ETV Bharat / bharat

ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡ ಮದ್ರಾಸ್​ ಐಐಟಿಯ ಪಿಹೆಚ್‌ಡಿ ವಿದ್ಯಾರ್ಥಿ

author img

By

Published : Apr 1, 2023, 11:27 AM IST

suicide
ಪಿಹೆಚ್‌ಡಿ ವಿದ್ಯಾರ್ಥಿ

"I am sorry, not good, Enough" ಎಂದು ಸ್ಟೇಟಸ್​ ಹಾಕಿ ಐಐಟಿ ಮದ್ರಾಸ್ ಸಂಶೋಧನಾ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡು: ಐಐಟಿ ಮದ್ರಾಸ್‌ನ ಪಿಹೆಚ್‌ಡಿ ಸಂಶೋಧನಾ ವಿದ್ಯಾರ್ಥಿಯೊಬ್ಬರು ಚೆನ್ನೈ ನಗರದ ವೆಲಚೇರಿ ವಸತಿ ಪ್ರದೇಶದಲ್ಲಿನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಾವಿಗೆ ಶರಣಾಗುವ ಕೆಲವೇ ಕ್ಷಣಗಳ ಮೊದಲು, ತಮ್ಮ ಫೋನ್​ನಲ್ಲಿ ಸ್ಟೇಟಸ್ ಹಾಕಿದ ವಿದ್ಯಾರ್ಥಿ "ಕ್ಷಮಿಸಿ, ಚೆನ್ನಾಗಿಲ್ಲ, ಸಾಕು" ಪೋಸ್ಟ್​ ಮಾಡಿದ್ದಾರೆ.

ಪಶ್ಚಿಮ ಬಂಗಾಳದ 32 ವರ್ಷದ ಸಚಿನ್ ಕುಮಾರ್ ಜೈನ್ ಮೃತ ವಿದ್ಯಾರ್ಥಿ. ಇವರು ಶುಕ್ರವಾರ ಬೆಳಗ್ಗೆ ಎಂದಿನಂತೆ ಐಐಟಿ-ಮದ್ರಾಸ್‌ ಕಾಲೇಜ್​ಗೆ ಹೋಗಿದ್ದರು. ಮಧ್ಯಾಹ್ನ 12 ರ ಸುಮಾರಿಗೆ ಇಬ್ಬರು ಸ್ನೇಹಿತರಿಗೆ ಮಾತ್ರ ಮಾಹಿತಿ ನೀಡಿ ತಾವು ವಾಸವಿದ್ದ ಬಾಡಿಗೆ ಮನೆಗೆ ಹಿಂದಿರುಗಿದರು. ರೂಮ್​ಗೆ ಬಂದ ಕೂಡಲೇ ತಮ್ಮ ಫೋನ್​ನಲ್ಲಿ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವೆಲಾಚೇರಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಗಗನಸಖಿ‌ ಅನುಮಾನಾಸ್ಪದ ಸಾವು ಪ್ರಕರಣ: ಹತ್ಯೆ ಪ್ರಕರಣ ದಾಖಲು, ಪ್ರಿಯಕರ ಪೊಲೀಸ್ ವಶಕ್ಕೆ

ತರಗತಿ ಮಧ್ಯದಲ್ಲೇ ಹೋಗುತ್ತಿರುವುದನ್ನು ಗಮನಿಸಿದ ಕೆಲ ಸ್ನೇಹಿತರು ಬಳಿಕ ಏನಾಯಿತೆಂದು ವಿಚಾರಿಸಲು ಸಚಿನ್ ಕುಮಾರ್ ಬಾಡಿಗೆ ಮನೆಗೆ ಬಂದಾಗ ಬಾಗಿಲು ಬಡಿದಿದ್ದಾರೆ. ಬಳಿಕ ಒಳಗಿನಿಂದ ಬೀಗ ಹಾಕಿರುವುದು ಕಂಡುಬಂದಿದ್ದು, ಕೂಡಲೇ ಬಾಗಿಲು ಒಡೆದು ನೋಡಿದಾಗ ಆತ ಶವವಾಗಿ ಪತ್ತೆಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ವೆಲಚೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ : ಬೆಂಗಳೂರು ಹಾಸ್ಟೆಲ್ ಶೌಚಾಲಯದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

ಇನ್ನು ದೇಶದ ಐಐಟಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ), ಎನ್‌ಐಟಿ (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಮತ್ತು ಐಐಎಂ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ) ಗಳಂತಹ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಕೇಸ್​ಗಳು ಮುಂದುವರೆದಿದೆ. 2022ರ ಒಂದೇ ವರ್ಷದಲ್ಲಿ 16 ವಿದ್ಯಾರ್ಥಿಗಳು ಸಾವಿಗೆ ಶರಣಾದ್ದಾರೆ ಎಂದು ಕೇಂದ್ರ ಶಿಕ್ಷಣ ಖಾತೆಯ ರಾಜ್ಯ ಸಚಿವ ಸುಭಾಸ್ ಸರ್ಕಾರ್ ರಾಜ್ಯಸಭೆಯಲ್ಲಿ ಇತ್ತೀಚೆಗೆ ಲಿಖಿತ ಮಾಹಿತಿ ನೀಡಿದ್ದರು.

ಇದನ್ನೂ ಓದಿ : ಮೊಬೈಲ್​ ಕೊಡಿಸದ 'ಬಡ' ತಾಯಿಯೊಂದಿಗೆ ಜಗಳ: ಮನೆ ಬಿಟ್ಟು ಹೋದ ವಿದ್ಯಾರ್ಥಿ ಶವವಾಗಿ ಪತ್ತೆ

2019 ರಲ್ಲಿ 16 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. 2020ರಲ್ಲಿ ಐವರು ಮತ್ತು 2021ರಲ್ಲಿ ಏಳು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು. 2022ನೇ ಸಾಲಿನಲ್ಲಿ ಒಟ್ಟು 16 ಜನ ವಿದ್ಯಾರ್ಥಿಗಳು ಸಾವಿಗೆ ಶರಣಾಗಿದ್ದರು. ಐಐಟಿಯಲ್ಲಿ ಎಂಟು ಮಂದಿ, ಎನ್​ಐಟಿಯಲ್ಲಿ ಏಳು ಜನ ಮತ್ತು ಐಐಎಂನಲ್ಲಿ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದನ್ನೂ ಓದಿ : ಒಂದೇ ವರ್ಷದಲ್ಲಿ ಐಐಟಿ, ಎನ್‌ಐಟಿ, ಐಐಎಂ ಸಂಸ್ಥೆಯ 16 ವಿದ್ಯಾರ್ಥಿಗಳ ಆತ್ಮಹತ್ಯೆ: ಕೇಂದ್ರ ಶಿಕ್ಷಣ ಇಲಾಖೆ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.