ETV Bharat / city

ನಮ್ಮ ಪ್ರೀತಿಯ ಅಪ್ಪು, ಕನ್ನಡದ ರಾಜರತ್ನ ಪುನೀತ್ ರಾಜಕುಮಾರ್.. ಅಣ್ಣಾಬಾಂಡ್‌ ಅಮರವಾದರು..

author img

By

Published : Oct 29, 2021, 2:46 PM IST

Updated : Oct 29, 2021, 4:05 PM IST

ಸದಾ ನಗುಮೊಗದ, ಕನ್ನಡನಾಡಿನ ರಾಜರತ್ನ ಸ್ಯಾಂಡಲ್​ವುಡ್​ನಲ್ಲಿ ಚಿತ್ರ ರಸಿಕರನ್ನು ಸೂಜಿಗಲ್ಲಿನಂತೆ ಸೆಳೆದವರು. ಹುಟ್ಟಿನಿಂದ ಈವರೆಗೆ ಜನರನ್ನು ರಂಜಿಸಿದ ಅಪ್ಪು ನಮ್ಮ ನಿಮ್ಮೆಲ್ಲರ ನಡುವೆ ಇನ್ನು ಅಜರಾಮರ..

Sandalwood Power star Puneet Rajkumar  Profile
ಪುನೀತ್ ರಾಜಕುಮಾರ್​

ಬಾಲ ನಟನಾಗಿ ಮುಗ್ಧ ಅಭಿನಯದಿಂದ ಹಿಡಿದು ಇಂದಿನವರೆಗೆ ದಶಕಗಳ ಕಾಲ ಕನ್ನಡ ಚಿತ್ರ ಪ್ರಿಯರನ್ನು ಸೂಜಿಗಲ್ಲಿನಂತೆ ಸೆಳೆದ ನಮ್ಮ ಪ್ರೀತಿಯ ಅಪ್ಪು, ಕನ್ನಡದ ರಾಜರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್​​​ ಚಿತ್ರನಟ ಮಾತ್ರವಲ್ಲದೇ ಹಿನ್ನೆಲೆ ಗಾಯನ, ನಿರೂಪಕರಾಗಿಯೂ ಕೂಡ ಸ್ಯಾಂಡಲ್​ವುಡ್​ನಲ್ಲಿ ಛಾಪು ಮೂಡಿಸಿದವರು.

Sandalwood Power star Puneet Rajkumar  Profile
ರಾಜರತ್ನ ಪುನೀತ್ ರಾಜಕುಮಾರ್

ವೈಯಕ್ತಿಕ ಜೀವನ : 1975ರ ಮಾರ್ಚ್‌ 17ರಂದು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದ್ದ ಪುನೀತ್ ರಾಜಕುಮಾರ್, ಕರ್ನಾಟಕ ರತ್ನ ಡಾ.ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಅವರ ಕಿರಿಯ ಮಗ. ನಟರಾದ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಪುನೀತ್ ರಾಜಕುಮಾರ್ ಅವರ ಸಹೋದರರು.

ಇಬ್ಬರು ಸಹೋದರಿಯರು ಪುನೀತ್ ರಾಜಕುಮಾರ್​ಗೆ ಇದ್ದಾರೆ. ಅಂದಹಾಗೆ ಪುನೀತ್ ರಾಜಕುಮಾರ್ ಅವರ ಮೊದಲ ಹೆಸರು ಲೋಹಿತ್. 1999ರಲ್ಲಿ ಅಶ್ವಿನಿ ರೇವಂತ್​ರನ್ನು ವಿವಾಹವಾದ ಪುನೀತ್ ರಾಜಕುಮಾರ್ ದಂಪತಿಗೆ ಧೃತಿ ಮತ್ತು ವಂದಿತಾ ಎಂಬ ಇಬ್ಬರು ಮಕ್ಕಳಿದ್ದಾರೆ.

Sandalwood Power star Puneet Rajkumar  Profile
ಸಹೋದರ ಶಿವರಾಜ್​ಕುಮಾರ್​ ಅವರೊಂದೊಗೆ ಅಪ್ಪು

ಆನ್​ಸ್ಕ್ರೀನ್‌ನಲ್ಲಿ ಮಾಸ್ಟರ್ ಲೋಹಿತ್ ​: ಪುನೀತ್ ರಾಜಕುಮಾರ್ ಹುಟ್ಟಿದ ಒಂದು ವರ್ಷಕ್ಕೆ ಅಂದರೆ 1976ರಲ್ಲಿ ಪ್ರೇಮದ ಕಾಣಿಕೆ ಚಿತ್ರದಲ್ಲಿ ತೆರೆ ಮುಂದೆ ಬಂದಿದ್ದರು. ನಂತರ ಸನಾದಿ ಅಪ್ಪಣ್ಣ(1977), ತಾಯಿಗೆ ತಕ್ಕ ಮಗ (1978)ರಲ್ಲಿ ತೆರೆ ಮೇಲೆ ಕಾಣಿಸಿದ್ದರು.

