ETV Bharat / business

ಆರೋಗ್ಯ ವಿಮಾ ಪಾಲಿಸಿ ಖರೀದಿ ಮತ್ತು ಕ್ಲೇಮ್ ಹೇಗೆ? ಇಲ್ಲಿದೆ ಮಾಹಿತಿ..

author img

By

Published : Jan 10, 2023, 6:34 PM IST

ಆರೋಗ್ಯ ವಿಮಾ ಪಾಲಿಸಿ ಖರೀದಿ ಮತ್ತು ಕ್ಲೇಮ್ ಹೇಗೆ? ಇಲ್ಲಿದೆ ಮಾಹಿತಿ...
all-you-need-to-know-about-health-insurance-claims

ಆರೋಗ್ಯ ವಿಮಾ ಪಾಲಿಸಿ ಖರೀದಿಸುವ ಮುನ್ನ ಅವುಗಳು ನೀಡುವ ಕವರೇಜ್ ಬಗ್ಗೆ ಸಮರ್ಪಕವಾಗಿ ತಿಳಿದುಕೊಳ್ಳುವುದು ಅಗತ್ಯ. ಹಾಗೆಯೇ ನಿಮ್ಮ ಬಳಿ ಎರಡು ಆರೋಗ್ಯ ವಿಮಾ ಪಾಲಿಸಿಗಳಿದ್ದಾಗ ಅವನ್ನು ಬಳಸಿ ಹೇಗೆ ಕ್ಲೇಮ್ ಮಾಡುವುದು ಎಂಬುದು ಸಹ ಗೊತ್ತಿರಬೇಕು.

ಹೈದರಾಬಾದ್: ಕೋವಿಡ್​ ಆತಂಕದ ಹಿನ್ನೆಲೆಯಲ್ಲಿ ಆರೋಗ್ಯ ವಿಮೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ವಿಮಾ ಕ್ಲೇಮ್​​ಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಈಗಾಗಲೇ ಆರೋಗ್ಯ ವಿಮಾ ಕಂಪನಿಗಳಿಗೆ ನಿರ್ದೇಶನ ನೀಡಿದೆ. ಆದಾಗ್ಯೂ ಪಾಲಿಸಿದಾರರು ಕೆಲವು ವಿಷಯಗಳ ಬಗ್ಗೆ ಜಾಗರೂಕರಾಗಿದ್ದರೆ, ಅವರು ಯಾವುದೇ ತೊಂದರೆಗಳಿಲ್ಲದೇ ನಗದು ರಹಿತ ಚಿಕಿತ್ಸೆ ಪಡೆಯಬಹುದು. ಒಂದು ವೇಳೆ, ನೀವೇ ಬಿಲ್ ಪಾವತಿಸಿದರೆ, ಸುಲಭವಾಗಿ ಮೊತ್ತವನ್ನು ಹಿಂಪಡೆಯಬಹುದು.

ಇತ್ತೀಚಿನ ದಿನಗಳಲ್ಲಿ ಅನೇಕರು ಈಗ ಒಂದಕ್ಕಿಂತ ಹೆಚ್ಚು ಪಾಲಿಸಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕೆಲಸ ಮಾಡುವ ಕಂಪನಿಗಳು ನೀಡುವ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಜೊತೆಗೆ, ಜನ ತಮ್ಮದೇ ಆದ ಮತ್ತೊಂದು ಪಾಲಿಸಿಯನ್ನು ಖರೀದಿಸುತ್ತಿದ್ದಾರೆ. ಆದರೆ, ಹೀಗೆ ಒಂದಕ್ಕಿಂತ ಹೆಚ್ಚು ಪಾಲಿಸಿಗಳಿರುವಾಗ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾದಾಗ ಮೊದಲು ಯಾವ ಪಾಲಿಸಿ ಬಳಸಬೇಕು ಎಂಬ ಅನುಮಾನ ಕಾಡುತ್ತದೆ. ಏಕಕಾಲದಲ್ಲಿ ಎರಡು ಪಾಲಿಸಿಗಳನ್ನು ಬಳಸುವುದು ಮತ್ತು ಕ್ಲೇಮ್ ಕೇಳುವುದು ವಂಚನೆಯ ಕಾಯ್ದೆಯ ಅಡಿ ಬರುತ್ತದೆ. ಆದ್ದರಿಂದ ಯಾವತ್ತೂ ಇಂಥ ಪ್ರಯತ್ನ ಮಾಡಬೇಡಿ. ಆಸ್ಪತ್ರೆ ವೆಚ್ಚಗಳು ಒಂದು ಪಾಲಿಸಿಯ ವಿಮಾ ಮಿತಿಯನ್ನು ಮೀರಿದರೆ ಎರಡನೇ ಪಾಲಿಸಿಯನ್ನು ಬಳಸಬೇಕು.

