ETV Bharat / city

ಸೆಲ್ಫಿ ಹುಚ್ಚಿಗೆ ಹಾರಿ ಹೋಯ್ತು ಎರಡು ಜೀವ : ಮತ್ತೋರ್ವ ಸಾವು ಬದುಕಿನ ನಡುವೆ ಹೋರಾಟ

author img

By

Published : Nov 12, 2021, 7:48 PM IST

selfie-crazy-in-fly-over-near-hoskote-youths-hit-by-canter-and-killed
ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವು

ರಾತ್ರಿ ವೇಳೆ ಫ್ಲೈ ಓವರ್ ಮೇಲೆ ರಸ್ತೆ ಮಧ್ಯ ಕಾರು ನಿಲ್ಲಿಸಿ ಇಬ್ಬರು ಯುವಕರು ಸೆಲ್ಫಿ ತೆಗೆದುಕೊಳ್ಳಲು (selfie crazy in fly over) ಮುಂದಾಗಿದ್ದರು. ಈ ವೇಳೆ ವೇಗವಾಗಿ ಬರುತ್ತಿದ್ದ ಕ್ಯಾಂಟರ್ ಯುವಕರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೋರ್ವ ಫ್ಲೈ ಓವರ್​​ ಮೇಲಿಂದ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ..

ಹೊಸಕೋಟೆ : ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್ ರಸ್ತೆಯ​ ಮಧ್ಯ ಕಾರು ನಿಲ್ಲಿಸಿ ಸೆಲ್ಫಿ ತೆಗೆದುಕೊಳ್ಳಲು (selfie crazy in fly over) ಹೋಗಿ ಇಬ್ಬರು ಮೃತ ಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ನಂದಗುಡಿ ಸಮೀಪ ಈ ಅಪಘಾತ ಸಂಭವಿಸಿದೆ.

ಕಳೆದ ರಾತ್ರಿ ಸುಮಾರು 1:30ರ ವೇಳೆ ಕೋಲಾರ ಬಳಿಯ ಕಾಫೀ ಡೇಗೆ ನಾಲ್ವರು ಸೇಹಿತರು ತೆರಳುತ್ತಿದ್ದರು. ತಾವರೆಕೆರೆ ರಾಷ್ಟ್ರಿಯ ಹೆದ್ದಾರಿ 75ರ ಫ್ಲೈ ಓವರ್ ಮೇಲೆ ಕಾರನ್ನು ರಸ್ತೆ ಮಧ್ಯೆ ನಿಲ್ಲಿಸಿ ಸೆಲ್ಫೀ ತೆಗೆದುಕೊಳ್ಳುತ್ತಿದ್ದರು.

ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿ (youths hit by canter and killed) ಹೊಡೆದಿದೆ. ಘಟನೆಯಲ್ಲಿ ಬೆಂಗಳೂರಿನ ವೈಟ್‌ಫೀಲ್ಡ್ ಮೂಲದ ದಿನೇಶ್ ( 27 ) ವಿನಯ್ ( 24 ) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಂಕಿತ್ ಎಂಬುವನು ಫ್ಲೈ ಓವರ್ ಮೇಲಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ದಿನೇಶ್ ಕಾಲ್ ಸೆಂಟರ್​‌ನಲ್ಲಿ ವಿನಯ್ ಪೈಂಟರ್ ಕೆಲಸ ಮತ್ತು ಅಂಕಿತ್ ಕಾಲೇಜಿಗೆ ಹೊಗುತ್ತಿದ್ದ ಎನ್ನಲಾಗುತ್ತಿದೆ. ವೈಟ್ ಫೀಲ್ಡ್‌ನಿಂದ ಕೋಲಾರದವರೆಗೆ ಜಾಲಿ ರೈಡ್ ಮೂಲಕ ಕಾಫೀ ಡೇಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬೆಂಗಳೂರು ಗ್ರಾಮಾಂತರ ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.