ETV Bharat / health

ಆಸಿಡ್ ರಿಫ್ಲಕ್ಸ್ ಔಷಧಿಗಳಿಂದ ಮೈಗ್ರೇನ್​ ಅಪಾಯ ಹೆಚ್ಚಳ ಸಾಧ್ಯತೆ; ಅಧ್ಯಯನ - acid reflux medication

author img

By ETV Bharat Karnataka Team

Published : May 7, 2024, 12:14 PM IST

acid reflux medications may raise the risk of migraines
acid reflux medications may raise the risk of migraines (Photo: IANS)

ಮೈಗ್ರೇನ್ ಅಥವಾ ತೀವ್ರ ತಲೆನೋವಿಗೆ ತೆಗೆದುಕೊಳ್ಳುವ ಔಷಧಿಗಳನ್ನು ಅಥವಾ ಪೂರಕಗಳನ್ನು ತೆಗೆದುಕೊಳ್ಳುತ್ತಿದ್ದಾರೆಯೇ ಎಂದು ಗಮನಿಸಬೇಕಾಗಿದೆ ಎಂದು ಅಧ್ಯಯನ ತಿಳಿಸಿದೆ.

ನವದೆಹಲಿ: ನೋವನ್ನು ಕಡಿಮೆ ಮಾಡಲು ತೆಗೆದುಕೊಳ್ಳುವಂತಹ ಆಸಿಡ್ ರಿಫ್ಲಕ್ಸ್ ಔಷಧಿಗಳು ಈಗಾಗಗಲೇ ತಲೆನೋವು ಹೊಂದಿರುವವರಲ್ಲಿ ಮೈಗ್ರೇನ್​ ಅಪಾಯ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಉನ್ನತ ನರರೋಗ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನ್ಯೂರಾಲಜಿ ಕ್ಲಿನಿಕಲ್ ಪ್ರಾಕ್ಟೀಸ್ ಜರ್ನಲ್‌ನಲ್ಲಿ ಪ್ರಕಟವಾದ ಜರ್ನಲ್​​ನಲ್ಲಿ ಈ ಕುರಿತು ಇಂಧ್ರಪ್ರಸ್ಥ ಅಪೊಲೊ ಆಸ್ಪತ್ರೆಗಳ ಡಾ ಸುಧೀರ್ ಕುಮಾರ್ ಈ ವಿಷಯ ತಿಳಿಸಿದ್ದಾರೆ. ಅಧ್ಯಯನದಲ್ಲಿ ಈ ಕಡಿಮೆ ಆಮ್ಲತೆಯ ಔಷಧಗಳು ಮೈಗ್ರೇನ್​ಗೆ ಕಾರಣವಾಗುತ್ತದೆ ಎಂದು ತಿಳಿಸಿಲ್ಲ. ಬದಲಾಗಿ ಅದರೊಂದಿಗೆ ಸಂಬಂಧವನ್ನು ಹೊಂದಿದೆ ಎಂದು ಹೇಳಲಾಗಿದೆ.

ಅಮೆರಿಕದಲ್ಲಿನ ಮೇರಿಲ್ಯಾಂಡ್​ ಯೂನಿವರ್ಸಿಟಿ ಸಂಶೋಧಕರ ತಂಡ ಈ ಕುರಿತು ಅಧ್ಯಯನ ನಡೆಸಿದೆ. ಪ್ರೋಟಾನ್ ಪಂಪ್ ಇನ್ಹಿಬಿಟರ್‌ಗಳಾದ ಒಮೆಪ್ರಜೋಲ್ ಮತ್ತು ಎಸೋಮೆಪ್ರಜೋಲ್, ಹಿಸ್ಟಮೈನ್ ಎಚ್​2 ನಂತಹ ಆಸಿಡ್​​ ರಿಫ್ಲಕ್ಸ್​​ ಔಷಧಿಗಳು ಹೆಚ್ಚಿನ ಅಪಾಯಕ್ಕೆ ಸಂಬಂಧಿಸಿವೆ ಎಂದು ಅಧ್ಯಯನ ತಿಳಿಸಿದೆ. ಈ ಔಷಧಗಳ ಸೇವನೆಯಿಂದ ಮೈಗ್ರೇನ್​ ಮತ್ತು ಇತರೆ ರೀತಿಯ ತಲೆನೋವಿನ ಅಪಾಯ ಹೆಚ್ಚಿದ್ದು, ಇವುಗಳನ್ನು ತೆಗೆದುಕೊಳ್ಳದಿರುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

