ETV Bharat / bharat

ಈ ಏರಿಯಾ ನಂದೇ ಎನ್ನುತ್ತಿರುವ 17 ಮರಿಗಳ ತಾಯಿ.. ತಡೋಬಾ ಅರಣ್ಯಕ್ಕೆ ಹೆಣ್ಣು ಹುಲಿ ಜುನಾಬಾಯಿಯೇ ರಾಣಿ!

author img

By

Published : Feb 2, 2023, 12:49 PM IST

ತಡೋಬಾದ ಹೆಣ್ಣು ಹುಲಿ ಜುನಾಬಾಯಿ ಇದುವರೆಗೆ 17 ಮರಿಗಳಿಗೆ ಜನ್ಮ ನೀಡಿದೆ. ಎರಡು ಮರಿಗಳೊಂದಿಗೆ ಕಾಡಿನಲ್ಲಿ ರಾಣಿಯಂತೆ ಕಾಲ ಕಳೆಯುತ್ತಿದೆ ಈ ಹೆಣ್ಣು ಹುಲಿ.

tigress Junbai has given birth to 17 cubs  Junbai the reigning tigress of Tadoba  pictures buzzing with two cubs  ತಡೋಬಾ ಅರಣ್ಯಕ್ಕೆ ಹೆಣ್ಣು ಹುಲಿ ಜುನಾಬಾಯಿ  ಎರಡು ಮರಿಗಳೊಂದಿಗೆ ಕಾಡಿನಲ್ಲಿ ರಾಣಿಯಂತೆ ಕಾಲ  ರಾಣಿಯಂತೆ ಕಾಲ ಕಳೆಯುತ್ತಿದೆ ಈ ಹೆಣ್ಣು ಹುಲಿ  ತಡೋಬಾ ