ETV Bharat / bharat

ತಿರುಪುರ್ ಬಳಿ ರೈಲಿಗೆ ಸಿಲುಕಿ ಬಿಹಾರದ ಮೂಲದ ಕಾರ್ಮಿಕ ಸಾವು

author img

By

Published : Mar 4, 2023, 4:50 PM IST

Updated : Mar 7, 2023, 4:29 PM IST

Laborer death, workers protest in front of railway station
ಕಾರ್ಮಿಕ ಸಾವು ,ರೈಲ್ವೆ ಠಾಣೆ ಎದುರು ಕಾರ್ಮಿಕರು ಪ್ರತಿಭಟನೆ

ಬಿಹಾರ ಮೂಲದ ಕಾರ್ಮಿಕ ರೈಲಿಗೆ ಸಿಲುಕಿ ಸಾವು ಪ್ರಕರಣ ವರದಿಯಾಗಿದ್ದು,ಈ ಸಂಬಂಧ ಪ್ರಕರಣ ದಾಖಲಾಗಿದೆ.

ತಿರುಪುರ್ (ತಮಿಳುನಾಡು):ತಮಿಳುನಾಡಿನ ತಿರುಪುರ್ ಬಳಿ ಬಿಹಾರ ಮೂಲದ ಕಾರ್ಮಿಕನೊಬ್ಬ ರೈಲಿಗೆ ಸಿಲುಕಿ ಸಾವಿಗೀಡಾಗಿದ್ದರಿಂದ ವಲಸೆ ಕಾರ್ಮಿಕರು ಇಲ್ಲಿನ ರೈಲ್ವೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಸಾವಿಗೀಡಾದ ಕಾರ್ಮಿಕ ಸಂಜೀವ್ ಕುಮಾರ ಎಂದು ಗುರುತಿಸಲಾಗಿದೆ. ತಿರುಪುರ್ ಜಿಲ್ಲೆಯ ನಿಟ್ವೇರ್ ಕಂಪನಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಮಾರ್ಚ್ 2 ರಂದು ಮಧ್ಯರಾತ್ರಿ ಸಂಜೀವ್ ಕುಮಾರ್ ತಿರುಪುರ್ ಬಳಿಯ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದ್ದರು.

ತಕ್ಷಣ ಎಚ್ಚೆತ್ತ ರೈಲ್ವೆ ಪೊಲೀಸರು ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದರು. ನಂತರ ವಲಸೆ ಕಾರ್ಮಿಕನ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ತಿರುಪುರ್ ಜಿಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರ್ಪಡೆ ಮಾಡಿದ್ದಾರೆ.

ತಿರುಪುರದಲ್ಲಿ ನಿಟ್ವೇರ್ ಕಂಪನಿ ಹಾಗೂ ಇತರ ಸಂಬಂಧಿತ ಉದ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರು ತಿರುಪುರ್ ರೈಲ್ವೆ ಪೊಲೀಸ್ ಠಾಣೆಯ ಎದುರು ಬಂದು ಜಮಾಯಿಸಿದ್ದರು. ಸಂಜೀವ್ ಕುಮಾರ್ ಅವರ ಮೊಬೈಲ್ ಫೋನ್ ಮತ್ತು ವಾಹನಗಳು ನಾಪತ್ತೆಯಾಗಿವೆ ಎಂದು ಪ್ರತಿಭಟನಾ ನಿರತ ಕಾರ್ಮಿಕರು ಆರೋಪಿಸಿದರು. ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ರೈಲ್ವೆ ಪೊಲೀಸರು ಭರವಸೆ ನೀಡಿದ್ದ ಬಳಿಕ ಕಾರ್ಮಿಕರು ಪ್ರತಿಭಟನೆ ಹಿಂಪಡೆದರು.

