ETV Bharat / city

ಟಿಸಿಎಸ್ 10ಕೆ ರನ್​ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ

author img

By

Published : May 15, 2022, 12:10 PM IST

ಟಿಸಿಎಸ್ 10ಕೆ ರನ್
ಟಿಸಿಎಸ್ 10ಕೆ ರನ್

ಟಿಸಿಎಸ್ ಪ್ರಾಯೋಜಕತ್ವದ ವರ್ಲ್ಡ್‌ 10ಕೆ ಮ್ಯಾರಥಾನ್ 14ನೇ ಆವೃತ್ತಿಯು ಬೆಂಗಳೂರಿನಲ್ಲಿ ಇಂದು ಯಶಸ್ವಿಯಾಗಿ ನಡೆದಿದೆ. ನಗರದ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಮ್ಯಾರಥಾನ್​ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು..

ಬೆಂಗಳೂರು : ಸದಾ ಒಂದಿಲ್ಲೊಂದು ಚಟುವಟಿಕೆಗಳಿಂದ ಗಮನ ಸೆಳೆಯುವ ಸಿಲಿಕಾನ್ ಸಿಟಿಯಲ್ಲಿ ವೀಕೆಂಡ್ ದಿನವಾದ ಇಂದು ಮುಂಜಾನೆ ಮ್ಯಾರಥಾನ್ ಗಮನ ಸೆಳೆಯಿತು. ನಗರದ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಟಿಸಿಎಸ್ ಸಂಸ್ಥೆ ಆಯೋಜಿಸಿದ್ದ ವಿಶ್ವ ಪ್ರೀಮಿಯರ್ 10ಕೆ ಮ್ಯಾರಥಾನ್​ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಬೆಳಗ್ಗೆ 8 ಗಂಟೆಗೆ ಆರಂಭವಾದ ಓಟಕ್ಕೆ ಚಾಲನೆ ನೀಡಿದ ಸಿಎಂ, ಓಟ ಮುಗಿಯುವವರೆಗೂ ಇದ್ದು ಕುತೂಹಲದಿಂದ ಕ್ರೀಡೆ ವೀಕ್ಷಣೆ ಮಾಡಿದರು. ನಂತರ ಗೆದ್ದ ಸ್ಪರ್ಧಿಗಳಿಗೆ ಪದಕ ಪ್ರದಾನ ಮಾಡಿ, ಭವಿಷ್ಯದ ಸ್ಪರ್ಧೆಗಳಿಗೆ ಶುಭ ಕೋರಿ ಪ್ರೋತ್ಸಾಹ ನೀಡಿದರು. 10ಕೆ ಮ್ಯಾರಥಾನ್​ನಲ್ಲಿ 17 ಸಾವಿರಕ್ಕಿಂತ ಹೆಚ್ಚು ಜನ ಭಾಗವಹಿಸಿದ್ದರು. ಹಿರಿಯರು, ವಿಕಲಚೇತನರು ತಮ್ಮ ಜೀವನೋತ್ಸಾಹಕ್ಕೆ ಓಡಿದರು.

10ಕೆ ರನ್​ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿರುವುದು..

ನಂತರ ಮಾತನಾಡಿದ ಬೊಮ್ಮಾಯಿ, ಇಂತಹ ಉಪಯುಕ್ತ ಕಾರ್ಯಕ್ರಮಗಳನ್ನ ಆಯೋಜಿಸುವ ಮೂಲಕ ಟಿಸಿಎಸ್ ಉತ್ತಮ ಕೆಲಸ ಮಾಡುತ್ತಿದೆ. ಅನೇಕ ಸರ್ಕಾರೇತರ ಸಂಸ್ಥೆಗಳು ಈ ವೇದಿಕೆಯ ಮೂಲಕ ತಮ್ಮ ಸಾಮಾಜಿಕ ಕೆಲಸಕ್ಕೆ ದೇಣಿಗೆ ಸಂಗ್ರಹಿಸಲು ಅವಕಾಶ ಕಲ್ಪಿಸಿಕೊಟ್ಟು, ಸಾಮಾಜಿಕ ಹೊಣೆಗಾರಿಕೆಯನ್ನು ಟಿಸಿಎಸ್ ಸಂಸ್ಥೆ ತೋರಿದೆ ಎಂದರು. ಈ ವೇಳೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್​ ನಾರಾಯಣ​, ಕ್ರೀಡೆ ಮತ್ತು ಯುವಜನ ಸಬಲೀಕರಣ ಸಚಿವ ಡಾ. ನಾರಾಯಣಗೌಡ ಮತ್ತಿತರರು ಉಪಸ್ಥಿತರಿದ್ದರು.

ಮ್ಯಾರಥಾನ್​
ಮ್ಯಾರಥಾನ್​

ಇದನ್ನೂ ಓದಿ: ತ್ರಿಪುರಾದ 11ನೇ ಮುಖ್ಯಮಂತ್ರಿಯಾಗಿ ಮಾಣಿಕ್ ಸಹಾ ಪದಗ್ರಹಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.