ETV Bharat / business

SBI ಜತೆ ಟಾಟಾ ಮೋಟಾರ್ಸ್​ ಒಪ್ಪಂದ : ವಾಣಿಜ್ಯ ವಾಹನಗಳ ಸಾಲ ಇನ್ನಷ್ಟು ಸರಳ

author img

By

Published : Mar 26, 2021, 8:06 PM IST

Tata Motors
Tata Motors

ಪಾಲುದಾರಿಕೆ ಕುರಿತು ಟಾಟಾ ಮೋಟಾರ್ಸ್ ಅಧ್ಯಕ್ಷ, ವಾಣಿಜ್ಯ ವಾಹನಗಳ ವ್ಯಾಪಾರ ಘಟಕದ ಗಿರೀಶ್ ವಾಘ್ ಮಾತನಾಡಿ, ಪ್ಯಾನ್ ಇಂಡಿಯಾ ಮೂಲಕ 22,000ಕ್ಕೂ ಹೆಚ್ಚು ಶಾಖೆಗಳೊಂದಿಗೆ ಎಸ್‌ಬಿಐ ದೇಶಾದ್ಯಂತ ವ್ಯಾಪಕ ಜಾಲ ಹೊಂದಿದೆ. ಇದು ಗ್ರಾಹಕರನ್ನು ತಲುಪಲು ನೆರವಾಗಲಿದೆ..

ನವದೆಹಲಿ : ಟಾಟಾ ಕಂಪನಿಯು ತನ್ನ ಶ್ರೇಣಿಯ ಸಣ್ಣ ಮತ್ತು ಲಘು ವಾಣಿಜ್ಯ ವಾಹನಗಳ ಖರೀದಿಗೆ ಆರ್ಥಿಕ ನೆರವು ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜತೆಗೆ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಹಯೋಗದೊಂದಿಗೆ ಟಾಟಾ ಮೋಟಾರ್ಸ್‌ನ ವಾಣಿಜ್ಯ ವಾಹನ (ಸಿವಿ) ಗ್ರಾಹಕರಿಗೆ ತೊಂದರೆಯಿಲ್ಲದ ರೀತಿ ಸಾಲ ಪಡೆಯಲು ಅವಕಾಶ ನೀಡುತ್ತದೆ. ಎಸ್‌ಬಿಐನ ವಿಶಿಷ್ಟ ತಂತ್ರಜ್ಞಾನವನ್ನು ಟಾಟಾ ಗ್ರಾಹಕರು ಪಡೆಯಬಹುದು ಎಂದು ಕಂಪನಿ ಪ್ರಕಟಣೆಯಲ್ಲಿ ಹೇಳಿದೆ.

ಈ ಒಪ್ಪಂದವು ಸುಲಭ ಸಾಲದ ರಚನಾತ್ಮಕ ಯೋಜನೆಗಳನ್ನು ಸಹ ಪರಿಚಯಿಸಲಿದೆ. ಬಿಎಸ್-IV ಮತ್ತು ಬಿಎಸ್-VI ವಾಹನಗಳ ನಡುವಿನ ವೆಚ್ಚದ ವ್ಯತ್ಯಾಸ ತಗ್ಗಿಸಲು ನೆರವಾಗುತ್ತದೆ. ಡೌನ್ ಪೇಮೆಂಟ್ ಮತ್ತು ವಾಹನದ ಇಎಂಐ ಕೂಡ ಸೇರಿಸಲಾಗಿದೆ.

ಸಾಲ ಅನುಮೋದನೆ ಪ್ರಕ್ರಿಯೆಯಲ್ಲಿ ಏಕರೂಪತೆ, ಪಾರದರ್ಶಕತೆ ಮತ್ತು ಕಡಿಮೆ ಸಮಯ ತಗ್ಗಿಸಲು ಉಭಯ ವ್ಯಾಪಾರ ಸಂಸ್ಥೆಗಳು ಎಸ್‌ಬಿಐನ ಸಂಪರ್ಕವಿಲ್ಲದ ಸಾಲ ನೀಡುವ ಪ್ಲಾಟ್​ಫಾರ್ಮ್​ ತಂತ್ರಜ್ಞಾನ ಬಳಸುತ್ತವೆ.

ಪಾಲುದಾರಿಕೆ ಕುರಿತು ಟಾಟಾ ಮೋಟಾರ್ಸ್ ಅಧ್ಯಕ್ಷ, ವಾಣಿಜ್ಯ ವಾಹನಗಳ ವ್ಯಾಪಾರ ಘಟಕದ ಗಿರೀಶ್ ವಾಘ್ ಮಾತನಾಡಿ, ಪ್ಯಾನ್ ಇಂಡಿಯಾ ಮೂಲಕ 22,000ಕ್ಕೂ ಹೆಚ್ಚು ಶಾಖೆಗಳೊಂದಿಗೆ ಎಸ್‌ಬಿಐ ದೇಶಾದ್ಯಂತ ವ್ಯಾಪಕ ಜಾಲ ಹೊಂದಿದೆ. ಇದು ಗ್ರಾಹಕರನ್ನು ತಲುಪಲು ನೆರವಾಗಲಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.