ETV Bharat / bharat

ಮೊಬೈಲ್​ ಕೊಡಿಸದ 'ಬಡ' ತಾಯಿಯೊಂದಿಗೆ ಜಗಳ: ಮನೆ ಬಿಟ್ಟು ಹೋದ ವಿದ್ಯಾರ್ಥಿ ಶವವಾಗಿ ಪತ್ತೆ

author img

By

Published : Jun 2, 2022, 4:41 PM IST

Updated : Jun 2, 2022, 4:48 PM IST

ಹತ್ತನೇ ತರಗತಿ ಪರೀಕ್ಷೆ ಬರೆದಿದ್ದ ಬಾಲಕ ತನ್ನ ತಾಯಿ ಬಳಿ ಮೊಬೈಲ್​ ಕೊಡಿಸುವಂತೆ ಕೇಳಿಕೊಂಡಿದ್ದ. ಆದರೆ, ಮೊಬೈಲ್​ ಕೊಡಿಸಲು ಅಶಕ್ತರಾಗಿದ್ದ ತಾಯಿ ಕೆಲ ದಿನಗಳ ಬಳಿಕ ಕೊಡಿಸುವುದಾಗಿ ಹೇಳಿದ್ದರು. ಇದರಿಂದ ಜಗಳವಾಡಿ ಮನೆ ಬಿಟ್ಟು ಬಾಲಕ ಹೋಗಿದ್ದ.

The tenth Class student committed suicide for a mobile phone
ಮೊಬೈಲ್​ ಕೊಡಿಸದ 'ಬಡ' ತಾಯಿಯೊಂದಿಗೆ ಜಗಳ: ಮನೆ ಬಿಟ್ಟು ಹೋಗದ ವಿದ್ಯಾರ್ಥಿ ಶವವಾಗಿ ಪತ್ತೆ

ಹೈದರಾಬಾದ್ ​(ತೆಲಂಗಾಣ): ಮೊಬೈಲ್​ ಕೊಡಿಸಿದ ಕಾರಣಕ್ಕೆ ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ನಡೆದಿದೆ. ಸಾಯಿ ಲಿಖಿತ್​ ಎಂಬ ಬಾಲಕನೇ ಮೃತ ಎಂದು ಗುರುತಿಸಲಾಗಿದೆ.

ಪ್ರಗಳ್ಳಪಲ್ಲಿ ಗ್ರಾಮದ ನಿವಾಸಿಯಾದ ಸಾಯಿ ಇತ್ತೀಚೆಗೆ ಹತ್ತನೇ ತರಗತಿ ಪರೀಕ್ಷೆ ಬರೆದಿದ್ದ. ಎಲ್ಲ ಪರೀಕ್ಷೆ ಮುಗಿದ ನಂತರ ಮೇ 30ರಂದು ತನ್ನ ತಾಯಿ ಸುಶೀಲಾ ಬಳಿ ಮೊಬೈಲ್​ ಕೊಡಿಸುವಂತೆ ಕೇಳಿಕೊಂಡಿದ್ದ. ಆದರೆ, ಇವರ ಕುಟುಂಬ ತುಂಬಾ ಬಡತನದಿಂದ ಕೂಡಿದ್ದು, ಮೊಬೈಲ್​ ಕೊಡಿಸಲು ತಾಯಿ ಅಶಕ್ತರಾಗಿದ್ಧಾರೆ.

ಮೊಬೈಲ್​ ಕೊಡಿಸದ 'ಬಡ' ತಾಯಿಯೊಂದಿಗೆ ಜಗಳ: ಮನೆ ಬಿಟ್ಟು ಹೋದ ವಿದ್ಯಾರ್ಥಿ ಶವವಾಗಿ ಪತ್ತೆ

ಹೀಗಾಗಿ ಕೆಲ ದಿನಗಳು ಕಳೆದ ಮೇಲೆ ಕೊಡಿಸುವೆ ಎಂದು ಮಗನನ್ನು ತಾಯಿ ಸಮಾಧಾನ ಹೇಳಿದ್ದರು. ಇಷ್ಟಕ್ಕೆ ಸುಮ್ಮನಾಗದ ಸಾಯಿ ತಾಯಿ ಮೇಲೆ ಕೋಪಗೊಂಡು ಆಕೆಯೊಂದಿಗೆ ಜಗಳವಾಡಿ ಹೊರಗಡೆ ಹೋಗಿದ್ದ. ಆದರೆ, ಅವತ್ತು ಮನೆಯಿಂದ ಹೊರ ಹೋಗಿದ್ದ ಸಾಯಿ ಮರಳಿ ಮನೆಗೆ ಬಂದಿಲ್ಲ. ತಮ್ಮ ಸಂಬಂಧಿಕರ ಮನೆಗಳಿಗೆ ಹೋಗಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.

ಇದರಿಂದ ಆತಂಕಗೊಂಡ ತಾಯಿ ಸುಶೀಲಾ ಪೊಲೀಸರಿಗೆ ದೂರು ನೀಡಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕಾರ್ಯಾಚರಣೆಗೆ ಇಳಿದಾಗ ಜೂ.1ರಂದು ಪಾಲೆಂ ಡ್ಯಾಂನಲ್ಲಿ ಸಾಯಿ ಮೃತದೇಹ ಪತ್ತೆಯಾಗಿದೆ. ಒಂದು ವರ್ಷದ ಹಿಂದೆಯಷ್ಟೇ ಸಾಯಿ ತಂದೆ ಸಾವನ್ನಪ್ಪಿದ್ದರು. ಈಗ ಮಗ ಸಾಯಿಯನ್ನೂ ಕಳೆದುಕೊಂಡು ಸುಶೀಲಾ ಕಣ್ಣೀರು ಸುರಿಸುವಂತೆ ಆಗಿದೆ.

ಇದನ್ನೂ ಓದಿ: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಎಚ್ಚರ: ಹಾರರ್​ ವಿಡಿಯೋದಿಂದ ಪ್ರಭಾವಿತನಾಗಿ ಬಾಲಕ ಏನಾದ ನೋಡಿ!

Last Updated :Jun 2, 2022, 4:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.