ETV Bharat / city

ಶಿವಮೊಗ್ಗ: ಶರಾವತಿ‌ ಸಂತ್ರಸ್ತರಿಗೆ ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ ಪಾದಯಾತ್ರೆ

author img

By

Published : Sep 26, 2021, 4:57 PM IST

Sharavathi Victims padayatra
ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ ಪಾದಯಾತ್ರೆ

'ಶರಾವತಿ ಅಣೆಕಟ್ಟೆಗಾಗಿ ಎರಡು ಭಾರಿ ಭೂಮಿ ಹಾಗೂ ವಸತಿಯನ್ನು ಈ ಭಾಗದ ಜನ ಕಳೆದುಕೊಂಡಿದ್ದಾರೆ. ನಾಡಿಗೆ ಬೆಳಕು ನೀಡುವ ಸಲುವಾಗಿ ಪ್ರಾರಂಭವಾದ ಲಿಂಗನಮಕ್ಕಿ ಯೋಜನೆಯಿಂದ ಈ ಭಾಗದ ಜನ ಕತ್ತಲಲ್ಲಿ ಇರುವಂತಾಗಿದೆ. ಹಾಗಾಗಿ, ಸರ್ಕಾರ ಇವರಿಗೆ ಹಾಲಿ ಇರುವ ಕಡೆಯೇ ಭೂಮಿ ಹಾಗೂ ಅದರ ಹಕ್ಕು ಪತ್ರ ನೀಡಬೇಕು'- ಮಾಜಿ ಸಚಿವ ಕಾಗೋಡು ತಿಮ್ಮಪ್ಪ

ಶಿವಮೊಗ್ಗ: ಶರಾವತಿ, ಚಕ್ರ ಹಾಗು ಸಾವೆಹಕ್ಲು ಮುಳುಗಡೆ ಪ್ರದೇಶದ ನಿರಾಶ್ರಿತರಿಗೆ ಭೂಮಿ ಹಾಗೂ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಮೂರು ದಿನಗಳ ಪಾದಯಾತ್ರೆ ಇಂದು ಪ್ರಾರಂಭವಾಗಿದೆ. ತೀರ್ಥಹಳ್ಳಿ ತಾಲೂಕಿನ ಕಲ್ಲುಕೊಪ್ಪ ಗ್ರಾಮದಿಂದ ತೀರ್ಥಹಳ್ಳಿ ಪಟ್ಟಣದವರೆಗೂ ಈ ಪಾದಯಾತ್ರೆ ನಡೆಯಲಿದೆ.

ಇಂದಿನಿಂದ 45 ಕಿಮೀ ದೂರದ ಪಾದಯಾತ್ರೆ ನಡೆಯಲಿದ್ದು, ಕಲ್ಲುಕೊಪ್ಪ ಗ್ರಾಮದಿಂದ ಪ್ರಾರಂಭವಾಗಿ ಕನ್ನಂಗಿ ಗ್ರಾಮದವರೆಗೂ ನಡೆಯಲಿದೆ. ನಾಳೆ (ಸೋಮವಾರ) ಕನ್ನಂಗಿಯಿಂದ ಕುಡುಮಲ್ಲಿಗೆವರೆಗೆ, ಮಂಗಳವಾರ ಕುಡುಮಲ್ಲಿಗೆಯಿಂದ ತೀರ್ಥಹಳ್ಳಿ ಪಟ್ಟಣದವರೆಗೆ ಪಾದಯಾತ್ರೆ ನಿಗದಿಯಾಗಿದೆ.

ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ ಪಾದಯಾತ್ರೆ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಚಾಲನೆ

ಕಲ್ಲುಕೊಪ್ಪದಿಂದ ಪ್ರಾರಂಭವಾದ ಪಾದಯಾತ್ರೆಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ದೀಪ ಬೆಳಗಿ ಚಾಲನೆ‌ ನೀಡಿ, ಪಾದಯಾತ್ರೆಯಲ್ಲಿ ಭಾಗಿಯಾದರು. ಬಳಿಕ ಮಾತನಾಡುತ್ತಾ, 'ಶರಾವತಿ ಅಣೆಕಟ್ಟೆಗಾಗಿ ಎರಡು ಭಾರಿ ಭೂಮಿ ಹಾಗೂ ವಸತಿಯನ್ನು ಈ ಭಾಗದ ಜನ ಕಳೆದುಕೊಂಡಿದ್ದಾರೆ. ನಾಡಿಗೆ ಬೆಳಕು ನೀಡುವ ಸಲುವಾಗಿ ಪ್ರಾರಂಭವಾದ ಲಿಂಗನಮಕ್ಕಿ ಯೋಜನೆಯಿಂದ ಈ ಭಾಗದ ಜನ ಕತ್ತಲಲ್ಲಿ ಇರುವಂತಾಗಿದೆ. ಹಾಗಾಗಿ ಸರ್ಕಾರ ಇವರಿಗೆ ಹಾಲಿ ಇರುವ ಕಡೆಯೇ ಭೂಮಿ ಹಾಗೂ ಅದರ ಹಕ್ಕು ಪತ್ರ ನೀಡಬೇಕು' ಎಂದು ಆಗ್ರಹಿಸಿದರು.

ಜೆಡಿಎಸ್​​ನ ರಾಜ್ಯಕಾರ್ಯದರ್ಶಿ ಎಸ್.ಶ್ರೀಕಾಂತ್, ಆರ್.ಎಂ.ಮಂಜುನಾಥ ಗೌಡ, ಸುನೀಲ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.