ETV Bharat / city

ಸರ್ಕಾರಿ ಐಟಿಐ ಕಾಲೇಜು ಪರೀಕ್ಷೆಯಲ್ಲಿ ಮಾಸ್​ ಕಾಪಿ: ಉಪನ್ಯಾಸಕಿಗೆ ಕೊಲೆ ಬೆದರಿಕೆ- ವಿಡಿಯೋ ವೈರಲ್

author img

By

Published : Aug 8, 2022, 1:16 PM IST

Updated : Aug 8, 2022, 3:58 PM IST

ಸಾಮೂಹಿಕ ನಕಲು ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬೆನ್ನಲ್ಲೇ ‌ಬೆಂಗಳೂರಿನ ಐಟಿಐ ನಿರ್ದೇಶಕಿ ಜ್ಯೋತಿ ಕೆ. ಅವರು ಪ್ರಕರಣದ ಪ್ರಾಥಮಿಕ ತನಿಖೆ ವರದಿ ನೀಡುವಂತೆ ಜಂಟಿ ನಿರ್ದೇಶಕರಿಗೆ ಸೂಚಿಸಿದ್ದಾರೆ.

Mass Copy in Govt ITI College Test
ಸರ್ಕಾರಿ ಐಟಿಐ ಕಾಲೇಜು ಪರೀಕ್ಷೆಯಲ್ಲಿ ಸಾಮೂಹಿಕ ನಕಲು

ದಾವಣಗೆರೆ : ಜಿಲ್ಲೆಯ ಮಾಯಕೊಂಡ ಸರ್ಕಾರಿ ಐಟಿಐ ಕಾಲೇಜಿನ ವೃತ್ತಿ ಪ್ರಾಯೋಗಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಸಾಮೂಹಿಕವಾಗಿ ನಕಲು ಮಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ. ಸರ್ಕಾರಿ ಐಟಿಐ ಕಾಲೇಜಿನಲ್ಲಿ ಆಗಸ್ಟ್ 3, 4 ರಂದು ನಡೆದ ಪ್ರಾಯೋಗಿಕ ಪರೀಕ್ಷೆಯಲ್ಲಿ ನಕಲು ನಡೆದಿದೆ ಎನ್ನಳಾಗ್ತಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳು ನಕಲು ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎರಡನೇ ವರ್ಷದ ಫಿಟ್ಟರ್ ಟ್ರೇಡ್ ಸೀನಿಯರ್ ಪ್ರಾಕ್ಟಿಕಲ್ ವಿಭಾಗದ ವೃತ್ತಿ ಪ್ರಾಯೋಗಿಕ‌ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಿದೆ ಎನ್ನಲಾಗ್ತಿದೆ.‌ ಈ ಪ್ರಾಯೋಗಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ರಾಜಾರೋಷವಾಗಿ ಚೀಟಿ ಇಟ್ಟುಕೊಂಡು ನಕಲು ಮಾಡುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ವಿದ್ಯಾರ್ಥಿಗಳಿಂದ ಮಾಯಕೊಂಡ ಐಟಿಐ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಕಾಳಚಾರ್ ಹಾಗು ಸಿದ್ದೇಶ್ ಇಬರಿಬ್ಬರು ಹಣ ಪಡೆದು ನಕಲು ಮಾಡಿಸಲು ಅವಕಾಶ ಕಲ್ಪಸಿದ್ದರು ಎಂಬ ಆರೋಪಗಳು ಕೇಳಿಬಂದಿವೆ.

ಸರ್ಕಾರಿ ಐಟಿಐ ಕಾಲೇಜು ಪರೀಕ್ಷೆಯಲ್ಲಿ ಸಾಮೂಹಿಕ ನಕಲು

ಐಟಿಐ ಕಾಲೇಜು ಉಪನ್ಯಾಸಕಿಗೆ ಕೊಲೆ ಬೆದರಿಕೆ: ಮಾಯಕೊಂಡ ಐಟಿಐ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿರುವ ರೇಖಾ ಅವರ ಮೇಲೆ ಪ್ರಭಾರಿ ಪ್ರಾಂಶುಪಾಲರಾದ ಕಾಳಚಾರ್‌ ಹಾಗು ಸಿದ್ದೇಶ್ ಎನ್ನುವವರು ಪರೀಕ್ಷೆಯಲ್ಲಿ ನಕಲು ಮಾಡಿಸಿದ ಪ್ರಕರಣವನ್ನು ಹೊರಿಸಲು ಯತ್ನ ನಡೆಸಿದ್ದಾರೆಂದು ರೇಖಾ ಅವರು ದೂರು ನೀಡಿದ್ದಾರೆ.‌

ಕಾಪಿ ಬಗ್ಗೆ ಹೊರಗಿನವರಿಗೆ ಮಾಹಿತಿ ನೀಡಿದ್ದಾರೆಂದು ಉಪನ್ಯಾಸಕಿಗೆ ಜೀವಬೆದರಿಕೆ‌ ಕರೆಗಳು ಬರುತ್ತಿದ್ದರಿಂದ ಉಪನ್ಯಾಸಕಿ ತಮಗೆ ಜೀವಬೆದರಿಕೆ ಕರೆ ಮಾಡಿದವರ ವಿರುದ್ಧ ಹರಿಹರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಮಾಯಕೊಂಡ ಐಟಿಐ ಕಾಲೇಜು ಉಪಪ್ರಾಂಶುಪಾಲ ಕಾಳಚಾರ್ ಹಾಗು ಸಿದ್ದೇಶ್ ಅವರ ಮೇಲೂ ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐಟಿಐ ನಿರ್ದೇಶಕರಿಂದ ಪ್ರಾಥಮಿಕ ತನಿಖೆಗೆ ಆದೇಶ: ಸಾಮೂಹಿಕ ನಕಲು ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬೆನ್ನಲ್ಲೇ ‌ಬೆಂಗಳೂರಿನ ಐಟಿಐ ಕಾಲೇಜು ವಿಭಾಗದ ನಿರ್ದೇಶಕಿ ಜ್ಯೋತಿ ಕೆ. ಅವರು ಪ್ರಕರಣದ ಬಗ್ಗೆ ಪ್ರಾಥಮಿಕ ತನಿಖೆ ವರದಿ ನೀಡುವಂತೆ ಜಂಟಿ ನಿರ್ದೇಶಕರಿಗೆ ಸೂಚಿಸಿದ್ದಾರೆ. ತಕ್ಷಣ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಬೇಕು, ಆಗಸ್ಟ್ 10 ರ ಒಳಗೆ ವರದಿ ನೀಡಬೇಕು ಎಂದು ಜಂಟಿ ನಿರ್ದೇಶಕರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ : ಪಿಎಸ್ಐ ನೇಮಕಾತಿ ಅಕ್ರಮ: ಜೈಲು ಪಾಲಾದ ಶಾಂತಿಬಾಯಿ ದಂಪತಿ ಜಾಮೀನು ಅರ್ಜಿ ವಜಾ

Last Updated :Aug 8, 2022, 3:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.