ಬಾಲ ನಟನೆಯ ಚಿತ್ರಗಳು : ಈವರೆಗೆ ಸುಮಾರು 26 ಚಲನಚಿತ್ರಗಳಲ್ಲಿ ನಾಯಕ ನಟರಾಗಿ ಅಭಿನಯಿಸಿರುವ ಪುನೀತ್, ಬಾಲನಟನಾಗಿ ತಂದೆಯೊಂದಿಗೆ ಮೊದಲು 1980ರಲ್ಲಿ ವಸಂತಗೀತಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ ಭಾಗ್ಯದಾತ (1981), ಚಲಿಸುವ ಮೋಡಗಳು (1982), ಎರಡು ನಕ್ಷತ್ರಗಳು (1983) ಮತ್ತು ಬೆಟ್ಟದ ಹೂವು (1985), ಹೊಸ ಬೆಳಕು, ಶಿವ ಮೆಚ್ಚಿದ ಕಣ್ಣಪ್ಪ, ಪರಶುರಾಮ್, ಯಾರಿವನು, ಭಕ್ತ ಪ್ರಹ್ಲಾದ, ಭಾಗ್ಯವಂತ ಚಿತ್ರಗಳಲ್ಲಿ ತಮ್ಮ ಮುಗ್ಧ ಅಭಿನಯ ತೋರಿದರು.

Sandalwood Power star Puneet Rajkumar  Profile
ಕಾರ್ಯಕ್ರಮವೊಂದರಲ್ಲಿ ಪುನೀತ್​

ಬೆಟ್ಟದ ಹೂವು ಚಿತ್ರದಲ್ಲಿ ಬಾಲ ನಟನೆಗಾಗಿ ರಾಷ್ಟ್ರ ಚಲನಚಿತ್ರ ಪ್ರಶಸ್ತಿಗೆ ಕೂಡ ಪುನೀತ್ ರಾಜಕುಮಾರ್ ಭಾಜನರಾಗಿದ್ದರು. ಎರಡು ನಕ್ಷತ್ರಗಳು ಚಿತ್ರಕ್ಕೆ ಕರ್ನಾಟಕ ರಾಜ್ಯ ಸಿನಿಮಾ ಪ್ರಶಸ್ತಿ ಕೂಡ ಒಲಿದು ಬಂದಿತ್ತು.

ನಾಯಕ ನಟನಾಗಿ ಅಪ್ಪು : ಸ್ಯಾಂಡಲ್​ವುಡ್​ನಲ್ಲಿ ನಾಯಕ ನಟನಾಗಿ 2002ರಲ್ಲಿ ಅಪ್ಪು ಚಿತ್ರದಲ್ಲಿ ಕಾಣಿಸಿಕೊಂಡ ಪುನೀತ್ ರಾಜಕುಮಾರ್ ನಂತರ ಅಭಿ (2003), ಆಕಾಶ್ (2005), ಅರಸು (2007) ವೀರ ಕನ್ನಡಿಗ (2004), ಮೌರ್ಯ (2004), ಆಕಾಶ್ (2005), ಅಜಯ್ (2006), ಮಿಲನ (2007), ವಂಶಿ (2008), ರಾಮ್ (2009), ಜಾಕಿ (2010), ಪೃಥ್ವಿ (2010) ಹುಡುಗರು (2011), ಅಣ್ಣಾ ಬಾಂಡ್ (2012) ಮತ್ತು ಪವರ್ (2014), ಯುವರತ್ನ (2021) ಸೇರಿದಂತೆ ಸುಮಾರು 29 ಚಿತ್ರಗಳಲ್ಲಿ ನಾಯಕ ನಟನಾಗಿ ಕಾಣಿಸಿದ್ದಾರೆ.

Sandalwood Power star Puneet Rajkumar  Profile
ಸಹೋದರ ಶಿವರಾಜ್​ಕುಮಾರ್​ ಅವರೊಂದೊಗೆ ಅಪ್ಪು

ಕಿರುತೆರೆಯಲ್ಲಿ ಅಪ್ಪು : ಚಿತ್ರನಟ ಮಾತ್ರವಲ್ಲದೇ ಹಿನ್ನೆಲೆ ಗಾಯನ, ನಿರೂಪಕರಾಗಿಯೂ ಕೂಡ ಸ್ಯಾಂಡಲ್​ವುಡ್​ನಲ್ಲಿ ಛಾಪು ಮೂಡಿಸಿದವರು. 2012ರಲ್ಲಿ ಪುನೀತ್ ರಾಜಕುಮಾರ್ ಕನ್ನಡದ ಕೋಟ್ಯಧಿಪತಿ ರಿಯಾಲಿಟಿ ಶೋ ಅನ್ನು ಹೋಸ್ಟ್ ಮಾಡಿದ್ದರು. ಇದಾದ ನಂತರ ಫ್ಯಾಮಿಲಿ ಪವರ್ ಎಂಬ ರಿಯಾಲಿಟಿ ಶೋ ಅನ್ನು ಕೂಡ ನಡೆಸಿಕೊಡುತ್ತಿದ್ದರು.

