ETV Bharat / briefs

ಫ್ರಾನ್ಸ್ ಅಧ್ಯಕ್ಷರಿಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿ!

author img

By

Published : Jun 8, 2021, 7:55 PM IST

Updated : Jun 8, 2021, 9:15 PM IST

French President Emmanuel Macron was slapped in the face on Tuesday by a man
French President Emmanuel Macron was slapped in the face on Tuesday by a man

ಆಗ್ನೇಯ ಫ್ರಾನ್ಸ್‌ನ ಡ್ರೋಮ್ ಪ್ರದೇಶಕ್ಕೆ ಭೇಟಿ ನೀಡಿದ್ದ ಅಧ್ಯಕ್ಷರು, ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಜೀವನವು ಹೇಗಿದೆ ಎಂಬುದರ ಕುರಿತು ರೆಸ್ಟೋರೆಂಟ್‌ರ್​ಗಳು ಮತ್ತು ವಿದ್ಯಾರ್ಥಿಗಳ ಜೊತೆ ಸಂವಹನ ನಡೆಸುತ್ತಿದ್ದರು..

ದಕ್ಷಿಣ ಫ್ರಾನ್ಸ್‌ : ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿದ್ದಾನೆ.

ಎಮ್ಯಾನುಯೆಲ್ ಸಂಚರಿಸುವಾಗ ನೋಡುಗರ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ದಿಢೀರನೆ ಆಗಮಿಸಿ ಮುಖಕ್ಕೆ ಕಪಾಳಮೋಕ್ಷ ಮಾಡಿದ್ದಾನೆ.

ಎಮ್ಯಾನುಯೆಲ್ ಭದ್ರತಾ ತಂಡ ತಕ್ಷಣ ಎಚ್ಚೆತ್ತು ಆ ವ್ಯಕ್ತಿಯನ್ನು ಬದಿಗೆ ಎಳೆದಿದ್ದಾರೆ ಮತ್ತು ಅಧ್ಯಕ್ಷರನ್ನು ಅವನಿಂದ ದೂರ ಸರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಅಲ್ಲಿನ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಆಗ್ನೇಯ ಫ್ರಾನ್ಸ್‌ನ ಡ್ರೋಮ್ ಪ್ರದೇಶಕ್ಕೆ ಭೇಟಿ ನೀಡಿದ್ದ ಅಧ್ಯಕ್ಷರು, ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಜೀವನವು ಹೇಗಿದೆ ಎಂಬುದರ ಕುರಿತು ರೆಸ್ಟೋರೆಂಟ್‌ರ್​ಗಳು ಮತ್ತು ವಿದ್ಯಾರ್ಥಿಗಳ ಜೊತೆ ಸಂವಹನ ನಡೆಸುತ್ತಿದ್ದರು.

Last Updated :Jun 8, 2021, 9:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.