ETV Bharat / city

ಸಮವಸ್ತ್ರ ಸಂಹಿತೆ ಕಡ್ಡಾಯ ಸುತ್ತೋಲೆ : ಕ್ಯಾಂಪಸ್ ಫ್ರಂಟ್ ಹಾಗೂ ನ್ಯಾಷನಲ್ ವುಮನ್ಸ್ ಫ್ರಂಟ್​​ನಿಂದ ವಿರೋಧ

author img

By

Published : Feb 7, 2022, 7:24 PM IST

Updated : Feb 7, 2022, 7:33 PM IST

ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ನಿರಾಕರಿಸುವುದು ಅಸಾಂವಿಧಾನಿಕ. ಹಿಜಾಬ್ ಎಂಬುದು ಮುಸ್ಲಿಂ ಮಹಿಳೆಯರ ಅಸ್ಮಿತೆ. ಅದನ್ನು ಹೀಗೆ ಕಿತ್ತುಕೊಳ್ಳುವುದು ಸಂವಿಧಾನ ಬಾಹಿರ. ಇದು ಮಕ್ಕಳ ನಡುವೆ ದ್ವೇಷ ಬಿತ್ತುವ ಕೆಲಸವಾಗುತ್ತದೆ. ಕೂಡಲೇ ಈ ಇತ್ತ ಗಮನಹರಿಸಿ ಮುಸ್ಲಿಂ ಮಹಿಳೆಯರ ಬೇಡಿಕೆ ಈಡೇರಿಸಬೇಕು. ದೇಶದಲ್ಲಿ ಬಹುತ್ವ ಮತ್ತು ಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು..

campus front members oppose uniform dress code Circular
ನ್ಯಾಷನಲ್ ವುಮನ್ಸ್ ಫ್ರಂಟ್​​ ನಿಂದ ಸುದ್ದಿಗೋಷ್ಠಿ

ಬೆಂಗಳೂರು : ರಾಜ್ಯದಲ್ಲಿ ಹಿಜಾಬ್ ವಿವಾದಕ್ಕೆ ಸರ್ಕಾರ 'ಸಮವಸ್ತ್ರ ಸಂಹಿತೆ ಕಡ್ಡಾಯ' ಸುತ್ತೋಲೆ ತಂದು ಬ್ರೇಕ್ ಹಾಕಿದ್ರು ಸಹ ಅದರ ಕಿಡಿ‌ ಇನ್ನೂ ನಿಂತಿಲ್ಲ. ಶಿಕ್ಷಣ ಇಲಾಖೆಯ ವಸ್ತ್ರಸಂಹಿತೆಯ ಆದೇಶದ ವಿರುದ್ಧ ವಿರೋಧಗಳ ಸರಮಾಲೆ ಶುರುವಾಗಿದೆ. ಶಿಕ್ಷಣ ಇಲಾಖೆಯ ಸುತ್ತೋಲೆಗೆ ಕ್ಯಾಂಪಸ್ ಫ್ರಂಟ್ ಹಾಗೂ ನ್ಯಾಷನಲ್ ವುಮನ್ಸ್ ಫ್ರಂಟ್​​ನಿಂದ ವಿರೋಧ ವ್ಯಕ್ತವಾಗಿದೆ.

ನ್ಯಾಷನಲ್ ವುಮನ್ಸ್ ಫ್ರಂಟ್​​ ನಿಂದ ಸುದ್ದಿಗೋಷ್ಠಿ

ಸಮವಸ್ತ್ರ ವಿಚಾರ ವಿದ್ಯಾರ್ಥಿಗಳ ರಿಟ್ ಅರ್ಜಿ ವಿಚಾರಣಾ ಹಂತದಲ್ಲಿದೆ. ನ್ಯಾಯಾಲಯದ ವಿಚಾರಣಾ ಹಂತದಲ್ಲಿಯೇ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶಾಸಕಾಂಗದ ಅಧಿಕಾರ ದುರ್ಬಳಕೆ ಮಾಡಿಕೊಂಡು ಸುತ್ತೋಲೆ ಹೊರಡಿಸಿದೆ. ನ್ಯಾಯಾಂಗದ ಹಿತಾಸಕ್ತಿ ಮೇಲೆ ಫ್ರಭಾವ ಬೀರಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.

