ETV Bharat / city

ಕನ್ನಡ ಕಲಿಸಿದ ಕರುನಾಡ ಯುವತಿಯ ಕೈಹಿಡಿದ ನೆದರ್‌ಲ್ಯಾಂಡ್‌ ಪೋರ!

author img

By

Published : Nov 3, 2019, 9:44 PM IST

ನೆದರ್‌ಲ್ಯಾಂಡ್‌ ಯುವಕನ ಮದುವೆಯಾದ ಕನ್ನಡತಿ

ಪ್ರೀತಿಗೆ ಜಾತಿ, ದೇಶ, ಸಂಸ್ಕೃತಿ ಯಾವುದೂ ಮುಖ್ಯವಲ್ಲ. ನಂಬಿಕೆಯೊಂದೇ ಇದರ ಜೀವಾಳವೆಂದು ಸಾಂಸ್ಕೃತಿಕ ನಗರಿಯ ಯುವತಿಯೋರ್ವಳು ನೆದರ್‌ಲ್ಯಾಂಡ್‌ ಯುವಕನೊಂದಿಗೆ ಹಿಂದೂ ಸಂಪ್ರದಾಯದಂತೆ ಹಸಮಣೆ ಏರಿದ್ದಾಳೆ. ಕನ್ನಡ ಕಲಿತು ಕರುನಾಡ ಯುವತಿಗೆ ಮನಸೋತನ ಯುವಕ ಆಕೆಗೆ ಬಾಳುಕೊಟ್ಟು ಪ್ರೇಮ ಸಂದೇಶ ಸಾರಿದ್ದಾನೆ.

ಮೈಸೂರು: ಅದು ಜಾತಿ, ದೇಶ, ಸಂಸ್ಕೃತಿ ಮೀರಿದ ಪ್ರೀತಿ.. ಸಾಗರದಾಚೆಯ ಹುಡುಗನೋರ್ವ ಕರುನಾಡ ಯುವತಿಯಿಂದ ಕನ್ನಡ ಕಲಿತು ನೆದರ್​ಲ್ಯಾಂಡ್​ನಲ್ಲಿ ಪ್ರೇಮಲೋಕ ಸೃಷ್ಟಿಸಿದ ವಿಶಿಷ್ಟ ಕಥೆಯಿದು.

ಹೌದು, ಎತ್ತಣದ ಮಾಮರವೋ, ಎತ್ತಣದ ಕೋಗಿಲೆಯೋ ಹಾಡಾಗಲು ಎಂಬಂತೆ ಪ್ರೀತಿ ಚಿಗರೊಡೆದು ಜೋಡಿಹಕ್ಕಿಗಳು ಒಂದಾಗಲು ಯಾವುದೇ ಗಡಿಯ ಮಿತಿ ಇಲ್ಲ ನೋಡಿ. ಅಂತೆಯೇ ಕನ್ನಡ ಕಲಿತ ಸಾಗರದಾಚೆಯ ಯುವಕನೋರ್ವ ನಂಬಿಕೆಯೊಂದೇ ಪ್ರೀತಿಗೆ ಜೀವಾಳವೆಂದು ಸಾಂಸ್ಕೃತಿಕ ನಗರಿಯ ಯುವತಿವೋರ್ವಳಿಗೆ ಬಾಳು ಕೊಟ್ಟಿದ್ದಾನೆ. ನೆದರ್‌ಲ್ಯಾಂಡ್‌ ಯುವಕ ಹಿಂದೂ ಸಂಪ್ರದಾಯದಂತೆ ಮೈಸೂರಲ್ಲಿ ಹಸಮಣೆ ಏರುವ ಮೂಲಕ ಪ್ರೇಮ ಸಂದೇಶ ಸಾರಿದ್ದಾನೆ.

