನ ನಿರ್ಮಾಣ ಮಾಡಿದ್ದ ಶಿವಾರ್ಜುನ್ ಈ ಸಿನಿಮಾವನ್ನ ನಿರ್ಮಾಣ​ ಮಾಡ್ತಾ ಇದ್ದಾರೆ. ನಿತಿನ್ ಶಿವಾರ್ಜುನ್ ಈ ಚಿತ್ರದ ಸಹ ನಿರ್ಮಾಪಕರು ಕೂಡಾ ಆಗಿದ್ದರು. ಈಗಾಗ್ಲೇ ಶಿವರಾಜ್​ಕುಮಾರ್ ಈ ಚಿತ್ರದ ಕಥೆ ಕೇಳಿ ಅಭಿನಯಿಸಲು ಒಪ್ಪಿಗೆ ನೀಡಿದ್ದಾರೆ. ಶಿವರಾಜಕುಮಾರ್ ಅವರು ಇಲ್ಲಿಯವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಚಿತ್ರದ ಶೀರ್ಷಿಕೆ ಹಾಗೂ ಉಳಿದ ವಿಷಯಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ನಿರ್ದೇಶಕ ತೇಜಸ್ವಿ ಕೆ ನಾಗ್ ತಿಳಿಸಿದ್ದಾರೆ.

ವೇದ ಸಕ್ಸಸ್​ ಸೆಲಬ್ರೇಷನ್​: ಸದ್ಯ ವೇದ ಸಿನಿಮಾ ಅಂದುಕೊಂಡಂತೆ ಯಶಸ್ಸು ಸಿಕ್ಕ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ನಿರ್ದೇಶಕ ಎ ಹರ್ಷ, ನಾಯಕಿಯರಾದ ಗಾನವಿ ಲಕ್ಷ್ಮಣ್, ಅದಿತಿ ಸಾಗರ್ ಹಾಗೂ ಇಡೀ ವೇದ ಚಿತ್ರತಂಡ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಅಭಿಮಾನಿಗಳ ಜತೆ ವೇದ ಸಿನಿಮಾದ ಸಕ್ಸಸ್ ಸೆಲೆಬ್ರೆಟ್ ಮಾಡ್ತಾ ಇದ್ದಾರೆ.

ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುವ ಕಥೆಯೇ ವೇದ ಆಗಿದೆ. ಈಗಾಗಲೇ ಈ ರೀತಿಯ ಕಥೆಗಳು ಸಾಕಷ್ಟು ಸಿನಿಮಾಗಳಲ್ಲಿ ಬಂದಿವೆ ಕೂಡಾ. ಆದರೆ ನಿರ್ದೇಶಕ ಎ ಹರ್ಷ ಈ ಕಥೆಯನ್ನ 1960 ಹಾಗೂ 1980ರ ಕಾಲ ಘಟ್ಟದಲ್ಲಿ ಹೇಳಿರೋದು ಈ ಚಿತ್ರದ ವಿಶೇಷವಾಗಿದೆ. ಮಹಿಳೆಯರು ಅನ್ಯಾಯ ಆದ ಕ್ಷಣವೇ ಆ ಅನ್ಯಾಯದ ವಿರುದ್ಧ ಸಿಡಿದು ನಿಲ್ಲಬೇಕು ಎಂಬುದು ವೇದ ಚಿತ್ರದ ಸಾರಾಂಶವಾಗಿದೆ.

ಇನ್ನು ಶಿವರಾಜ್​ಕುಮಾರ್ ಹೋದ ಕಡೆಯಲ್ಲಾ ಜನ ಸಾಗರವೇ ಹರಿದು ಬರ್ತಾ ಇದೆ. ಇದು ಶಿವರಾಜ್​ಕುಮಾರ್ ಗೆ ಮತ್ತಷ್ಟು ಕಂಟೆಂಟ್ ಸಿನಿಮಾಗಳನ್ನ ಮಾಡಲು ಹುಮ್ಮಸ್ಸಿನ ಜೊತೆಗೆ ಜವಾಬ್ದಾರಿ ಕೂಡ ಹೆಚ್ಚಿಸಿದೆ.

ಇದನ್ನೂ ಓದಿ: ನಟಿ ಬಿ ಸರೋಜಾದೇವಿ ನಿವಾಸಕ್ಕೆ ಭೇಟಿ ಕೊಟ್ಟ ತಾರೆಯರು...

ETV Bharat Logo

Copyright © 2024 Ushodaya Enterprises Pvt. Ltd., All Rights Reserved.