ಉದಾಹರಣೆಗೆ ನೋಡುವುದಾದರೆ: ಕೆಲಸ ಮಾಡುವ ಕಂಪನಿ ನೀಡಿದ ಗ್ರೂಪ್ ಪಾಲಿಸಿಯ ಮೌಲ್ಯ 5 ಲಕ್ಷ ರೂಪಾಯಿ ಎಂದು ಭಾವಿಸೋಣ. ನೀವೇ 5 ಲಕ್ಷ ರೂಪಾಯಿಯ ಇನ್ನೊಂದು ಪಾಲಿಸಿ ತೆಗೆದುಕೊಂಡಿರುವಿರಿ ಎಂದುಕೊಳ್ಳೋಣ. ಆಸ್ಪತ್ರೆಯ ಬಿಲ್ 8 ಲಕ್ಷ ಎಂದು ಭಾವಿಸೋಣ. ಹೀಗಿದ್ದಾಗ ಮೊದಲು ಕಂಪನಿ ನೀಡಿದ ವಿಮೆ ಬಳಸಿ. ನಂತರ ನಿಮ್ಮ ಪಾಲಿಸಿಯನ್ನು ಕ್ಲೇಮ್ ಮಾಡಿ. ಇನ್ನು ನೀವು ವೈಯಕ್ತಿಕ ಪಾಲಿಸಿಯ ಬದಲು ಟಾಪ್-ಅಪ್ ಪಾಲಿಸಿಯನ್ನು ತೆಗೆದುಕೊಂಡಿದ್ದೀರಿ ಎಂದು ಭಾವಿಸೋಣ... ಆವಾಗ ನೀವು ಉಳಿದ ಮೊತ್ತಕ್ಕೆ ಬೇಸಿಕ್ ಪಾಲಿಸಿ ಮತ್ತು ನಂತರ ಟಾಪ್ - ಅಪ್ ಅನ್ನು ಬಳಸಬೇಕಾಗುತ್ತದೆ.

ಸಾಮಾನ್ಯವಾಗಿ ಆಸ್ಪತ್ರೆಯಲ್ಲಿ ಒಂದೇ ವಿಮಾ ಪಾಲಿಸಿಯ ಮೇಲೆ ಕ್ಲೇಮ್ ಅನ್ನು ಅನುಮತಿಸಲಾಗುತ್ತದೆ. ಹೆಚ್ಚುವರಿ ವೆಚ್ಚಗಳನ್ನು ಎರಡನೇ ವಿಮಾ ಕಂಪನಿಯಿಂದ ನಂತರ ಕ್ಲೇಮ್ ಮಾಡಬೇಕಾಗುತ್ತದೆ. ಅಂಥ ಸಂದರ್ಭಗಳಲ್ಲಿ, ಕೆಲ ಸಮಸ್ಯೆಗಳು ಎದುರಾಗಬಹುದು. ಎಲ್ಲ ಬಿಲ್‌ಗಳು ಮೊದಲು ಕ್ಲೇಮ್ ಮಾಡಿದ ವಿಮಾ ಕಂಪನಿಯ ಬಳಿ ಇರುತ್ತದೆ. ಆದ್ದರಿಂದ, ಮೂಲ ಬಿಲ್‌ಗಳ ಜೊತೆಗೆ, ಅವುಗಳ ನಕಲಿ ಪ್ರತಿಗಳನ್ನು ಪಡೆಯಿರಿ ಮತ್ತು ಆಸ್ಪತ್ರೆಯಿಂದ ದೃಢೀಕರಣವನ್ನು ಪಡೆಯಿರಿ.