ಇದರ ಜೊತೆಗೆ ಹಲವು ಚಿತ್ರಗಳನ್ನು ತಮ್ಮದೇ ಬ್ಯಾನರ್​​ನಲ್ಲಿ ನಿರ್ಮಿಸಿದ್ದರು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನೇತ್ರಾವತಿ ಧಾರವಾಹಿಯ ನಿರ್ಮಾಪಕರೂ ಆಗಿದ್ದರು. ಪುನೀತ್ ರಾಜಕುಮಾರ್ ಪಿಆರ್​ಕೆ ಆಡಿಯೋದ ಸಂಸ್ಥಾಪಕರೂ ಆಗಿದ್ದಾರೆ.

Sandalwood Power star Puneet Rajkumar  Profile
ಡಾ ರಾಜ್​ ಸಮಾಧಿ ಮುಂದೆ ಕುಟುಂಬದ ಸದಸ್ಯರೊಂದಿಗೆ ನಟ ಪುನೀತ್​

ಫಿಲ್ಮ್‌ಫೇರ್ ಅವಾರ್ಡ್​ ​: ಮಹತ್ವದ ಐದು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಅವರು 2007, 2012, 2016ರಲ್ಲಿ ಕನ್ನಡ ಫಿಲ್ಮ್​ಫೇರ್​ ಅವಾರ್ಡ್​ಗಳನ್ನು ಗಳಿಸಿದ್ದಾರೆ. 1985ರಲ್ಲಿ ಬೆಟ್ಟದ ಹೂ ಚಿತ್ರದಲ್ಲಿ ಮನೋಜ್ಞ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಮತ್ತು 1986ರಲ್ಲಿ ಸೌಥ್ ಫಿಲ್ಮ್​ಫೇರ್ ಅವಾರ್ಡ್​ ಅನ್ನು ಪುನೀತ್ ರಾಜಕುಮಾರ್ ಪಡೆದುಕೊಂಡಿದ್ದಾರೆ.

ರಾಜ್ಯ ಪ್ರಶಸ್ತಿಗಳು : ಚಲಿಸುವ ಮೋಡಗಳು ಚಿತ್ರಕ್ಕೆ 1982-83ರಲ್ಲಿ ಮತ್ತು 1983-84ರಲ್ಲಿ ಎರಡು ನಕ್ಷತ್ರಗಳು ಚಿತ್ರಕ್ಕೆ ರಾಜ್ಯ ಸರ್ಕಾರ ನೀಡುವ ಉತ್ತಮ ಬಾಲ ನಟ ಪ್ರಶಸ್ತಿ, 2007-08ರಲ್ಲಿ ಮಿಲನ ಚಿತ್ರಕ್ಕೆ, 2010ರಲ್ಲಿ ಜಾಕಿ ಚಿತ್ರಕ್ಕೆ ರಾಜ್ಯ ಸರ್ಕಾರ ನೀಡುವ ಉತ್ತಮ ನಟ ಪ್ರಶಸ್ತಿಗಳು ಒಲಿದು ಬಂದಿವೆ.

Sandalwood Power star Puneet Rajkumar  Profile
ರಾಜಕುಮಾರ್​ ಚಿತ್ರದ ಪೋಸ್ಟರ್​

ದಕ್ಷಿಣ ಭಾರತ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳು : 2011ರಲ್ಲಿ ಹುಡುಗರು ಚಿತ್ರಕ್ಕೆ, 2016ರಲ್ಲಿ ರಣವಿಕ್ರಮ ಚಿತ್ರಕ್ಕೆ, 2018ರಲ್ಲಿ ರಾಜಕುಮಾರ ಚಿತ್ರಕ್ಕೆ ದಕ್ಷಿಣ ಭಾರತ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳು ಒಲಿದು ಬಂದಿವೆ. 2013ರಲ್ಲಿ ಯಾರೇ ಕೂಗಾಡಲಿ ಚಿತ್ರಕ್ಕೆ ಯೂತ್ ಐಕಾನ್ ಆಫ್ ಸೌಥ್ ಸಿನಿಮಾ ಇಂಡಸ್ಟ್ರಿ ಅವಾರ್ಡ್ ಕೂಡ ಸಿಕ್ಕಿದೆ.

Last Updated :Oct 29, 2021, 4:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.