ETV Bharat / city

'ಶಿಖರದಿಂದ ಸಾಗರಯಾನ' ಮಲ್ಪೆಗೆ ಆಗಮಿಸಿದ ಸಾಹಸಿ ಯುವತಿಯರ ಕಯಾಕಿಂಗ್‌ ತಂಡ

author img

By

Published : Oct 29, 2021, 10:37 PM IST

Updated : Oct 29, 2021, 11:03 PM IST

kayaking-team-reached-malpe-beach
ಕಯಾಕಿಂಗ್‌ ತಂಡ

ಯುವತಿಯರು ಸಾಹಸ ಕ್ರೀಡೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸುವ ಜತೆಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುವ ದಿಟ್ಟ ನಿರ್ಧಾರ ಮಾಡಬೇಕು..

ಮಲ್ಪೆ : 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ 'ಶಿಖರದಿಂದ ಸಾಗರ ಯಾನ'ದಲ್ಲಿ ಭಾಗಿಯಾಗಿರುವ ರಾಜ್ಯದ 5 ಯುವತಿಯರು ಮಲ್ಪೆಗೆ ಆಗಮಿಸಿದ್ದಾರೆ.

ಮಲ್ಪೆಗೆ ಆಗಮಿಸಿದ ಸಾಹಸಿ ಯುವತಿಯರ ಕಯಾಕಿಂಗ್‌ ತಂಡ

ಕಾಶ್ಮೀರದಲ್ಲಿ ಕೋಲ್‌ಹೈ (5,425 ಮೀ.) ಶಿಖರವನ್ನು ಯಸ್ವಿಯಾಗಿ ಏರಿ, ಲಡಾಖ್‌ನಿಂದ 3,000 ಕಿ.ಮೀ. ಸೈಕಲ್‌ ಯಾನ ಮುಗಿಸಿ, ಕಾರವಾರದಿಂದ ರಾಜ್ಯ ಕರಾವಳಿಯ 300 ಕಿ.ಮೀ. ಸಮುದ್ರದಲ್ಲಿ ಕಯಾಕಿಂಗ್‌ ಯಾನ ಮಾಡುತ್ತ ಮಲ್ಪೆ ಸಮುದ್ರ ತೀರಕ್ಕೆ ಆಗಮಿಸಿದ್ದಾರೆ.

ಮಲ್ಪೆ ಸಮದ್ರ ತೀರದಲ್ಲಿ ಜಿಲ್ಲಾಡಳಿತದ ಪರವಾಗಿ ಪ್ರಭಾರ ಜಿಲ್ಲಾಧಿಕಾರಿ ಜಿಪಂ ಸಿಇಒ ಡಾ. ನವೀನ್‌ ಭಟ್‌ ಯುವತಿಯರನ್ನು ಸ್ವಾಗತಿಸಿದರು. ಯುವತಿಯರು ಸಾಹಸ ಕ್ರೀಡೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸುವ ಜತೆಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುವ ದಿಟ್ಟ ನಿರ್ಧಾರ ಮಾಡಬೇಕು ಎಂದು ಸಲಹೆ ನೀಡಿದರು.

Last Updated :Oct 29, 2021, 11:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.