ETV Bharat / bharat

ಕೇಂದ್ರ, ಉತ್ತರಪ್ರದೇಶ ಸರ್ಕಾರಕ್ಕೆ ವಿಐಪಿ ಪಕ್ಷದ ಅಧ್ಯಕ್ಷ ಮುಖೇಶ್​ ಸಾಹ್ನಿ ಬೆದರಿಕೆ

author img

By

Published : Feb 26, 2022, 5:52 PM IST

Vikasheel Insaan
ಮುಖೇಶ್​ ಸಾಹ್ನಿ

ಉತ್ತರಪ್ರದೇಶದ ವಿಧಾನಸಭೆ ಚುನಾವಣೆ 4ನೇ ಹಂತದ ಮತದಾನಕ್ಕೆ ಸಿದ್ಧತೆ ನಡೆದ ಮಧ್ಯೆಯೇ ವಿಕಾಸಶೀಲ ಇನ್ಸಾನ್​ ಪಕ್ಷ(ವಿಐಪಿ)ದ ರಾಷ್ಟ್ರೀಯ ಅಧ್ಯಕ್ಷ ಮುಖೇಶ್​ ಸಾಹ್ನಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಕ್ಕೆ ಬೆದರಿಕೆ ಹಾಕಿದ ಘಟನೆ ನಡೆದಿದೆ.

ಬಲ್ಲಿಯಾ(ಉತ್ತರಪ್ರದೇಶ): ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯ 4ನೇ ಹಂತದ ಮತದಾನಕ್ಕೆ ಸಿದ್ಧತೆ ನಡೆದ ಮಧ್ಯೆಯೇ ವಿಕಾಸಶೀಲ ಇನ್ಸಾನ್​ ಪಕ್ಷ(ವಿಐಪಿ)ದ ರಾಷ್ಟ್ರೀಯ ಅಧ್ಯಕ್ಷ ಮುಖೇಶ್​ ಸಾಹ್ನಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಕ್ಕೆ ಬೆದರಿಕೆ ಹಾಕಿದ ಘಟನೆ ನಡೆದಿದೆ.

ಬಲ್ಲಿಯಾದ ಕಾಲೇಜೊಂದರಲ್ಲಿ ಪ್ರಚಾರ ರ‍್ಯಾಲಿ ನಡೆಸುತ್ತಿದ್ದ ವೇಳೆ ವಿಐಪಿ ಪಕ್ಷದ ಅಧ್ಯಕ್ಷ ಮುಖೇಶ್​ ಸಾಹ್ನಿ ಮಾತನಾಡುತ್ತಾ, ಕೇಂದ್ರ ಹಾಗೂ ಉತ್ತರಪ್ರದೇಶ ಬಿಜೆಪಿ ನೇತೃತ್ವದ ಸರ್ಕಾರ ನಿಶಾದ್​ ಸಮುದಾಯಕ್ಕೆ ಮೀಸಲಾತಿ ನೀಡದಿದ್ದರೆ ಸರ್ಕಾರವನ್ನು ಉರುಳಿಸಲಾಗುವುದು ಎಂದು ಬೆದರಿಕೆ ಮಾತನ್ನಾಡಿದ್ದಾರೆ.

ಅಲ್ಲದೇ, ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷವನ್ನು ನಾವು ಬೆಂಬಲಿಸಲಿದ್ದೇವೆ. ನಿಶಾದ್​ ಸಮಾಜಕ್ಕೆ ಮೀಸಲಾತಿ ಕೊಡಿಸುವ ಸಲುವಾಗಿ ನಮ್ಮ ಹೋರಾಟ ಮುಂದುವರಿಯಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್​ ಚುನಾವಣೆ ವೇಳೆ, ಮೀಸಲಾತಿ ಬಗ್ಗೆ ಮಾತನಾಡಿ ಬಳಿಕ ಮರೆತು ಬಿಡುತ್ತಾರೆ. ಇದು ಮುಂದೆ ಸರ್ಕಾರ ರಚನೆಗೆ ಮುಳುವಾಗಲಿದೆ ಎಂದು ಟೀಕಿಸಿದ್ದಾರೆ.

ಅಲ್ಲದೇ ಚುನಾವಣಾ ಆಯೋಗದ ವಿರುದ್ಧವೂ ವಾಗ್ದಾಳಿ ನಡೆಸಿರುವ ಸಾಹ್ನಿ, ವಿಕಾಸ್​ಶೀಲ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲು ಸಲ್ಲಿಸಿದ್ದ ಅರ್ಧದಷ್ಟು ಅಭ್ಯರ್ಥಿಗಳ ನಾಮಪತ್ರಗಳನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ ಎಂದಿದ್ದಾರೆ.

ಓದಿ: ನಿರ್ಬಂಧಗಳಿಂದ ಕೆರಳಿದ ರಷ್ಯಾ.. ಅಮೆರಿಕಕ್ಕೆ ಬಾಹ್ಯಾಕಾಶ ಕೇಂದ್ರದ ಬೆದರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.