ETV Bharat / entertainment

ಜಿಮ್​ ವೇಳೆ ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್​ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು

author img

By

Published : Aug 10, 2022, 3:04 PM IST

Updated : Aug 10, 2022, 3:29 PM IST

Comedian Raju Srivastava
Comedian Raju Srivastava

ಜಿಮ್​​ನಲ್ಲಿ ವರ್ಕೌಟ್​ ಮಾಡುತ್ತಿದ್ದಾಗ ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ್​ ಅವರಿಗೆ ಹೃದಯಾಘಾತವಾಗಿದೆ.

ನವದೆಹಲಿ: ಉತ್ತರ ಪ್ರದೇಶದ ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ್​ ಅವರಿಗೆ ಹೃದಯಾಘಾತ ಉಂಟಾಗಿದೆ. ಅವರನ್ನು ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದೆಹಲಿಯ ಜಿಮ್​​​ನಲ್ಲಿ ವರ್ಕೌಟ್ ಮಾಡ್ತಿದ್ದಾಗ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಸದ್ಯ ನಟ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಮೂಲಗಳು ತಿಳಿಸಿವೆ.

ಸ್ಟ್ಯಾಂಡ್-ಅಪ್​ ಕಮೇಡಿಯನ್​(stand-up comedian) ಆಗಿರುವ ರಾಜು ಶ್ರೀವಾಸ್ತವ್​​ ನಿನ್ನೆ ರಾತ್ರಿ ಜಿಮ್​​ನಲ್ಲಿ ದೈಹಿಕ ಕಸರತ್ತು ಮಾಡುತ್ತಿದ್ದಾಗ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದರು. ತಕ್ಷಣವೇ ಏಮ್ಸ್‌ಗೆ​ ಕರೆತರಲಾಗಿತ್ತು. ಡಾ.ನಿತೀಶ್ ನ್ಯಾಯ್ ನೇತೃತ್ವದ ಹೃದ್ರೋಗ ಮತ್ತು ತುರ್ತು ವಿಭಾಗದ ಎಐಐಎಂಎಸ್ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಈ ಕುರಿತಂತೆ ರಾಜು ಶ್ರೀವಾಸ್ತವ್​ ಸಹೋದರ ಆಶಿಶ್ ಶ್ರೀವಾಸ್ತವ್​ ಮಾಹಿತಿ ನೀಡಿದರು.

ಮೂಲತಃ ಕಾನ್ಪುರ ಮೂಲದವರಾಗಿರುವ ಇವರು, ಉತ್ತರ ಪ್ರದೇಶ ಚಲನಚಿತ್ರ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಗತ್ಯ ಭೇಟಿಯ ಉದ್ದೇಶದಿಂದ ದೆಹಲಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಖ್ಯಾತ ಮರಾಠಿ ಹಿರಿಯ ನಟ ಪ್ರದೀಪ್​ ಪಟವರ್ಧನ್ ಹೃದಯಾಘಾತದಿಂದ​​ ನಿಧನ

Last Updated :Aug 10, 2022, 3:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.