ETV Bharat / entertainment

ICC World Cup 2023: ರಜನಿಕಾಂತ್​ಗೆ​ ಗೋಲ್ಡನ್​ ಟಿಕೆಟ್​ ನೀಡಿ ವಿಶ್ವಕಪ್​ಗೆ ಆಹ್ವಾನಿಸಿದ ಬಿಸಿಸಿಐ

author img

By ETV Bharat Karnataka Team

Published : Sep 19, 2023, 7:57 PM IST

ನಟ ರಜನಿಕಾಂತ್​ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಗೋಲ್ಡನ್ ಟಿಕೆಟ್ ನೀಡಿ ವಿಶ್ವಕಪ್​ಗೆ ಆಹ್ವಾನ ನೀಡಿದರು.

ICC World Cup 2023
ರಜನಿಕಾಂತ್​ಗೆ​ ಗೋಲ್ಡನ್​ ಟಿಕೆಟ್​ ನೀಡಿ ವಿಶ್ವಕಪ್​ಗೆ ಆಹ್ವಾನಿಸಿದ ಬಿಸಿಸಿಐ

ಕ್ರಿಕೆಟ್​ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ 2023ರ ವಿಶ್ವಕಪ್​ಗೆ ಇನ್ನೇನು 15 ದಿನಗಳು ಉಳಿದಿವೆ. ಈ ಹಿನ್ನೆಲೆಯಲ್ಲಿ ಸ್ಟಾರ್​ ಸೆಲೆಬ್ರಿಟಿಗಳಿಗೆ ಗೋಲ್ಡನ್​ ಟಿಕೆಟ್​ ವಿತರಣೆ ಪ್ರಕ್ರಿಯೆ ಜೋರಾಗಿ ನಡೆಯುತ್ತಿದೆ. ಬಾಲಿವುಡ್​ ಹಿರಿಯ ನಟ ಅಮಿತಾಭ್​ ಬಚ್ಚನ್​ ಮತ್ತು ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್ ಈ ಟಿಕೆಟ್​ಗಳನ್ನು ಈಗಾಗಲೇ ಸ್ವೀಕರಿಸಿದ್ದಾರೆ. ಇಂದು ತಮಿಳು ಸೂಪರ್​ಸ್ಟಾರ್​ ರಜನಿಕಾಂತ್​ ಅವರಿಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಗೋಲ್ಡನ್​ ಟಿಕೆಟ್​ ಅನ್ನು ಹಸ್ತಾಂತರಿಸಿದ್ದಾರೆ.

ಈ ಮೂಲಕ ರಜನಿಕಾಂತ್​ ಅವರು ವಿಶೇಷ ವಿಐಪಿ ಸ್ಟ್ಯಾಂಡ್​ನಲ್ಲಿ ಕುಳಿತು ಎಲ್ಲಾ ಪಂದ್ಯಗಳನ್ನು ವೀಕ್ಷಿಸುವ ಅಪರೂಪದ ಅವಕಾಶವನ್ನು ಪಡೆದುಕೊಂಡಿದ್ದಾರೆ. ಗೋಲ್ಡನ್ ಟಿಕೆಟ್ ಫಾರ್ ಇಂಡಿಯಾ ಐಕಾನ್ಸ್ ಯೋಜನೆಯಡಿ ಭಾರತದ ಹಲವು ಸಾಧಕರಿಗೆ ಈ ರೀತಿಯ ವಿಶೇಷ ಆಹ್ವಾನವನ್ನು ನೀಡಲಾಗುತ್ತಿದೆ. ರಜನಿಕಾಂತ್​ಗೆ ಗೋಲ್ಡನ್​ ಟಿಕೆಟ್​ ನೀಡಿ ವಿಶ್ವಕಪ್​ಗೆ ಆಹ್ವಾನಿಸಿರುವ ಫೋಟೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ನಲ್ಲಿ (ಎಕ್ಸ್) ಪೋಸ್ಟ್ ಮಾಡಿದೆ.

  • Honoured to present the golden ticket to the unparalleled cinematic icon, Shri @rajinikanth! His charisma knows no bounds and his passion for cricket is well-known. Delighted to welcome Thalaiva as our distinguished guest at the @ICC @CricketWorldCup 2023! Let the magic begin!… https://t.co/ku4EBrFAjE

    — Jay Shah (@JayShah) September 19, 2023 " class="align-text-top noRightClick twitterSection" data=" ">

