ETV Bharat / entertainment

ಡ್ಯಾನ್ಸ್​​ ಮಾಡುತ್ತಿದ್ದಂತೆ ವೇದಿಕೆಯಲ್ಲೇ ಬಿದ್ದ ನಟ ಶಾಹಿದ್ ಕಪೂರ್: ವಿಡಿಯೋ ವೈರಲ್​!

author img

By ETV Bharat Karnataka Team

Published : Nov 21, 2023, 7:02 PM IST

Updated : Nov 21, 2023, 7:42 PM IST

Shahid Kapoor
ಶಾಹಿದ್ ಕಪೂರ್

Shahid Kapoor: ನೃತ್ಯ ಪ್ರದರ್ಶನದ ವೇಳೆ ನಟ ಶಾಹಿದ್ ಕಪೂರ್ ಬಿದ್ದಿದ್ದು, ವಿಡಿಯೋ ವೈರಲ್ ಆಗಿದೆ.

ಗೋವಾದಲ್ಲಿ 54ನೇ 'ಇಂಟರ್​ನ್ಯಾಷನಲ್​ ಫಿಲ್ಮ್​ ಫೆಸ್ಟಿವಲ್​ ಆಫ್​ ಇಂಡಿಯಾ 2023' ನಡೆಯುತ್ತಿದೆ. ಸೋಮವಾರ ಈ ಸಿನಿ ಸಮಾರಂಭಕ್ಕೆ ಚಾಲನೆ ಸಿಕ್ಕಿದೆ. ಚಲನಚಿತ್ರೋತ್ಸವದ ಭಾಗವಾಗಿ ಬಾಲಿವುಡ್ ನಟ ಶಾಹಿದ್ ಕಪೂರ್ ಅದ್ಭುತ ನೃತ್ಯ ಪ್ರದರ್ಶಿಸಿದ್ದಾರೆ. ಆದರೆ, ಡ್ಯಾನ್ಸ್​​ ಮಾಡುತ್ತಿದ್ದಂತೆ ವೇದಿಕೆಯಲ್ಲಿ ಕುಸಿದಿದ್ದು, ಆ ಕೂಡಲೇ ನಗುಮೊಗದಿಂದ ತಮ್ಮ ನೃತ್ಯ ಮುಂದುವರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶಾಹಿದ್ ಕಪೂರ್ ಅವರ ವಿಡಿಯೋ ವೈರಲ್​ ಆಗುತ್ತಿದೆ.

ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​ ಎಕ್ಸ್​​​​​ನಲ್ಲಿ ಹಂಚಿಕೊಳ್ಳಲಾದ ವಿಡಿಯೋವೊಂದರಲ್ಲಿ ಬಾಲಿವುಡ್​ ನಟ ಶಾಹಿದ್ ಕಪೂರ್​ ಅವರು ಸಹ ನೃತ್ಯಗಾರರ ಗುಂಪಿನೊಂದಿಗೆ ಡ್ಯಾನ್ಸ್ ಮಾಡುತ್ತಿರುವುದನ್ನು ಕಾಣಬಹುದು. ಬ್ಲ್ಯಾಕ್​ ಪ್ಯಾಂಟ್, ಸ್ಲೀವ್​​ಲೆಸ್​ ಟೀ ಶರ್ಟ್, ಸನ್​ಗ್ಲಾಸ್​ ಧರಿಸಿ ಸಖತ್​ ಹ್ಯಾಂಡ್ಸಂ ಆಗಿ ಕಾಣಿಸಿಕೊಂಡಿದ್ದಾರೆ. ಡ್ಯಾನ್ಸ್​ ಕೂಡ ಚೆನ್ನಾಗೇ ಮೂಡಿ ಬಂದಿದೆ. ಆದರೆ ಅನಿರೀಕ್ಷಿತವಾಗಿ ಸಮತೋಲನ ಕಳೆದುಕೊಂಡು ವೇದಿಕೆಯಲ್ಲೇ ಬಿದ್ದಿದ್ದಾರೆ. ಅದಾಗ್ಯೂ, ಯಾವುದೇ ಮುಜುಗರ, ಹಿಂಜರಿಕೆಯಿಲ್ಲದೇ ವೇಗವಾಗಿ ಎದ್ದು ತಮ್ಮ ಪವರ್​ಫುಲ್​ ಡ್ಯಾನ್ಸ್ ಮುಂದುವರಿಸಿದ್ದಾರೆ.

ಅಚಾನಕ್​​ ಆಗಿ ನಿಯಂತ್ರಣ ತಪ್ಪಿ ಬಿದ್ದ ಶಾಹಿದ್ ನಸು ನಕ್ಕರು. ತಲೆ ಅಲ್ಲಾಡಿಸಿ, ತಮ್ಮನ್ನು ಹುರಿದುಂಬಿಸುತ್ತಲೇ ಇದ್ದ ಪ್ರೇಕ್ಷಕರಿಗೆ ಫ್ಲೈಯಿಂಗ್ ಕೊಟ್ಟರು. ನಂತರ ನಗುಮೊಗದಲ್ಲೇ, ಬಿದ್ದ ಸ್ಥಳದ ಸಮಸ್ಯೆ ಪರಿಶೀಲಿಸಲು ಮುಂದಾದರು. ಜಾರಿದ ಸ್ಥಳವನ್ನು ಸೂಕ್ಷ್ಮವಾಗಿ ಗಮನಿಸಿದರು.