ನೆದರ್‌ಲ್ಯಾಂಡ್‌ ಯುವಕನ ಮದುವೆಯಾದ ಕನ್ನಡತಿ

ವಕೀಲೆ ಸುಮನಾ ಮತ್ತು ರಾಮ ರವೀಂದ್ರ ದಂಪತಿಯ ಪುತ್ರಿ ಅನು ಅವರನ್ನು ನೆದರ್‌ಲ್ಯಾಂಡ್‌ನ ರೆನೆ ವ್ಯಾನ್ ಬೋರ್ಗೆಟ್ ಎಂಬಾತ ಇಂದು ಖಾಸಗಿ ಕಲ್ಯಾಣಮಂಟಪದಲ್ಲಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ.

ನೆದರ್‌ಲ್ಯಾಂಡ್‌ನಲ್ಲೇ ಅರಳಿದ ಪ್ರೀತಿ!:

ಎಲ್‌ಎಲ್‌ಎಂ (ಲ್ಯಾಟಿನ್ ಲೆಗಮ್ ಮ್ಯಾಜಿಸ್ಟರ್) ವ್ಯಾಸಂಗ ಮಾಡಲು ಅನು ನೆದರ್‌ಲ್ಯಾಂಡ್‌ಗೆ ಹೋಗಿದ್ದಾಗ ರೆನೆಯನ್ನು ಭೇಟಿಯಾಗಿದ್ದರು. ಇಬ್ಬರ ಪರಿಚಯ ಸ್ನೇಹವಾಗಿ ಬಳಿಕ ಪ್ರೇಮಾಂಕುರವಾಗಿ ಮಾರ್ಪಟ್ಟಿತ್ತು. ಆಗಲೇ ಬ್ಯಾಂಕಿಂಗ್ ಅಡ್ವೈಸರ್ ಆಗಿ ಕೆಲಸ ಮಾಡುತ್ತಿರುವ ರೆನೆಗೆ ಅನು ಮೇಲೆ ಕ್ರಶ್​ ಆಗಿ ಮುಂದೆ ಮದುವೆಯಾಗಲು ಆಗಲೇ ನಿರ್ಧರಿಸಿದ್ದರಂತೆ.

ನೆದರ್‌ಲ್ಯಾಂಡ್‌ನಲ್ಲಿ ಕನ್ನಡದ ಕಂಪು:

ಪ್ರೀತಿ ಶುರುವಾದಾಗಿನಿಂದಲೇ ರೆನೆಗೆ ಕನ್ನಡ ಮಾತನಾಡುವುದನ್ನು ಅನು ಹೇಳಿಕೊಡುತ್ತಿದ್ದರಂತೆ. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂಬುದು ನಾನು ಹೇಳಿಕೊಟ್ಟ ಮೊದಲ ಕನ್ನಡ ವಾಕ್ಯ ಎಂದು ಅನು ನಾಚಿಕೆಯಿಂದ ಹೇಳಿದ್ರು. ಸ್ವತಃ ರೆನೆ ಆಸಕ್ತಿಯಿಂದ ಕನ್ನಡ ಮಾತನಾಡುವುದನ್ನು ಕಲಿತುಕೊಳ್ಳುತ್ತಿದ್ದು, ರೆನೆ ತಂದೆ-ತಾಯಿ ಸಹ ಅನುವನ್ನು ಸೊಸೆ ಎಂದು ಪ್ರೀತಿ ತೋರಿಸುತ್ತಿದ್ದಾರೆ. ಹೀಗೆ ವಿದೇಶಿ ನೆಂಟರು ಕನ್ನಡ ಕಲಿತು ಕನ್ನಡದಲ್ಲೇ ಮಾತನಾಡುತ್ತಿದ್ದ ದೃಶ್ಯಗಳು ಮದುವೆ ಶಾಸ್ತ್ರದ ವೇಳೆ ವಿಶೇಷವಾಗಿತ್ತು.

