ETV Bharat / entertainment

ನಾನು ಬಣ್ಣ ಹಚ್ಚಿದರೆ ಸಿನಿ‌ ಕಾರ್ಮಿಕರಿಗೆ ಕೆಲಸ ಸಿಗುತ್ತೆ: ನಟ ಶಿವ ರಾಜ್​ಕುಮಾರ್

author img

By

Published : Dec 22, 2022, 8:04 PM IST

Updated : Dec 22, 2022, 8:17 PM IST

shiva rajkumar interview
ನಟ ಶಿವ ರಾಜ್​ಕುಮಾರ್

ವೇದ ಸಿನಿಮಾ ಬಗ್ಗೆ ನಟ ಶಿವ ರಾಜ್​ಕುಮಾರ್ ಈಟಿವಿ ಭಾರತ ಜೊತೆ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ.

ನಟ ಶಿವ ರಾಜ್​ಕುಮಾರ್

'ವೇದ' ಹ್ಯಾಟ್ರಿಕ್ ಹೀರೋ ಶಿವ ರಾಜ್​​ಕುಮಾರ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿರುವ ಸ್ಯಾಂಡಲ್​ವುಡ್​ನ ಹೈ ವೋಲ್ಟೇಜ್ ಚಿತ್ರ. ಟ್ರೈಲರ್, ಹಾಡುಗಳಿಂದ‌ ದಕ್ಷಿಣ ಭಾರತದಲ್ಲಿ ಟಾಕ್ ಆಗುತ್ತಿರುವ ಸಿನಿಮಾ. ನಾಳೆ ಕರ್ನಾಟಕದಲ್ಲಿ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿರುವ ವೇದ ಸಿನಿಮಾ ಬಗ್ಗೆ ನಟ ಶಿವ ರಾಜ್​ಕುಮಾರ್ ಈಟಿವಿ ಭಾರತ ಜೊತೆ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ.

ಲಾಕ್​ಡೌನ್ ವೇಳೆ ಸಿಕ್ಕ ಕಥೆ: ಈ ಕಥೆ ಒಪ್ಪಿಕೊಂಡಿದ್ದು ಮೊದಲ ಲಾಕ್​ಡೌನ್ ಸಮಯದಲ್ಲಿ. ಆಗ ಭೈರಾಗಿ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ನಿರ್ದೇಶಕ ಹರ್ಷ ಈ ಕಥೆ ಹೇಳಿದರು. ಆಗ ವೇದ ಸಿನಿಮಾವನ್ನು ಬೇರೆ ನಿರ್ಮಾಪಕರು ಮಾಡಲಿದ್ದರು. ಆ ನಿರ್ಮಾಪಕರ ಜೊತೆ ನಾವು ಮಾತನಾಡಿ ವೇದ ಚಿತ್ರದ ನಿರ್ಮಾಣ ಹೊಣೆಯನ್ನು ನಾವು ತೆಗೆದುಕೊಂಡೆವು ಎಂದು ತಿಳಿಸಿದರು.

ಗೀತಾ ಪಿಕ್ಚರ್ಸ್: ಇನ್ನು ನಮ್ಮದೇ ಹೋ‌ಂ ಬ್ಯಾನರ್ ಸ್ಟಾರ್ಟ್ ಮಾಡಬೇಕು ಅಂತಾ ಹಲವು ಬಾರಿ ಯೋಚಿಸಿದ್ದೆವು. ನನ್ನ 125ನೇ ಸಿನಿಮಾವನ್ನು ಈ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಬೇಕೆಂದು ನಿರ್ಧರಿಸಿದೆವು. ಅಕ್ಟೋಬರ್​ನಲ್ಲಿ ಮಾಡಬೇಕು ಅಂದುಕೊಂಡಾಗ ಅಪ್ಪು ನಿಧನದಿಂದ ಮುಂದೂಡಿ ಡಿಸೆಂಬರ್​ನಲ್ಲಿ ಗೀತಾ ಪಿಕ್ಚರ್ಸ್ ಅನ್ನೋ ಬ್ಯಾನರ್ ಶುರು ಮಾಡಿದೆವು ಎಂದು ತಿಳಿಸಿದರು.

125ನೇ ಸಿನಿಮಾ: ವೇದ ಸಿನಿಮಾದ ಕಥೆ ನನಗೆ ಇಷ್ಟವಾಯಿತು. ಈ ಕಾರಣಕ್ಕೆ ಹರ್ಷಗೆ ಈ ಸಿನಿಮಾ ಮಾಡಲು ಹೇಳಿದ್ವಿ. ಹರ್ಷ ನನ್ನ 125ನೇ ಸಿನಿಮಾ ಮಾಡಬೇಕು ಅನ್ನೋದು ವಿಧಿ ಲಿಖಿತ ಎಂದರು.

