ETV Bharat / city

ಸಮವಸ್ತ್ರ ಕುರಿತು ವಿವಾದಿತ ಹೇಳಿಕೆ: ಶಿಕ್ಷಣ ಸಚಿವರಿಗೆ ವಕೀಲರ ಸಂಘಟನೆಯಿಂದ ನೋಟಿಸ್

author img

By

Published : Apr 1, 2022, 6:55 AM IST

lawyers-association-notice-to-education-minister-bcnagesh
ಸಮವಸ್ತ್ರ ಕುರಿತಂತೆ ವಿವಾದಿತ ಹೇಳಿಕೆ: ಶಿಕ್ಷಣ ಸಚಿವರಿಗೆ ವಕೀಲರ ಸಂಘಟನೆಯಿಂದ ನೋಟಿಸ್

ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಗೊಂದಲ ಹುಟ್ಟಿಸಿರುವ ಆರೋಪದಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರಿಗೆ ವಕೀಲರ ಸಂಘವೊಂದು ಲೀಗಲ್ ನೋಟಿಸ್ ನೀಡಿದೆ.

ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಧರಿಸುವ ವಿಚಾರವಾಗಿ ನೀಡಿರುವ ವಿವಾದಿತ ಹೇಳಿಕೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಅಗತ್ಯ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದು ಎಐಎಲ್ಎಜೆ ಹೆಸರಿನ ವಕೀಲರ ಸಂಘಟನೆಯೊಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಲೀಗಲ್ ನೋಟಿಸ್ ಜಾರಿ ಮಾಡಿದೆ.

'ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿ ತಾವು ನೀಡಿರುವ ಹೇಳಿಕೆಗಳು ಮಾಧ್ಯಮಗಳಲ್ಲಿ ವರದಿಯಾಗಿದೆ. ಹಿಜಾಬ್ ಸೇರಿದಂತೆ ಧಾರ್ಮಿಕ ಸಂಕೇತದ ಉಡುಪುಗಳನ್ನು ಧರಿಸಿ ಪರೀಕ್ಷಾ ಕೊಠಡಿಗಳಿಗೆ ಬರುವಂತಿಲ್ಲ. ಬಂದರೂ ಕೊಠಡಿ ಒಳಗೆ ಪ್ರವೇಶವಿಲ್ಲ. ಅಹಂಕಾರ ಬಿಟ್ಟು ಪರೀಕ್ಷೆಗೆ ಬನ್ನಿ, ಬಹುತೇಕ ವಿದ್ಯಾರ್ಥಿಗಳು ಹೈಕೋರ್ಟ್ ಆದೇಶ ಮತ್ತು ಸರ್ಕಾರದ ಅಧಿಸೂಚನೆಯನ್ನು ಪಾಲಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದೀರಿ. ಆದರೆ, ನಿಮ್ಮ ಹೇಳಿಕೆಗೂ ಸರ್ಕಾರ ಸಮವಸ್ತ್ರ ಕುರಿತು ಹೊರಡಿಸಿರುವ ಅಧಿಸೂಚನೆಗೂ ಭಿನ್ನತೆ ಇದೆ' ಎಂದು ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ.

'ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆಯೂ ಗೊಂದಲ ಹುಟ್ಟಿಸಿದ್ದೀರಿ. ನ್ಯಾಯಾಲಯ ತನ್ನ ತೀರ್ಪಿನಲ್ಲಿ ಸಂಪೂರ್ಣ ಹಿಜಾಬ್ ನಿಷೇಧಿಸಿರುವ ಕುರಿತು ಉಲ್ಲೇಖಿಸಿಲ್ಲ. ತರಗತಿ ಹೊರಗೆ ಅವರಿಷ್ಟದ ಉಡುಪು ಧರಿಸಲು ಸ್ವತಂತ್ರರು ಎಂದು ಹೇಳಿದೆ. ಸಂವಿಧಾನದ ಮೇಲೆ ಪ್ರಮಾಣ ಮಾಡಿ ಸಚಿವರಾಗಿರುವ ನಿಮ್ಮ ಬೇಜವಾಬ್ದಾರಿತನದ ಹೇಳಿಕೆಗಳು ಸಮಾಜದ ಸ್ವಾಸ್ತ್ಯ ಹಾಗೂ ಕೋಮು ಸೌಹಾರ್ದತೆಯನ್ನು ಹಾಳು ಮಾಡುತ್ತಿವೆ. ಇಂತಹ ಹೇಳಿಕೆಗಳಿಂದಲೇ, ಗದಗದಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟ ಏಳು ಶಿಕ್ಷಕರು ಅಮಾನತುಗೊಂಡಿದ್ದಾರೆ ನೋಟಿಸ್​ನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ: ಅಕ್ರಮ ಡಿನೋಟಿಫಿಕೇಶನ್​ ಆರೋಪ ಪ್ರಕರಣ.. ಬಿಎಸ್​ವೈ ವಿರುದ್ಧ ಕ್ರಿಮಿನಲ್‌ ಕೇಸ್​ ದಾಖಲಿಸುವಂತೆ ಕೋರ್ಟ್​ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.