ETV Bharat / city

ಕುರುಕ್ಷೇತ್ರ ನಾಟಕದ ಪ್ರಸಂಗ ಹಾಡಿ ಅಭಿಮಾನಿಗಳನ್ನು ರಂಜಿಸಿದ ಡಾ.ಜಿ.ಪರಮೇಶ್ವರ್

author img

By

Published : Aug 9, 2021, 3:25 PM IST

MLA Dr G. Parameshwar
ಕುರುಕ್ಷೇತ್ರ ನಾಟಕದ ಪ್ರಸಂಗವನ್ನು ಹಾಡಿದ ಡಾ.ಜಿ.ಪರಮೇಶ್ವರ್

ಸಿನಿಮಾಗಳಲ್ಲಿ ಕುರುಕ್ಷೇತ್ರ ಪ್ರಸಂಗಗಳನ್ನು ನೋಡಬಹುದು. ಆದರೆ, ಅದರ ಪಾತ್ರಗಳನ್ನು ಕಲಿತು ನಾಟಕದಲ್ಲಿ ಅಭಿನಯಿಸುವುದು ಬಹಳ ಕಠಿಣವಾಗಿರುತ್ತದೆ ಎಂದು ಶಾಸಕ ಡಾ.ಜಿ.ಪರಮೇಶ್ವರ್ ಹೇಳಿದರು.

ತುಮಕೂರು: ಕೊರಟಗೆರೆ ಪಟ್ಟಣದಲ್ಲಿ ನಡೆಯುತ್ತಿದ್ದ ಕುರುಕ್ಷೇತ್ರ ನಾಟಕದ ವೇಳೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ ಪರಮೇಶ್ವರ್ ನಾಟಕದಲ್ಲಿನ ಪ್ರಸಂಗವೊಂದರ ಮೇಲೆ ಹಾಡು ಹಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು.

ಕುರುಕ್ಷೇತ್ರ ನಾಟಕದ ಪ್ರಸಂಗವನ್ನು ಹಾಡಿದ ಡಾ.ಜಿ.ಪರಮೇಶ್ವರ್

ಸುಮಾರು 2 ನಿಮಿಷಗಳ ನಾಟಕದ ಹಾಡನ್ನು ತಾಳಕ್ಕೆ ತಕ್ಕಂತೆ ಹಾಡಿದರು. ಪರಮೇಶ್ವರ್ ಅವರ ಹಾಡನ್ನು ತದೇಕಚಿತ್ತದಿಂದ ಕೇಳಿಸಿಕೊಂಡ ಪಾತ್ರಧಾರಿಗಳು ಹಾಗೂ ಪ್ರೇಕ್ಷಕರು ಕೆಲಕಾಲ ಅಚ್ಚರಿ ವ್ಯಕ್ತಪಡಿಸಿ, ಚಪ್ಪಾಳೆಗಳ ಸುರಿಮಳೆಗೈದರು.

ಈ ವೇಳೆ ಮಾತನಾಡಿದ ಡಾ. ಪರಮೇಶ್ವರ್, ಚೂರಿ ತೆಗೆದುಕೊಂಡು ತಿವಿಯುವುದಿಲ್ಲ. ಬೇರೆ ರೀತಿ ತಿವಿಯಲಾಗುತ್ತದೆ. ಇದೇ ರಾಜಕಾರಣ ಎಂದು ತಿಳಿಸಿದರು. ಕುರುಕ್ಷೇತ್ರ ನಾಟಕ ಮುಂದಿನ ಪೀಳಿಗೆಗೆ ಬದುಕಿನ ಪಾಠ ಕಲಿಸುತ್ತದೆ. ಸಿನಿಮಾಗಳಲ್ಲಿ ಕುರುಕ್ಷೇತ್ರ ಪ್ರಸಂಗಗಳನ್ನು ನೋಡಬಹುದು. ಆದರೆ, ಅದರ ಪಾತ್ರಗಳನ್ನು ಕಲಿತು ನಾಟಕದಲ್ಲಿ ಅಭಿನಯಿಸುವುದು ಬಹಳ ಕಠಿಣವಾಗಿರುತ್ತದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.