ETV Bharat / city

ಕಲಬುರಗಿ: PSI ಆಗಲೇಬೆಕೆಂಬ ಹಠ..ದೈಹಿಕ ಪರೀಕ್ಷೆಯಲ್ಲಿ 1:36 ನಿಮಿಷದಲ್ಲೇ 400 ಮೀಟರ್ ಓಡಿದ ಗರ್ಭಿಣಿ!

author img

By

Published : Aug 13, 2021, 12:20 PM IST

Updated : Aug 13, 2021, 4:57 PM IST

pregnant participated in PSI physical test in kalaburagi
ಪಿಎಸ್​ಐ ಫಿಜಿಕಲ್ ಟೆಸ್ಟ್‌ನಲ್ಲಿ ಪಾಲ್ಗೊಂಡ ಗರ್ಭಿಣಿ

ಎರಡು ದಿನದ ಹಿಂದೆ ಕಲಬುರಗಿಯ ಡಿಎಆರ್ ಮೈದಾನದಲ್ಲಿ ಪೊಲೀಸ್ ಸಬ್‌ಇನ್ಸ್​​ಪೆಕ್ಟರ್ ನೇಮಕಾತಿಯ ದೈಹಿಕ ಪರೀಕ್ಷೆ (ಫಿಜಿಕಲ್ ಟೆಸ್ಟ್‌) ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಗರ್ಭಿಣಿ 1.36 ನಿಮಿಷದಲ್ಲಿ 400 ಮೀಟರ್ ದೂರ ಓಡಿದ್ದಾರೆ.

ಕಲಬುರಗಿ: ಇಂಜಿನಿಯರಿಂಗ್ ಪದವಿ ಮುಗಿಸಿದ ಮಹಿಳೆ ಪೊಲೀಸ್ ಇಲಾಖೆ ಸೇರುವ ಗುರಿ ಹೊಂದಿದ್ದು, ಇದನ್ನು ಈಡೇರಿಸಿಕೊಳ್ಳಲು ತಾನು ಗರ್ಭಿಣಿ ಅನ್ನೋದನ್ನೂ ಮರೆತು 400 ಮೀಟರ್​ ಓಡಿ ಅಚ್ಚರಿ ಮೂಡಿಸಿದ್ದಾರೆ.

24 ವರ್ಷದ ಈ ಮಹಿಳೆಯ ಹೆಸರು ಅಶ್ವಿನಿ ಸಂತೋಶ್​ ಕೋರೆ. ಮೂಲತಃ ಬೀದರ್​ ಜಿಲ್ಲೆಯವರು. ಓದಿನಲ್ಲಿ ಚುರುಕಾಗಿರುವ ಇವರು ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. ಇಂಜಿನಿಯರಿಂಗ್ ಪದವಿ ಪೂರೈಸಿರುವ ಇವರಿಗೆ ಯಾವುದಾದರೊಂದು ಉದ್ಯೋಗ ಗಿಟ್ಟಿಸಿಕೊಳ್ಳುವುದು ಕಷ್ಟದ ಕೆಲಸವಾಗಿರಲಿಲ್ಲ. ಆದರೆ ಪೊಲೀಸ್ ಸಬ್ ಇನ್ಸ್​​ಪೆಕ್ಟರ್​​ ಆಗಬೇಕು ಅನ್ನೋ ಛಲ ಇವರಲ್ಲಿದೆ. ಇದೇ ಕಾರಣಕ್ಕೆ ಕಠಿಣ ಪರಿಶ್ರಮ ಪಟ್ಟಿದ್ದು, ಈಗಾಗಲೇ ಎರಡು ಬಾರಿ ಫಿಜಿಕಲ್ ಟೆಸ್ಟ್‌ನಲ್ಲಿ ಪಾಸ್ ಆಗಿದ್ದಾರೆ. ಇವರು ಲಿಖಿತ ಪರೀಕ್ಷೆ (ರಿಟನ್ ಟೆಸ್ಟ್)​​ ಮುಗಿಸಿಲ್ಲ. ಎರಡು ಬಾರಿ ಹಿನ್ನಡೆ ಅನುಭವಿಸಿದರೂ ಛಲ ಬಿಡದೆ, ಮೂರನೇ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆದರೆ ಮೂರನೇ ಪ್ರಯತ್ನದ ವೇಳೆಗೆ ಇವರು ಗರ್ಭಿಣಿಯಾಗಿದ್ದಾರೆ.