ಯಾವುದನ್ನೂ ಲಿಖಿತವಾಗಿ ತಿಳಿಸಿ: ಮೊದಲ ವಿಮಾ ಕಂಪನಿಯು ನಿಮ್ಮ ಕ್ಲೇಮ್ ಅನ್ನು ಸ್ವೀಕರಿಸದಿದ್ದರೆ ಎರಡನೇ ವಿಮಾ ಕಂಪನಿಗೆ ಅದರ ಬಗ್ಗೆ ಲಿಖಿತವಾಗಿ ತಿಳಿಸಬೇಕು. ಆಗ ಕ್ಲೇಮ್ ಸಲ್ಲಿಸಲು ವಿಳಂಬವಾದರೂ ವಿಮಾ ಕಂಪನಿ ತಕರಾರು ಎತ್ತುವುದಿಲ್ಲ. ಇದು ಸಂದರ್ಭಕ್ಕೆ ಅನುಗುಣವಾಗಿ ಬದಲಾಗುತ್ತದೆ. ಆದ್ದರಿಂದ, ನಿಮ್ಮ ವಿಮಾ ಕಂಪನಿಯ ಕಸ್ಟಮರ್ ಕೇರ್ ಕೇಂದ್ರವನ್ನು ಮುಂಚಿತವಾಗಿ ಸಂಪರ್ಕಿಸಿ ಮತ್ತು ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳುವುದು ಅವಶ್ಯಕ.

ಯಾವ ಪಾಲಿಸಿಯನ್ನು ಮೊದಲು ಬಳಸಬೇಕು ಮತ್ತು ಯಾವುದನ್ನು ನಂತರ ಬಳಸಬೇಕು ಎಂಬುದು ಆಯಾ ಸಂದರ್ಭಗಳನ್ನು ಅವಲಂಬಿಸಿರುತ್ತದೆ. ಹೀಗಿದ್ದಾಗ ಸಂದರ್ಭಗಳನ್ನು ಅವಲಂಬಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಕಂಪನಿಯು ನೀಡುವ ವಿಮಾ ಪಾಲಿಸಿ ನಿಮ್ಮ ಬಳಿ ಇದ್ದಾಗ, ಸಾಧ್ಯವಾದಷ್ಟು ಅದಕ್ಕೇ ಮೊದಲ ಆದ್ಯತೆ ನೀಡಬೇಕು. ಸಾಮಾನ್ಯವಾಗಿ, ಇವು ಕ್ಲೇಮ್​​ಬೋನಸ್‌ನಂತಹ ಯಾವುದೇ ವಿಷಯವನ್ನು ಹೊಂದಿರುವುದಿಲ್ಲ. ವೈಯಕ್ತಿಕ ಪಾಲಿಸಿಗಳಿಗೆ ಯಾವುದೇ ಕ್ಲೇಮ್ ಬೋನಸ್ ಸಿಗುವುದಿಲ್ಲ. ಇದು ಪಾಲಿಸಿಯನ್ನು ನವೀಕರಿಸುವಾಗ ಪ್ರೀಮಿಯಂ ಅನ್ನು ಕಡಿಮೆ ಮಾಡುತ್ತದೆ ಅಥವಾ ಪಾಲಿಸಿಯ ಮೌಲ್ಯವನ್ನು ಹೆಚ್ಚಿಸುತ್ತದೆ.

ಕೆಲವು ವಿಮಾ ಪಾಲಿಸಿಗಳು ನಾಲ್ಕು ವರ್ಷಗಳ ನಂತರವೇ ಪೂರ್ವ ಅಸ್ತಿತ್ವದಲ್ಲಿರುವ ಕಾಯಿಲೆಗಳಿಗೆ ಕವರೇಜ್ ನೀಡುತ್ತವೆ. ಆದರೆ ಗುಂಪು ವಿಮಾ ಪಾಲಿಸಿಗಳು ಅಂಥ ಮಿತಿಯನ್ನು ಹೊಂದಿಲ್ಲದಿರಬಹುದು. ಆದ್ದರಿಂದ, ಅಂತಹ ಸಂದರ್ಭಗಳಲ್ಲಿ ಕಾರ್ಪೊರೇಟ್ ಪಾಲಿಸಿಯನ್ನು ಬಳಸಬೇಕು. ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಯಾವ ಪಾಲಿಸಿ ಹೆಚ್ಚಿನ ಪ್ರಯೋಜನ ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳಿ. ನಂತರ ಆ ಪಾಲಿಸಿ ಬಳಸಿದಲ್ಲಿ ಯಾವುದೇ ಸಮಸ್ಯೆಗಳಾಗುವುದಿಲ್ಲ.

ಇದನ್ನೂ ಓದಿ: ಜೀವ ವಿಮಾ ಪ್ರಕರಣ.. ಆನ್‌ಲೈನ್ ಮೂಲಕವೇ ಇತ್ಯರ್ಥಪಡಿಸಲು ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.