ಮೈಗ್ರೇನ್​ ಅಥವಾ ಇತರೆ ಗಂಭೀರ ತಲೆನೋವಿನಿಂದ ಬಳಲುತ್ತಿರುವವರು ಅಥವಾ ಜಠರ ಕರುಳಿನ ರೋಗಲಕ್ಷಣಗಳಿಗೆ ಚಿಕಿತ್ಸೆಗೆ ಔಷಧಿ ಪಡೆಯುತ್ತಿರುವವರು ಇಂತಹ ಆಸಿಡ್​ ರಿಫ್ಲಕ್ಸ್​​ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಈ ಔಷಧಗಳು ಅವರ ತಲೆನೋವು ಕಡಿಮೆ ಮಾಡಿದೆಯಾ ಎಂದು ನೋಡುವುದು ಉತ್ತಮವಾಗಿದೆ. ಹಾಗೇ, ಮೈಗ್ರೇನ್ ಅಥವಾ ತೀವ್ರ ತಲೆನೋವು ಹೊಂದಿರುವ ಜನರು ಈ ಔಷಧಿಗಳನ್ನು ಅಥವಾ ಪೂರಕಗಳನ್ನು ತೆಗೆದುಕೊಳ್ಳುತ್ತಿದ್ದಾರೆಯೇ ಎಂದು ಗಮನಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

ಆಸಿಡ್​ ರಿಫ್ಲಕ್ಸ್​​ ಔಷಧಗಳ ಬಳಕೆ ಮಾಡುವವರಲ್ಲಿ ಮೈಗ್ರೇನ್ ಮತ್ತು ಇತರ ತಲೆನೋವಿನ ಅಪಾಯ ಶೇ 70ರಷ್ಟು ಇದೆ ಎಂದು ಅಧ್ಯಯನ ಕಂಡು ಹಿಡಿದಿದೆ. ಜಠರಗರುಳಿನ ನೋವಿನ ಪರಿಸ್ಥಿತಿಗಳು ಮತ್ತು ಮೈಗ್ರೇನ್ ಕಾಯಿಲೆ ಮತ್ತು ರೋಗಲಕ್ಷಣಗಳ ನಡುವಿನ ಕೊಮೊರ್ಬಿಡಿಟಿಗೆ ಸಂಬಂಧಿಸಿವೆ. ಅಧ್ಯಯನದಲ್ಲಿ ವೈದ್ಯರು ಸೂಚಿಸಿದ ಔಷಧಗಳನ್ನು ಮಾತ್ರ ಗಮನಿಸಲಾಗಿದೆ.

ಹೆಲಿಕೋಬ್ಯಾಕ್ಟರ್ ಪೈಲೋರಿ ಸೋಂಕು, ಕರುಳಿನ ಕೆಲವು ಲಕ್ಷಣ, ಹೊಟ್ಟೆ ಕಾಯಿಲೆ, ಜಠರ ಹುಣ್ಣುಗಳು, ಗ್ಯಾಸ್ಟ್ರೋಪರೆಸಿಸ್ ಮತ್ತು ಮೈಗ್ರೇನ್ ನಡುವಿನ ಸಂಬಂಧಗಳನ್ನು ಹಲವಾರು ಅಧ್ಯಯನಗಳು ಸಾಬೀತುಪಡಿಸಿವೆ. ಈ ಕುರಿತ ಪರಿಣಾಮದ ಸಂಬಂಧವನ್ನು ಸ್ಥಾಪಿಸಲು ಹೆಚ್ಚಿನ ಅಧ್ಯಯನಗಳ ಅಗತ್ಯವಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. (ಐಎಎನ್​ಎಸ್​​)

ಇದನ್ನೂ ಓದಿ: ಮೈಗ್ರೇನ್​​ಗೆ ಕಾರಣವಾಗುವ​ ಪ್ರಚೋದನಾ ಅಂಶಗಳನ್ನು ಪತ್ತೆ ಮಾಡಿದ ಸಂಶೋಧಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.