ETV Bharat / business

ಷೇರುಪೇಟೆಯಲ್ಲಿ ಕರಡಿ ಕುಣಿತ: ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 192 ಅಂಕ ಕುಸಿತ!

author img

By

Published : Jul 26, 2021, 11:19 AM IST

sensex-
sensex-

ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 192 ಪಾಯಿಂಟ್‌ಗಳ ಕುಸಿತ ಕಂಡಿದ್ದು, ಎನ್‌ಎಸ್‌ಇ ನಿಫ್ಟಿ 11.55 ಪಾಯಿಂಟ್ ಕುಸಿದಿದೆ.

ಮುಂಬೈ: ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಸೋಮವಾರದ ಆರಂಭಿಕ ವಹಿವಾಟಿನಲ್ಲಿ 192 ಪಾಯಿಂಟ್‌ಗಳ ಕುಸಿತ ಕಂಡಿದ್ದು, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ನಷ್ಟ ಅನುಭವಿಸಿದೆ.

192.17 ಪಾಯಿಂಟ್‌ಗಳಷ್ಟು ಕುಸಿದ ನಂತರ, 30 ಷೇರುಗಳ ಬಿಎಸ್‌ಇ ಸೂಚ್ಯಂಕವು ಆರಂಭಿಕ ನಷ್ಟದಲ್ಲಿ 54.98 ಪಾಯಿಂಟ್‌ಗಳು ಅಥವಾ 0.10 ಶೇಕಡಾ ಕಡಿಮೆಯಾಗಿ 52,920.82ರಲ್ಲಿ ವಹಿವಾಟು ನಡೆಸಿತು. ಆದರೆ ಎನ್‌ಎಸ್‌ಇ ನಿಫ್ಟಿ 11.55 ಪಾಯಿಂಟ್ ಅಥವಾ 0.07ರಷ್ಟು ಕುಸಿದು 15,844.50ಕ್ಕೆ ತಲುಪಿದೆ.

ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಆಕ್ಸಿಸ್ ಬ್ಯಾಂಕ್ ಅಗ್ರಸ್ಥಾನದಲ್ಲಿದ್ದು, ಶೇಕಡಾ 1ಕ್ಕಿಂತಲೂ ಹೆಚ್ಚು ನಷ್ಟವಾಗಿದೆ. ನಂತರದ ಸ್ಥಾನದಲ್ಲಿ ಮಾರುತಿ, ಎಸ್‌ಬಿಐ, ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್ ಇವೆ. ರಿಲಯನ್ಸ್ ಶೇ 0.41ರಷ್ಟು ಕಡಿಮೆ ವಹಿವಾಟು ನಡೆಸುತ್ತಿದೆ.

ಮತ್ತೊಂದೆಡೆ, ಐಟಿಸಿ, ಟೈಟಾನ್, ಇನ್ಫೋಸಿಸ್, ಸನ್ ಫಾರ್ಮಾ, ಎನ್‌ಟಿಪಿಸಿ ಮತ್ತು ಟಾಟಾ ಸ್ಟೀಲ್ ಷೇರುಗಳನ್ನು​ ಹೊಂದಿದವರು ಲಾಭ ಗಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.