ETV Bharat / city

ಕಟ್ಟಡ ನಿರ್ಮಾಣದ ವೇಳೆ ಆಯತಪ್ಪಿ ರಾಡ್ ಮೇಲೆ ಬಿದ್ದ ಕಾರ್ಮಿಕ: ಗಂಭೀರ ಗಾಯ

author img

By

Published : Sep 15, 2021, 6:40 AM IST

Labor
ಗಂಭೀರವಾಗಿ ಗಾಯಗೊಂಡ ಕಾರ್ಮಿಕ

ಹುಬ್ಬಳ್ಳಿಯ ಮಂಟೂರ ರಸ್ತೆ ಬಳಿ ಕಟ್ಟಡ ನಿರ್ಮಾಣದ ವೇಳೆ ಕಾರ್ಮಿಕನೊಬ್ಬ ಆಯತಪ್ಪಿ ರಾಡ್ ಮೇಲೆ ಬಿದ್ದಿದ್ದು, ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾನೆ.

ಹುಬ್ಬಳ್ಳಿ: ಕಟ್ಟಡ ನಿರ್ಮಾಣ ವೇಳೆ ಕಾರ್ಮಿಕನೊಬ್ಬನ ಕೈಗೆ ಕಬ್ಬಿಣದ ರಾಡ್ ಬಲವಾಗಿ ಚುಚ್ಚಿದ ಪರಿಣಾಮ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿ ನಡೆದಿದೆ.

ಹಸನಸಾಬ್​ ಗಂಭೀರವಾಗಿ ಗಾಯಗೊಂಡ ಕಾರ್ಮಿಕ. ಈತ ಕಟ್ಟಡ ನಿರ್ಮಾಣದ ವೇಳೆ ಆಯತಪ್ಪಿ ರಾಡ್ ಮೇಲೆ ಬಿದ್ದಿದ್ದಾನೆ. ಈ ವೇಳೆ ಹಸನಸಾಬ ಬಲಗೈಗೆ ಕಬ್ಬಿಣದ ರಾಡ್ ಚುಚ್ಚಿದ್ದು, ಗಾಯಾಳುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.