ಲಿಂಗ ತಾರತಮ್ಯ ಸಾರುವ ಸಂಪ್ರದಾಯಗಳನ್ನು ದೂರವಿಟ್ಟ ಸುಮನಾ-ರವೀಂದ್ರ ದಂಪತಿ ಪ್ರಕೃತಿಯನ್ನು ಪೂಜಿಸಿ ಮದುವೆ ಮಾಡಿದರು. ದೀಪಾವಳಿ ಹಬ್ಬ, ಭತ್ತ ಕುಟ್ಟುವುದು, ಮೆಹೆಂದಿ, ಹೋಳಿ, ಅರಿಶಿನ ಹಚ್ಚುವ ಶಾಸ್ತ್ರ, ಹೋಮ, ಹಿರಿಯರ ಪಾದಪೂಜೆ, ಗೌರಿ ಪೂಜೆಯನ್ನು ನೆರವೇರಿಸಿದರು. ಪೋಲ್ಯಾಂಡ್, ಅಮೆರಿಕ, ಸ್ಪೇನ್, ಜರ್ಮನಿ, ನೆದರ್‌ಲ್ಯಾಂಡ್ ಮುಂತಾದ 6-7 ದೇಶಗಳಿಂದ ಬಂದಿದ್ದ ಸುಮಾರು 40 ಜನರು ಎಲ್ಲಾ ಆಚರಣೆಗಳನ್ನೂ ಬೆರಗು ಗಣ್ಣಿನಿಂದ ನೋಡುತ್ತಾ ತಾವೂ ಎಲ್ಲದರಲ್ಲೂ ಭಾಗಿಯಾದರು.