ಸರ್ಕಾರದ ಸಮವಸ್ತ್ರ ಆದೇಶ ವಿರೋಧಿಸಿ ಇಂದು ನ್ಯಾಷನಲ್ ವುಮನ್ಸ್ ಫ್ರಂಟ್​​ನಿಂದ ಪ್ರೆಸ್ ಕ್ಲಬ್​​ನಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.‌ ಈ ವೇಳೆ ಮಾತನಾಡಿದ ನ್ಯಾಷನಲ್ ವುಮೆನ್ಸ್ ಫ್ರಂಟ್ ರಾಜ್ಯಾಧ್ಯಕ್ಷೆ, ಫರ್ಜಾನಾ ಮಹಮ್ಮದ್, ಯಾವುದೇ ತೀರ್ಪು ಬಂದರೂ ನಾವು ಹಿಜಾಬ್ ಕಳಚವುದಿಲ್ಲ.

ನಮ್ಮ ಸಂವಿಧಾನ ಕೊಟ್ಟ ಹಕ್ಕನ್ನು ಕೈ ಬಿಡುವುದಿಲ್ಲ. ನ್ಯಾಯಾಂಗ ನಮ್ಮ ಹಕ್ಕನ್ನು ಎತ್ತಿ ಹಿಡಿಯುತ್ತದೆ ಎಂಬ ಭರವಸೆ ಇದೆ. ಮತ್ತೆ ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದರು.

ಇದನ್ನೂ ಓದಿ: ಚಿಕ್ಕಮಗಳೂರು : ಹಿಜಾಬ್​ಗೆ ಒತ್ತಾಯಿಸಿ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಪ್ರತಿಭಟನೆ

ನ್ಯಾಷನಲ್ ವುಮೆನ್ಸ್ ಫ್ರಂಟ್ ಕಾರ್ಯದರ್ಶಿ ನೌಶೀರ ಮಾತನಾಡಿ, ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ನಿರಾಕರಿಸುವುದು ಅಸಾಂವಿಧಾನಿಕ. ಹಿಜಾಬ್ ಎಂಬುದು ಮುಸ್ಲಿಂ ಮಹಿಳೆಯರ ಅಸ್ಮಿತೆ. ಅದನ್ನು ಹೀಗೆ ಕಿತ್ತುಕೊಳ್ಳುವುದು ಸಂವಿಧಾನ ಬಾಹಿರ. ಇದು ಮಕ್ಕಳ ನಡುವೆ ದ್ವೇಷ ಬಿತ್ತುವ ಕೆಲಸವಾಗುತ್ತದೆ.

ಕೂಡಲೇ ಈ ಇತ್ತ ಗಮನಹರಿಸಿ ಮುಸ್ಲಿಂ ಮಹಿಳೆಯರ ಬೇಡಿಕೆ ಈಡೇರಿಸಬೇಕು. ದೇಶದಲ್ಲಿ ಬಹುತ್ವ ಮತ್ತು ಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದರು.

ಕೆಲ ಮತೀಯ ಶಕ್ತಿಗಳು ಇದಕ್ಕೆ ಹಿಂದಿನಿಂದ ಕುಮ್ಮಕ್ಕು ನೀಡುತ್ತಿವೆ. ನ್ಯಾಷನಲ್ ವುಮೆನ್ಸ್ ಫ್ರಂಟ್ ಆ ಮುಸ್ಲಿಂ ವಿದ್ಯಾರ್ಥಿನಿಯರ ಜತೆ ಹೋರಾಟ ಮಾಡಲಿದೆ. ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಮುಸ್ಲಿಂ ವಿದ್ಯಾರ್ಥಿನಿಯರ ಹಕ್ಕನ್ನು ಗೌರವವಿಸಬೇಕು ಎಂದು ಆಗ್ರಹಿಸಿದರು.

Last Updated :Feb 7, 2022, 7:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.