ತನ್ನ ನಿರ್ಧಾರದಿಂದ ಹಿಂದೆ ಸರಿಯದ ಅಶ್ವಿನಿ, ಗರ್ಭಾವಸ್ಥೆಯಲ್ಲಿಯೇ ತನ್ನ ಹಾಗೂ ತನ್ನ ಕಂದನ ಪ್ರಾಣ ಪಣಕ್ಕಿಟ್ಟು ಪೊಲೀಸ್ ಫಿಜಿಕಲ್ ಟೆಸ್ಟ್‌ನಲ್ಲಿ ಪಾಲ್ಗೊಂಡಿದ್ದಾರೆ. ಕಲಬುರಗಿಯ ಡಿಎಆರ್ ಮೈದಾನದಲ್ಲಿ ನಡೆದ ಪೊಲೀಸ್ ಸಬ್‌ಇನ್ಸ್​​ಪೆಕ್ಟರ್ ನೇಮಕಾತಿಯ ಫಿಜಿಕಲ್ ಟೆಸ್ಟ್‌ನಲ್ಲಿ 1.36 ನಿಮಿಷದಲ್ಲಿ 400 ಮೀಟರ್ ದೂರ ಓಡಿದ್ದಾರೆ. ಅರ್ಹತಾ ಮಾನದಂಡ ಪ್ರಕಾರ 2 ನಿಮಿಷಗಳ ಒಳಗೆ 400 ಮೀಟರ್​ ದೂರ ಕ್ರಮಿಸಬೇಕಿತ್ತು. ಹೀಗೆ ಲಾಂಗ್​ ಜಂಪ್​, ಶಾಟ್​​ಪುಟ್​​ ಮತ್ತು 400 ಮೀಟರ್​ ಓಟವನ್ನು ಅಶ್ವಿನಿ ಕ್ಲೀಯರ್​ ಮಾಡಿದ್ದಾರೆ.​

ವೈದ್ಯರ ಸಲಹೆಯೇನಿತ್ತು?

ಫಿಜಿಕಲ್ ಟೆಸ್ಟ್​​ನಲ್ಲಿ ಪಾಲ್ಗೊಳ್ಳುವುದು ಬೇಡವೆಂದು ವೈದ್ಯರು ಸಲಹೆ ನೀಡಿದ್ದರಂತೆ. ಆದರೂ ಅಶ್ವಿನಿ ತನ್ನ ಜೀವ ಮಾತ್ರವಲ್ಲದೆ, ಕಂದನ ಜೀವ ಕೂಡಾ ಪಣಕ್ಕೆ ಇಟ್ಟು ಹೋರಾಡಿದ್ದಾರೆ.

ಪೊಲೀಸ್ ಅಧಿಕಾರಿಗಳು ಹೇಳುವುದೇನು?

ಈ ಬಗ್ಗೆ ಈಶಾನ್ಯ ವಲಯ ಐಜಿಪಿ ಮನೀಶ್ ಕರ್ಬಿಕರ್ ಪ್ರತಿಕ್ರಿಯಿಸಿ, ನೇಮಕಾತಿಗೆ ಸಮಿತಿ ರಚಿಸಲಾಗಿದೆ. ದೈಹಿಕ ಪರೀಕ್ಷೆಯಲ್ಲಿ ಗರ್ಭಿಣಿ ಇರುವುದು ಸಮಿತಿಯ ಗಮನಕ್ಕೆ ಬಂದಿಲ್ಲ. ಗರ್ಭಿಣಿಯರು ಪೊಲೀಸ್ ಫಿಜಿಕಲ್ ಟೆಸ್ಟ್‌‌ನಲ್ಲಿ ಪಾಲ್ಗೊಳ್ಳುವಂತಿಲ್ಲ. ಇದಕ್ಕೆ ಇಲಾಖೆ ಅನುಮತಿ ಕೂಡಾ ಕೊಡುವುದಿಲ್ಲ. ಹಾಗಾಗಿ ಮಹಿಳೆಯರು ತಮ್ಮ ಗರ್ಭಾವಸ್ಥೆಯನ್ನು ಮುಚ್ಚಿಡುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ಅಂಗಾಂಗ ದಾನಕ್ಕೆ ಸಹಿ ಹಾಕುವೆ, ಜೀವಗಳ ಉಳಿಸುವ ಕಾರ್ಯಕ್ಕೆ ಮುಂದಾಗೋಣ: ಸಿಎಂ ಬೊಮ್ಮಾಯಿ

Last Updated :Aug 13, 2021, 4:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.