ಇದನ್ನೂ ಓದಿ: 'ಕಾಫಿ ವಿತ್ ಕರಣ್​'ನಲ್ಲಿ ಪಾಸ್ಟ್ ರಿಲೇಶನ್​ಶಿಪ್ ಚರ್ಚೆ:​ 'ಗೌಪ್ಯತೆ' ಗೌರವಿಸಿ ಎಂದ ಕಾರ್ತಿಕ್ ಆರ್ಯನ್

ಈವೆಂಟ್​​​ನಲ್ಲಿ ಶಾಹಿದ್ ಕಪೂರ್​ ತಮ್ಮ ಪಾಪ್ಯುಲರ್ ಸಾಂಗ್ಸ್​ಗೆ ಮೈ ಕುಣಿಸಿದ್ದಾರೆ. ಬೈಕ್ ಚಲಾಯಿಸಿಕೊಂಡು ವೇದಿಕೆಗೆ ಅದ್ಧೂರಿಯಾಗಿ ಪ್ರವೇಶಿಸಿದ್ದಾರೆ. ಮೌಜಾ ಹಿ ಮೌಜಾ, ಧಟಿಂಗ್ ನಾಚ್ ಮತ್ತು ಶಾಮ್ ಶಾಂದಾರ್ ಸೇರಿದಂತೆ ತಮ್ಮ ಟಾಪ್ ಟ್ರ್ಯಾಕ್‌ಗಳಿಗೆ ಹೆಜ್ಜೆ ಹಾಕಿದ್ದಾರೆ. ವೇದಿಕೆಗೆ ಏರುವ ಮೊದಲು, ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿ ಮಾಧ್ಯಮಗಳೊಂದಿಗೆ ಮಾತನಾಡಿದ ವೇಳೆ ಸಖತ್​ ಹ್ಯಾಂಡ್ಸಮ್​ ಆಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಡಂಕಿ ಪ್ರಮೋಶನ್​ ಶುರು: ಸ್ಟೈಲಿಶ್​ ಲುಕ್​ನಲ್ಲಿ ಕಿಂಗ್​​ ಖಾನ್​​, ನಾಳೆ ಸಾಂಗ್​​ ರಿಲೀಸ್!

'ಇಂಟರ್​ನ್ಯಾಷನಲ್​ ಫಿಲ್ಮ್​ ಫೆಸ್ಟಿವಲ್​ ಆಫ್​ ಇಂಡಿಯಾ 2023' ರ ಭಾಗವಾಗಿರುವುದರ ಬಗ್ಗೆ ತಮ್ಮ ಸಂತಸ ವ್ಯಕ್ತಪಡಿಸಿದ್ದರು. ಗೋವಾ ನನ್ನ ಮೆಚ್ಚಿನ ಸ್ಥಳ ಎಂದು ಕೂಡ ತಿಳಿಸಿದ್ದರು. ಇನ್ನೂ ಶಾಹಿದ್ ಅವರ ಮುಂಬರುವ ಚಿತ್ರ 'ದೇವ'. ಪೂಜಾ ಹೆಗ್ಡೆ ಅವರೊಂದಿಗೆ ತೆರೆ ಹಂಚಿಕೊಂಡಿದ್ದು, 2024 ರ ಅಕ್ಟೋಬರ್ 11 ರಂದು ತೆರೆಗಪ್ಪಳಿಸಲಿದೆ. ಅಲ್ಲದೇ, ಕೃತಿ ಸನೋನ್ ಅವರೊಂದಿಗೆ ಹೆಸರಿಸದ ಚಿತ್ರಕ್ಕೆ ಗ್ರೀನ್​​ ಸಿಗ್ನಲ್​ ಕೊಟ್ಟಿದ್ದಾರೆ. ಈ ಚಿತ್ರ ಕೂಡ ಮುಂದಿನ ವರ್ಷ ಫೆಬ್ರವರಿ 9 ರಂದು ಬಿಡುಗಡೆ ಆಗಲಿದೆ. ಚಿತ್ರದ ಫಸ್ಟ್ ಲುಕ್​ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ. ಬ್ಯೂಟಿಫುಲ್​​ ಬೀಚ್ ಹಿನ್ನೆಲೆಯಲ್ಲಿ ಬೈಕ್‌ನಲ್ಲಿ ಇಬ್ಬರೂ ಮುಖಾಮುಖಿಯಾಗಿ ಕುಳಿತಿದ್ದು, ಚಿತ್ರಕಥೆ ಮೇಲೆ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ.

Last Updated :Nov 21, 2023, 7:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.