"ಚಿತ್ರರಂಗದ ಆಚೆಗಿನ ವಿದ್ಯಮಾನ! ಬಿಸಿಸಿಐ ಗೌರವ ಕಾರ್ಯದರ್ಶಿ ಜಯ್​ ಶಾ ಅವರು ವರ್ಚಸ್ಸು ಮತ್ತು ಸಿನಿಮೀಯ ತೇಜಸ್ಸಿನ ನಿಜವಾದ ಸಾಕಾರ ರಜನಿಕಾಂತ್​ ಅವರಿಗೆ ಗೋಲ್ಡನ್​ ಟಿಕೆಟ್​ ಅನ್ನು ನೀಡಿದರು. ಈ ದಿಗ್ಗಜ ನಟ ಭಾಷೆ ಮತ್ತು ಸಂಸ್ಕೃತಿಯನ್ನು ಮೀರಿ ಲಕ್ಷಾಂತರ ಜನರ ಹೃದಯದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ. ವಿಶ್ವಕಪ್​ 2023ರಲ್ಲಿ ತಲೈವಾ ನಮ್ಮ ಗೌರವಾನ್ವಿತ ಅತಿಥಿಯಾಗಿ ಅಲಂಕರಿಸಲಿದ್ದಾರೆ ಎಂದು ಹೇಳಲು ನಾವು ರೋಮಾಂಚನಗೊಂಡಿದ್ದೇವೆ" ಎಂದು ಬಿಸಿಸಿಐ ತನ್ನ ಪೋಸ್ಟ್​ಗೆ ಕ್ಯಾಪ್ಶನ್​ ನೀಡಿದೆ.

ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್‌​ ಸೆಮಿ ಫೈನಲ್, ಫೈನಲ್ ನೋಡುವ ಆಸೆಯೇ?: ಟಿಕೆಟ್ ಲಭ್ಯತೆ ಕುರಿತು ಇಲ್ಲಿದೆ ಮಾಹಿತಿ

ಭಾರತದಲ್ಲಿ 5 ಅಕ್ಟೋಬರ್ 2023 ರಿಂದ ನವೆಂಬರ್ 19ರ ವರೆಗೆ ವಿಶ್ವಕಪ್​ ಪಂದ್ಯಗಳು ನಡೆಯಲಿವೆ. ಅದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭರ್ಜರಿ ತಯಾರಿ ನಡೆಸುತ್ತಿದೆ. ಈ ಬಾರಿಯ ಪಂದ್ಯಾವಳಿಯನ್ನು ಸ್ಮರಣೀಯಗೊಳಿಸುವ ಸಲುವಾಗಿ ಬಿಸಿಸಿಐ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಅದರಲ್ಲಿ ಗೋಲ್ಡನ್ ಟಿಕೆಟ್ ಫಾರ್ ಇಂಡಿಯಾ ಐಕಾನ್ಸ್ ಯೋಜನೆ ಒಂದಾಗಿದೆ. ಹತ್ತು ತಂಡಗಳು ಪಾಲ್ಗೊಳ್ಳಲಿದ್ದು, 10 ಸ್ಥಳಗಳಲ್ಲಿ ಈ ಏಕದಿನ ವಿಶ್ವಕಪ್ ನಡೆಯಲಿದೆ. 46 ದಿನಗಳಲ್ಲಿ 48 ಪಂದ್ಯಗಳು ಮೈದಾನದಲ್ಲಿ ಕಾದಾಟ ನಡೆಸಲಿವೆ.

  • The Phenomenon Beyond Cinema! 🎬

    The BCCI Honorary Secretary @JayShah presented the golden ticket to Shri @rajinikanth, the true embodiment of charisma and cinematic brilliance. The legendary actor has left an indelible mark on the hearts of millions, transcending language and… pic.twitter.com/IgOSTJTcHR

    — BCCI (@BCCI) September 19, 2023 " class="align-text-top noRightClick twitterSection" data=" ">

ಮೊದಲ ಹಾಗೂ ಅಂತಿಮ ಮ್ಯಾಚ್​ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಟೂರ್ನಿಯ ಮೊದಲ ಪಂದ್ಯ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್​ ಮಧ್ಯೆ ನಡೆಯಲಿದ್ದು, ಇದಕ್ಕಾಗಿ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಸಜ್ಜುಗೊಳ್ಳುತ್ತಿದೆ. ನವೆಂಬರ್ 19 ರಂದು ಅದೇ ಮೈದಾನದಲ್ಲಿ ಫೈನಲ್ ಪಂದ್ಯವೂ ನಡೆಯಲಿದೆ. ಇದಲ್ಲದೆ ಎರಡು ಸೆಮಿಫೈನಲ್ ಪಂದ್ಯಗಳು ಕ್ರಮವಾಗಿ ಮುಂಬೈ ಮತ್ತು ಕೋಲ್ಕತ್ತಾದಲ್ಲಿ ನವೆಂಬರ್ 15 ಮತ್ತು 16 ರಂದು ನಡೆಯಲಿವೆ.

ಇದನ್ನೂ ಓದಿ: World Cup -2023: ಇಂಗ್ಲೆಂಡ್​ ವಿಶ್ವಕಪ್​ ತಂಡ ಪ್ರಕಟ.. ಮೀಸಲು ಆಟಗಾರನಾಗಿ ಆರ್ಚರ್​ ಆಯ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.