marriage
ಅನು , ರೆನೆ ವ್ಯಾನ್ ಬೋರ್ಗೆಟ್
Intro:ಮದುವೆBody:ಮೈಸೂರು: ಪ್ರೀತಿ ಜಾತಿ,ದೇಶ,ಸಂಸ್ಕೃತಿ ಯಾವುದೇ ಅಡ್ಡಿ ಬರುವುದಿಲ್ಲ, ನಂಬಿಕೆಯೊಂದು ಇದರ ಜೀವಳವೆಂದು ಸಾಂಸ್ಕೃತಿಕ ನಗರಿ ಯುವತಿ ಹಾಗೂ ನೆದರ್‌ಲ್ಯಾಂಡ್‌ನ ಯುವಕ ಹಿಂದೂ ಸಂಪ್ರದಾಯದಂತೆ ಹಸಮಣೆ ಏರುವ ಮೂಲಕ ‘ಪ್ರೇಮ ಸಂದೇಶ ಸಾರಿದ್ದಾರೆ.
ವಕೀಲೆ ಸುಮನಾ ಮತ್ತು ರಾಮರವೀಂದ್ರ ಅವರ ಪುತ್ರಿ ಅನು ಅವರನ್ನು ನೆದರ್‌ಲ್ಯಾಂಡ್‌ನ ರೆನೆ ವ್ಯಾನ್ ಬೋರ್ಗೆಟ್ ಅವರನ್ನು ಭಾನುವಾರ ಖಾಸಗಿ ಕಲ್ಯಾಣಮಂಟಪವೊಂದರಲ್ಲಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅನು ಅವರು ನೆದರ್‌ಲ್ಯಾಂಡ್‌ಗೆ ಎಲ್‌ಎಲ್ ಎಂ(ಲ್ಯಾಟಿನ್ ಲೆಗಮ್ ಮ್ಯಾಜಿಸ್ಟರ್) ಅಧ್ಯಯನ ಮಾಡಲು ತೆರಳಿದಾಗ ಅನು ಅಲ್ಲಿ ಪರಿಚಯವಾದ ರೆನೆ ಅವರ ಸ್ನೇಹ ಎರಡು ಮನಸ್ಸುಗಳನ್ನು ಒಗ್ಗೂಡಿಸಿ ದೇಶಗಳ ಗಡಿದಾಡಿ ವಿವಾಹವೇದಿಕೆ ಒದಗಿಸಿತು.
ನೆದರ್‌ಲ್ಯಾಂಡ್‌ನಲ್ಲೇ ಅರಳಿದ ಪ್ರೀತಿ!:
ಎಲ್‌ಎಲ್‌ಎಂ ವ್ಯಾಸಂಗ ಮಾಡಲು ಅನು, ನೆದರ್‌ಲ್ಯಾಂಡ್‌ಗೆ ಹೋಗಿದ್ದಾಗ ರೆನೆಯನ್ನು ಭೇಟಿಯಾಗಿದ್ದಾರೆ. ಇಬ್ಬರ ಪರಿಚಯ ಸ್ನೇಹವಾಗಿ ಶುರುವಾಗಿ ಪ್ರೀತಿಯಾಗಿ ಮಾರ್ಪಟ್ಟಿದೆ. ಮಾರ್ಟಗೇಜ್ ಬ್ಯಾಂಕಿಂಗ್ ಅಡ್ವೈಸರ್ ಆಗಿ ಕೆಲಸ ಮಾಡುತ್ತಿರುವ ರೆನೆ ಹಾಗೂ ಅನು ದಾಂಪತ್ಯಕ್ಕೆ ಕಾಲಿರಿಸಲು ಆಗಲೇ ನಿರ್ಧರಿಸಿದ್ದರಂತೆ.
ನೆದರ್‌ಲ್ಯಾಂಡ್‌ನಲ್ಲಿ ಕನ್ನಡ ಕಂಪು:
ಪ್ರೀತಿ ಶುರುವಾದಾಗಿನಿಂದಲೇ ರೆನೆಗೆ ಕನ್ನಡ ಮಾತನಾಡುವುದನ್ನು ಅನು ಹೇಳಿಕೊಡುತ್ತಿದ್ದರಂತೆ. ‘ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂಬುದು ನಾನು ಅವನಿಗೆ ಹೇಳಿಕೊಟ್ಟ ಮೊದಲ ಕನ್ನಡ ವಾಕ್ಯ’ ಎನ್ನುವಾಗ ಅನು ಕಣ್ಣುಗಳಲ್ಲಿ ನಾಚಿಕೆಯೂ ಕಂಡಿತು. ಸ್ವತಃ ರೆನೆ ಆಸಕ್ತಿಯಿಂದ ಕನ್ನಡ ಮಾತನಾಡುವುದನ್ನು ಕಲಿತುಕೊಳ್ಳುತ್ತಾರೆ. ರೆನೆ ತಂದೆ-ತಾಯಿ ಸಹ ಅನುವನ್ನು ಸೊಸೆ ಎಂದು ಸಂಭೋದಿಸುತ್ತಾರೆ. ಹೀಗೆ ವಿದೇಶೀ ನೆಂಟರು ಕನ್ನಡ ಕಲಿತು ಕನ್ನಡದಲ್ಲೇ ಮಾತನಾಡುತ್ತಿದ್ದ ದೃಶ್ಯಗಳು ಮದುವೆ ಶಾಸದ ವೇಳೆ ವಿಶೇಷ ಕಳೆಗಟ್ಟಿತು.
ಲಿಂಗ ತಾರತಮ್ಯ ಸಾರುವ ಸಂಪ್ರದಾಯಗಳನ್ನು ದೂರವಿಟ್ಟ ಸುಮನಾ-ರವೀಂದ್ರ ದಂಪತಿ ಪ್ರಕೃತಿಯನ್ನು ಪೂಜಿಸಿ ಮದುವೆ ಮಾಡಿದರು. ದೀಪಾವಳಿ ಹಬ್ಬ, ಭತ್ತ ಕುಟ್ಟುವುದು, ಮೆಹೆಂದಿ, ಹೋಳಿ, ಅರಿಶಿನ ಹಚ್ಚುವ ಶಾಸ, ಹೋಮ, ಹಿರಿಯರ ಪಾದಪೂಜೆ, ಗೌರಿ ಪೂಜೆಯನ್ನು ಮಾಡಿದರು. ಪೋಲ್ಯಾಂಡ್, ಅಮೆರಿಕಾ, ಸ್ಪೇನ್, ಜರ್ಮನಿ, ನೆದರ್‌ಲ್ಯಾಂಡ್ ಮುಂತಾದ 6-7 ದೇಶಗಳಿಂದ ಬಂದಿದ್ದ ಸುಮಾರು 40 ಜನರು ಎಲ್ಲಾ ಆಚರಣೆಗಳನ್ನೂ ಬೆರಗುಗಣ್ಣಿನಿಂದ ನೋಡುತ್ತಾ ತಾವೂ ಎಲ್ಲದರಲ್ಲೂ ಭಾಗಿಯಾದರು.Conclusion: ಮದುವೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.