ETV Bharat / city

ಹುಬ್ಬಳ್ಳಿಯಲ್ಲಿ ಹಾಡಹಗಲೇ ಫೈನಾನ್ಸ್ ಕಚೇರಿಗೆ ನುಗ್ಗಿ ₹4 ಲಕ್ಷ ಲೂಟಿ

author img

By

Published : May 18, 2022, 9:22 AM IST

ಹುಬ್ಬಳ್ಳಿಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಹಾಡಹಗಲೇ ಸಿನಿಮೀಯ ರೀತಿಯಲ್ಲಿ ಫೈನಾನ್ಸ್ ಕಚೇರಿ ದರೋಡೆ ಪ್ರಕರಣ ನಡೆದಿದೆ.
Hubali Finance Robbery Case
ಫೈನಾನ್ಸ್​ಗೆ ನುಗ್ಗಿ ದರೋಡೆ

ಹುಬ್ಬಳ್ಳಿ: ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪೋಸ್ಟ್​​ ಆಫೀಸ್ ಹಿಂದಿರುವ ರೇಣುಕಾದೇವಿ ಫೈನಾನ್ಸ್​ ಕಚೇರಿಯಲ್ಲಿ ಖದೀಮರು ದರೋಡೆ ಮಾಡಿದ್ದಾರೆ. ಮಂಜುನಾಥ ಸೊನ್ನದ ಎಂಬುವವರಿಗೆ ಸೇರಿದ ಫೈನಾನ್ಸ್​​ಗೆ ನುಗ್ಗಿದ ದುಷ್ಕರ್ಮಿಗಳು ಬಾಗಿಲು ಗಾಜು ಒಡೆದು 4 ಲಕ್ಷ ರೂ. ದೋಚಿದ್ದಾರೆ ಎಂದು ತಿಳಿದು ಬಂದಿದೆ.


ಫೈನಾನ್ಸ್​​ನಲ್ಲಿ ಕೆಲಸ ಮಾಡುವ ಯುವಕರು ಊಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಪ್ರಕರಣದ ಆರೋಪಿಗಳು ಫೋನ್​​ ಮಾಡಿ ಮಾಲೀಕನಿಗೆ ಅವಾಜ್ ಕೂಡ ಹಾಕಿದ್ದಾರಂತೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಹಳೆ ಹುಬ್ಬಳ್ಳಿ ಠಾಣೆ ಪೊಲೀಸರು ಫೋನ್​​ ಸಂಭಾಷಣೆ ಆಧಾರವಾಗಿಟ್ಟು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ವಿವಾಹೇತರ ಸಂಬಂಧ: ಸ್ನೇಹಿತ, ಪತ್ನಿ ಜೊತೆಗೂಡಿ ಗಂಡನ ಮೇಲೆ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.