ETV Bharat / business

ಸಾಗರೋತ್ತರ ಭಾರತೀಯ ನಾಗರಿಕರಿಗೆ ಸಿಹಿ ಸಮಾಚಾರ ಕೊಟ್ಟ ಭಾರತ ಸರ್ಕಾರ

author img

By

Published : Mar 30, 2021, 3:45 PM IST

OCI card
OCI card

ಸಾಗರೋತ್ತರ ನಾಗರಿಕರು ಅಥವಾ ಒಸಿಐ ಕಾರ್ಡ್ ಜಾಗತಿಕವಾಗಿ ಭಾರತೀಯ ಮೂಲದ ಜನರಿಗೆ ನೀಡಲಾಗುತ್ತದೆ. ಮತದಾನದ ಹಕ್ಕು, ಸರ್ಕಾರಿ ಸೇವೆ ಮತ್ತು ಕೃಷಿ ಭೂಮಿ ಖರೀದಿಸುವುದನ್ನು ಹೊರತುಪಡಿಸಿ ಭಾರತೀಯ ಪ್ರಜೆಯ ಬಹುತೇಕ ಎಲ್ಲಾ ಸವಲತ್ತುಗಳನ್ನು ಇದರಡಿ ನೀಡಲಾಗುತ್ತದೆ. ಒಸಿಐ ಕಾರ್ಡ್ ಅವರಿಗೆ ಭಾರತಕ್ಕೆ ವೀಸಾ ಮುಕ್ತ ಪ್ರಯಾಣ ನೀಡುತ್ತದೆ.

ವಾಷಿಂಗ್ಟನ್ / ನ್ಯೂಯಾರ್ಕ್: ಭಾರತೀಯ ಮೂಲದ ನಾಗಿಕರು ಮತ್ತು ಸಾಗರೋತ್ತರ ಭಾರತದ ನಾಗರಿಕ (ಒಸಿಐ) ಕಾರ್ಡ್‌ ಹೊಂದಿರುವ ಭಾರತೀಯ ವಲಸೆಗಾರರು ಇನ್ಮುಂದೆ ಭಾರತಕ್ಕೆ ಪ್ರಯಾಣಿಸಲು ತಮ್ಮ ಹಳೆಯ, ಅವಧಿ ಮೀರಿದ ಪಾಸ್‌ಪೋರ್ಟ್‌ ತರುವ ಅಗತ್ಯವಿಲ್ಲ.

ಸಾಗರೋತ್ತರ ನಾಗರಿಕರು ಅಥವಾ ಒಸಿಐ ಕಾರ್ಡ್ ಜಾಗತಿಕವಾಗಿ ಭಾರತೀಯ ಮೂಲದ ಜನರಿಗೆ ನೀಡಲಾಗುತ್ತದೆ. ಮತದಾನದ ಹಕ್ಕು, ಸರ್ಕಾರಿ ಸೇವೆ ಮತ್ತು ಕೃಷಿ ಭೂಮಿ ಖರೀದಿಸುವುದನ್ನು ಹೊರತುಪಡಿಸಿ ಭಾರತೀಯ ಪ್ರಜೆಯ ಬಹುತೇಕ ಎಲ್ಲಾ ಸವಲತ್ತುಗಳನ್ನು ಇದರಡಿ ನೀಡಲಾಗುತ್ತದೆ. ಒಸಿಐ ಕಾರ್ಡ್ ಅವರಿಗೆ ಭಾರತಕ್ಕೆ ವೀಸಾ ಮುಕ್ತ ಪ್ರಯಾಣ ನೀಡುತ್ತದೆ.

ಇದನ್ನೂ ಓದಿ: ತೀರಾ ಅಹಿತಕರ ಮಟ್ಟ ತಲುಪಿದ ಹಣದುಬ್ಬರ: RBIನ ದರ ಕಡಿತಕ್ಕೆ ತಡೆಗೋಡೆ- ಮೂಡಿಸ್ ವಿಶ್ಲೇಷಣೆ ​

ಒಸಿಐ ಕಾರ್ಡ್‌ನೊಂದಿಗೆ ಹಳೆಯ ಮತ್ತು ಹೊಸ ಪಾಸ್‌ಪೋರ್ಟ್‌ ಸಾಗಿಸುವ ಅವಶ್ಯಕತೆಯನ್ನು ದೂರ ಮಾಡಲಾಗಿದೆ. ಇನ್ಮುಂದೆ ಹಳೆಯ ಪಾಸ್‌ಪೋರ್ಟ್ ಸಂಖ್ಯೆ ಹೊಂದಿರುವ ಈಗ ಅಸ್ತಿತ್ವದಲ್ಲಿರುವ ಒಸಿಐ ಕಾರ್ಡ್‌ನ ಬಲದ ಮೇಲೆ ಪ್ರಯಾಣಿಸಬಹುದು. ಒಸಿಐ ಕಾರ್ಡ್ ಹೊಂದಿರುವವರು ತಮ್ಮ ಹಳೆಯ ಪಾಸ್‌ಪೋರ್ಟ್ ಸಾಗಿಸುವ ಅಗತ್ಯವಿಲ್ಲ. ಹೊಸ ಪಾಸ್​​ಪೋರ್ಟ್​ ಸಾಗಿಸುವುದು ಕಡ್ಡಾಯವಾಗಿದೆ ಎಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.