ETV Bharat / business

ಚೀನಾದ ​ದುರ್ಬಲ ಆರ್ಥಿಕತೆಗೆ ಕುಸಿದ ತೈಲ ದರ... ಭಾರತದಲ್ಲಿ ಪೆಟ್ರೋಲ್​, ಡೀಸೆಲ್ ದರವೆಷ್ಟು?

author img

By

Published : Aug 14, 2019, 12:43 PM IST

ಬುಧವಾರದ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್​ ಕಚ್ಚಾ ತೈಲದಲ್ಲಿ 64 ಸೆಂಟ್ ಅಥವಾ ಶೇ 1ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್​ 60.66 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ. ಮಂಗಳವಾರದ ವಹಿವಾಟಿನಂದು ಅತ್ಯಧಿಕ ಶೇ 4.7ರಷ್ಟು ಏರಿಕೆ ಆಗಿತ್ತು. ಡಿಸೆಂಬರ್​ ಬಳಿಕ ಒಂದೇ ದಿನದಲ್ಲಿ ಬುಧವಾರ ಗರಿಷ್ಠ ಇಳಿಕೆ ದಾಖಲಿಸಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಚೀನಾದ ಕೈಗಾರಿಕಾ ಉತ್ಪನ್ನಾ ಬೆಳವಣಿಗೆ ದರವು ಕಳೆದ 17 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದ್ದು, ಮತ್ತು ಚೀನಾ- ಅಮೆರಿಕ ನಡುವಿನ ವಾಣಿಜ್ಯ ಉದ್ವಿಗ್ನತೆ ಸಡಿಲಗೊಂಡಿದ್ದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್​ ಕಚ್ಚಾ ತೈಲ ದರದಲ್ಲಿ ಇಳಿಕೆಯಾಗಿದೆ.

ಬುಧವಾರದ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್​ ಕಚ್ಚಾ ತೈಲದಲ್ಲಿ 64 ಸೆಂಟ್ ಅಥವಾ ಶೇ 1ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್​ 60.66 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ. ಮಂಗಳವಾರದ ವಹಿವಾಟಿನಂದು ಅತ್ಯಧಿಕ ಶೇ 4.7ರಷ್ಟು ಏರಿಕೆ ಆಗಿತ್ತು. ಡಿಸೆಂಬರ್​ ಬಳಿಕ ಒಂದೇ ದಿನದಲ್ಲಿ ಬುಧವಾರ ಗರಿಷ್ಠ ಇಳಿಕೆ ದಾಖಲಿಸಿದೆ.

ಅಮೆರಿಕ ಮಾರುಕಟ್ಟೆಯಲ್ಲಿ ಕಚ್ಚಾ ಇಂಧನವು 75 ಸೆಂಟ್​ ಅಥವಾ ಶೇ 1.3ರಷ್ಟು​ ಇಳಿಕೆ ಕಂಡು ಪ್ರತಿ ಬ್ಯಾರೆಲ್​ 56.35 ಡಾಲರ್​ನಲ್ಲಿ ಖರೀದಿ ಆಗುತ್ತಿದೆ.

ಭಾರತೀಯ ಇಂಧನದ ಚಿಲ್ಲರೆ ಮಾರಾಟದಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರದಲ್ಲಿ ಇಂದು ಯಾವುದೇ ವ್ಯತ್ಯಾಸವಾಗಿಲ್ಲ. ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಲೀಟರ್​ ಡೀಸೆಲ್​ ಮೇಲೆ 6 ಪೈಸೆ ಕಡಿತವಾಗಿತ್ತು. ಬುಧವಾರವೂ ಇದೇ ದರದಲ್ಲಿ ಮುಂದುವರಿದು ₹ 65.43ಯಲ್ಲಿ ಮಾರಾಟ ಆಗುತ್ತಿದೆ. ಲೀಟರ್​ ಪೆಟ್ರೋಲ್​ ₹ 71.99ರಲ್ಲಿ ವಾಹನ ಚಾಲಕರು ಖರೀದಿಸುತ್ತಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.