ಪೊಲೀಸರು ಹೇಳಿದ್ದಿಷ್ಟು:ರಾತ್ರಿ ರೈಲ್ವೆ ಹಳಿ ದಾಟುತ್ತಿದ್ದಾಗ ಸಂಜೀವ್ ಕುಮಾರ್ ಅವರಿಗೆ ಡಿಕ್ಕಿ ಹೊಡೆದಿದೆ. ಮಧ್ಯರಾತ್ರಿ 12.56 ಕ್ಕೆ ತಿರುವನಂತಪುರಂನಿಂದ ಚೆನ್ನೈಗೆ ರೈಲನ್ನು ಚಲಾಯಿಸುತ್ತಿದ್ದ ಕರುಪಸಾಮಿ ನೀಡಿದ ಮಾಹಿತಿಯಂತೆ, ಟ್ರ್ಯಾಕ್ ದಾಟಲು ಪ್ರಯತ್ನಿಸಿದ್ದ ವ್ಯಕ್ತಿಯೊಬ್ಬರಿಗೆ ರಾತ್ರಿ ತಿರುವನಂತಪುರಂನಿಂದ ಚೆನ್ನೈಗೆ ಸಂಚರಿಸುತ್ತಿದ್ದ ರೈಲು ಡಿಕ್ಕಿ ಹೊಡೆದಿದೆ ಎಂಬ ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದೆವು. ಆಗ ವಲಸೆ ಕಾರ್ಮಿಕ ಸಂಜೀವ್ ಕುಮಾರ್ ಅವರು ಶವವಾಗಿ ಪತ್ತೆಯಾಗಿದ್ದಾರೆ. ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದೇವು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕಾರ್ಮಿಕರು ಭಯಪಡುವ ಅಗತ್ಯವಿಲ್ಲ ಡಿಸಿ: ಹೆಚ್ಚಿನ ತನಿಖೆ ನಡೆಯುತ್ತಿದೆ. ವಲಸೆ ಕಾರ್ಮಿಕರ ವಿರುದ್ಧ ಹಲ್ಲೆಗಳ ಕುರಿತು ಕಳೆದ ಕೆಲವು ದಿನಗಳಲ್ಲಿ ತಮಿಳುನಾಡಿನ ವಿವಿಧ ಭಾಗಗಳಲ್ಲಿ ವೀಡಿಯೋಗಳು ಪ್ರಸಾರವಾಗುತ್ತಿದ್ದಂತೆ ಭಯ ಆವರಿಸಿದೆ. ಕಾರ್ಮಿಕರು ಸುರಕ್ಷಿತವಾಗಿದ್ದು, ಯಾರೂ ಭಯಪಡುವ ಅಗತ್ಯವಿಲ್ಲ. ಯಾರಾದರೂ ಸುಳ್ಳು ವದಂತಿಗಳನ್ನು ಹಬ್ಬಿಸಿದರೂ ನಂಬಬೇಡಿ. ಕಾರ್ಮಿಕರು ಭಯಬಿಟ್ಟು ಉತ್ತಮವಾಗಿ ಕೆಲಸ ಮಾಡಿ ಎಂದು ತಿರುಪುರ್ ಜಿಲ್ಲಾಧಿಕಾರಿ ಹೇಳಿದ್ದಾರೆ.

ತಮಿಳುನಾಡಿನಲ್ಲಿ ನಡೆಯುತ್ತಿರುವ ಈ ಘಟನೆಗಳ ಸಂಬಂಧ ಬಿಹಾರ ವಿಧಾನಸಭೆಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಬಗ್ಗೆ ನಿತೀಶ್​ ಕುಮಾರ್​, ತಮಿಳುನಾಡು ಸಿಎಂ ಜತೆ ಮಾತನಾಡಿದ್ದು, ಬಿಹಾರಿ ಕಾರ್ಮಿಕರ ಸುರಕ್ಷತೆ ಬಗ್ಗೆ ಕ್ರಮ ವಹಿಸುವಂತೆ ಮನವಿ ಮಾಡಿದ್ದಾರೆ. ಮತ್ತೊಂದು ಕಡೆ ತಮಿಳುನಾಡು ಸಿಎಂ ಸ್ಟಾಲಿನ್​, ತಮ್ಮ ಸರ್ಕಾರ ಎಲ್ಲ ಸೂಕ್ತ ಕ್ರಮಕೈಗೊಳ್ಳುತ್ತದೆ ಎಂದು ಅಭಯ ನೀಡಿದ್ದಾರೆ.

ಇನ್ನೊಂದು ಕಡೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ತಮಿಳುನಾಡು ಸರ್ಕಾರ ಕೆಂಡಾಮಂಡಲವಾಗಿದ್ದು, ಸೂಕ್ತ ಕಾನೂನು ಕ್ರಮಕ್ಕೂ ಮುಂದಾಗಿದೆ.

ಇದನ್ನೂಓದಿ:ಶಿರಸಿ: ಮದುವೆಗೆ ಕರೆಯುವ ನೆಪದಲ್ಲಿ ಮನೆಗೆ ನುಗ್ಗಿದ ಖದೀಮ.. ಚಾಕು ತೋರಿಸಿ ದರೋಡೆಗೆ ಯತ್ನ

Last Updated :Mar 7, 2023, 4:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.