ಭಾವನೆಗಳ ಮೇಲೆ ನಡೆಯುವ ಕಥೆ: ಇನ್ನು ನನ್ನ ಪಾತ್ರದ ಬಗ್ಗೆ ಹೇಳಬೇಕಾದ್ರೆ ಭಾವನೆಗಳ ಮೇಲೆ ನಡೆಯುವ ಕಥೆ 'ವೇದ'. ಸಿನಿಮಾದಲ್ಲಿ ಒಂದು ಸಂದೇಶ ಇದೆ. ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲಿನ ಶೋಷಣೆ ಬಗ್ಗೆ ಚಿತ್ರದಲ್ಲಿದೆ. 1960ರಲ್ಲಿ ನಡೆಯುವ ಕಥೆ ಇದು ಎಂದು ಹೇಳಿದರು.

ಐದು ಹಾಡುಗಳು: ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ. ಈಗಾಗಲೇ ಮೂರು ಹಾಡುಗಳು ರಿಲೀಸ್ ಆಗಿ ಹಿಟ್ ಆಗಿವೆ. ಜನಪದ ಶೈಲಿಯಯ ಜುಂಚಪ್ಪ ಹಾಡು ಎಲ್ಲರಿಗೂ ಇಷ್ಟವಾಗಿದೆ. ಪುಷ್ಪ ಹಾಡು ಹಾಗು ಜುಂಚಪ್ಪ ಹಾಡು ಚೆನ್ನಾಗಿ ಮೂಡಿಬಂದಿದೆ.

ಉಮಾಶ್ರೀಯವರು ಜ್ವರ ಇದ್ರೂ ಬಂದು ಈ ಹಾಡಿನಲ್ಲಿ ಡ್ಯಾನ್ಸ್ ಮಾಡಿರೋದು ನನಗೆ ಅಚ್ಚರಿ ಮೂಡಿಸಿತು. ಇನ್ನು ಅವರ ಜೊತೆಗಿನ ಬಾಂಧವ್ಯ ಈ ಸಿನಿಮಾದಲ್ಲಿ ಬಹಳ ಚೆನ್ನಾಗಿ ವರ್ಕ್ ಆಗಿದೆ. ಹೆಣ್ಣು ಮಕ್ಕಳಿಗೆ ಇಷ್ಟ ಆಗುವ ಕಥೆ ವೇದ. ಸ್ಕ್ರೀನ್ ಪ್ಲೇ ಬಹಳ ಚೆನ್ನಾಗಿ ಇದೆ. ಈ ಸಿನಿಮಾದಲ್ಲಿ ಹೆಣ್ಣು ಮಕ್ಕಳು ಕೂಡ ಆ್ಯಕ್ಷನ್ ಮಾಡಿರೋದು ಚಿತ್ರ ನೋಡುವವರಿಗೆ ಇಷ್ಟ ಆಗುತ್ತೆ ಎಂದರು.

ಇದನ್ನೂ ಓದಿ: ಬೆಂಗಳೂರು ವಿಶ್ವವಿದ್ಯಾಲಯ ಪಠ್ಯದಲ್ಲಿ ಪುನೀತ್ ರಾಜ್​​ಕುಮಾರ್ ವಿಷಯ

ಪ್ರತಿಯೊಬ್ಬರ ಪಾತ್ರಕ್ಕೆ ತುಂಬಾನೇ ಸ್ಕೋಪ್ ಇದೆ. ಅದಿತಿ ಸಾಗರ್, ಗಾನವಿ ಲಕ್ಷ್ಮಣ್, ಶ್ವೇತಾ ಚೆಂಗಪ್ಪ ಮೂರು ಹೆಣ್ಣು ಮಕ್ಕಳು ಥ್ರಿಲ್ ಕೊಡುವ ಹಾಗೆ ಸಖತ್​ ಆ್ಯಕ್ಷನ್ ಮಾಡಿದ್ದಾರೆ‌. ಏಕೆ ವೇದ ಕುಡುಗೋಲುನ್ನು ಹಿಡಿಯುತ್ತಾನೆ ಅನ್ನೋದು ಸಿನಿಮಾ ನೋಡಬೇಕಾದ್ರೆ ಗೊತ್ತಾಗುತ್ತದೆ. ಫಸ್ಟ್ ಟೈಮ್ ನಾನು ತಮಿಳು ಭಾಷೆಯ ಸಿನಿಮಾಗೆ ಡಬ್ಬಿಂಗ್ ಮಾಡಿ ಒಂದು ಹಾಡನ್ನು ಹಾಡಿದ್ದೇನೆಂದರು. ‌

