ETV Bharat / city

ವಿಧಾನ ಪರಿಷತ್ ಚುನಾವಣೆ: ಟಿಕೆಟ್ ಘೋಷಣೆಗೂ ಮುನ್ನ ಮತಬೇಟೆ ಆರಂಭಿಸಿದ ಜಾರಕಿಹೊಳಿ‌ ಬ್ರದರ್ಸ್

author img

By

Published : Nov 18, 2021, 2:18 PM IST

Legislative Council Election Campaign
ಜಾರಕಿಹೊಳಿ‌ ಬ್ರದರ್ಸ್

ವಿಧಾನ ಪರಿಷತ್ ಚುನಾವಣೆ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚನ್ನರಾಜ ಹಟ್ಟಿಹೊಳಿ ಪರ ಸತೀಶ್ ಜಾರಕಿಹೊಳಿ ಮತಬೇಟೆ ನಡೆಸಿದ್ರೆ, ಮಹಾಂತೇಶ ಕವಟಗಿಮಠ ಮತ್ತು ಲಖನ್ ಜಾರಕಿಹೊಳಿ (Lakhan jarkiholi) ಪರ ರಮೇಶ್ ಜಾರಕಿಹೊಳಿ (Ramesh Jarkiholi) ಮತಯಾಚನೆ ಮಾಡಿದರು.

ಬೆಳಗಾವಿ: ಟಿಕೆಟ್ ಘೋಷಣೆ ಮುನ್ನವೇ ಬೆಳಗಾವಿಯಲ್ಲಿ ವಿಧಾನ ಪರಿಷತ್ ಚುನಾವಣೆ (Legislative Council Election) ಅಖಾಡ‌ ರಂಗೇರಿದೆ. ಜಾರಕಿಹೊಳಿ‌ ಬ್ರದರ್ಸ್ ಚುನಾವಣಾ ಅಖಾಡಕ್ಕೆ ಧುಮುಕಿದ್ದು, ಅಭ್ಯರ್ಥಿ ಪರ ಮತಬೇಟೆ ಆರಂಭಿಸಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಮಣಿಸಲು ರಮೇಶ್ ಜಾರಕಿಹೊಳಿ‌ ಫೀಲ್ಡ್‌ಗಿಳಿದಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ರಮೇಶ್ ಜಾರಕಿಹೊಳಿ (Ramesh Jarkiholi) ಗ್ರಾಮ ಪಂಚಾಯತ್ ಸದಸ್ಯರ ಸಭೆ ನಡೆಸಿ, ಮಹಾಂತೇಶ ಕವಟಗಿಮಠ ಮತ್ತು ಲಖನ್ ಜಾರಕಿಹೊಳಿ (Lakhan jarkiholi) ಪರ ಮತಯಾಚನೆ ಮಾಡಿದರು. ಈ ವೇಳೆ ರಮೇಶ್ ಜಾರಕಿಹೊಳಿಗೆ ಎಂಇಎಸ್ ಮಾಜಿ ಶಾಸಕ ಅರವಿಂದ ಪಾಟೀಲ್ ಸಾಥ್ ನೀಡಿದರು.

ಇದನ್ನೂ ಓದಿ: ಡಿಸಿ ಆದೇಶ ಉಲ್ಲಂಘನೆ: ಕೋಲಾರ ಜಿಲ್ಲೆ ಪ್ರವೇಶಕ್ಕೆ ಯತ್ನಿಸಿದ ಪ್ರಮೋದ್​ ಮುತಾಲಿಕ್​ ಹೇಳಿದ್ದೇನು?

ಮತ್ತೊಂದೆಡೆ, ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಪರ ಸತೀಶ್ ಜಾರಕಿಹೊಳಿ (Satish Jarkiholi) ಮತಯಾಚನೆ ಮಾಡಿದರು. ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಗ್ರಾ.ಪಂ ಸದಸ್ಯರ ಸಭೆಯಲ್ಲಿ ಚನ್ನರಾಜ ಹಟ್ಟಿಹೊಳಿ ಭಾಗಿಯಾಗಿದ್ದರು.

ಇದನ್ನೂ ಓದಿ: ಶ್ರೀಕಿ ನಾಪತ್ತೆ ಕುರಿತ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಸಿಎಂ ಸಿಡಿಮಿಡಿ

ಬೆಳಗಾವಿ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಎರಡು ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಎರಡು ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ಚನ್ನರಾಜ ಹಟ್ಟಿಹೊಳಿಯನ್ನು ಅಭ್ಯರ್ಥಿಯನ್ನಾಗಿಸಲು ಕಾಂಗ್ರೆಸ್ ತೀರ್ಮಾನಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.