ಅಕ್ಷಯ್ ಕುಮಾರ್ ಕೆಲಸಕ್ಕೆ ಮೆಚ್ಚುಗೆ: ನಾನು ಯಾವಾಗಲೂ ಬ್ಯುಸಿಯಾಗಿ ಇರಬೇಕೆನ್ನೋದೇ ನನ್ನ ಆಸೆ. ನಾನು ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡಿದಾಗ ಕಲಾವಿದರಿಗೆ, ತಂತ್ರಜ್ಞನರಿಗೆ ಸೇರಿದಂತೆ ಎಲ್ಲಾ ಸಿನಿಮಾ ಕಾರ್ಮಿಕರಿಗೆ ಕೆಲಸ ಸಿಗುತ್ತದೆ. ಬಾಲಿವುಡ್ ನಟ‌ ಅಕ್ಷಯ್ ಕುಮಾರ್ ಕೂಡ ಟೈಮ್ ವೇಸ್ಟ್ ಮಾಡದೇ ಸಿನಿಮಾ ಮಾಡಬೇಕು ಅಂತಾರೆ ಎಂದು ತಿಳಿಸಿದರು.

ಶಕ್ತಿ ಧಾಮದಲ್ಲಿ ಒಳ್ಳೆ ಸ್ಕೂಲ್ ರೆಡಿಯಾಗಬೇಕು. ಅಲ್ಲಿರುವ ಮಕ್ಕಳು ಓದುವ ಜೊತೆಗೆ ಅಲ್ಲೇ ಕೆಲಸ ಮಾಡುವ ಮೂಲಕ ಸ್ವಾವಲಂಬಿಯಾಗಿ‌ ಬೆಳಯಬೇಕು ಅನ್ನೋದು ನಮ್ಮ ಕನಸು. ಇನ್ನು ಕೊರಗಜ್ಜ ದೇವಸ್ಥಾನದ ಟ್ರಸ್ಟ್ ವತಿಯಿಂದ 200 ಜನ ವಿದ್ಯಾರ್ಥಿಗಳು ಇದ್ದಾರೆ. ಆ ವಿದ್ಯಾರ್ಥಿಗಳನ್ನು ಆ ದೇವರು ಮೈ‌ ಮೇಲೆ ಬಂದು‌ ನೀವು ನೋಡಿಕೊಳ್ಳಿ ಅಂತಾ ಹೇಳಿದೆ. ಆ ಬಗ್ಗೆ ನಾನು ಗೀತಾ ಯೋಚನೆ ಮಾಡಿ ನಿರ್ಧಾರ ಮಾಡಿಕೊಂಡು ನಮ್ಮ ಕೈಯಲ್ಲಿ ಎಷ್ಟು ಸಹಾಯ ಆಗುತ್ತೋ ಅಷ್ಟು ಕೆಲಸ ಮಾಡುತ್ತೇವೆ. ಇದು ನನ್ನ ಪತ್ನಿ ಗೀತಾ ಅವರ ಕನಸು ಕೂಡ ಅಂತಾ ಹೇಳಿದರು.

ಇದನ್ನೂ ಓದಿ: ದರ್ಶನ್ ಮೇಲೆ ನಡೆದ ಕೃತ್ಯ ನನ್ನ ಮನಸ್ಸಿಗೆ ನೋವುಂಟು ಮಾಡಿದೆ: ನಟ ಶಿವರಾಜ್​ ಕುಮಾರ್

ವೇದ ಸಿನಿಮಾದಿಂದ ಪ್ರೊಡಕ್ಷನ್ ಬಗ್ಗೆ ಸಾಕಷ್ಟು ಕಲಿತಿಕೊಂಡಿದ್ದಾರೆ. ಹಾಗೇ ನಮ್ಮ ಸಿನಿಮಾದಲ್ಲಿ ಹೆಚ್ಚಾಗಿ ಹೆಣ್ಣು ಮಕ್ಕಳು ಇರೋದ್ರಿಂದ ನಮ್ಮ ಮನೆಯವರ ತರ ನೋಡಿಕೊಂಡೆವು. ಅದು ಗೀತಾಗೆ ಇಷ್ಟ ಆಗುತ್ತೆ ಎಂದು ತಿಳಿಸಿದರು. ಇನ್ನು ರಜನಿಕಾಂತ್ ಹಾಗು ಅವರ ಅಳಿಯ ಧನುಷ್ ಸಿನಿಮಾಗಳಲ್ಲಿ ಅಭಿನಯಿಸುತ್ತಿರೋದು ನನಗೆ ಖುಷಿ ಇದೆ ಎಂದು ಸೆಂಚುರಿ ಸ್ಟಾರ್​ ತಿಳಿಸಿದರು.

Last Updated :Dec 22, 2022, 8:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.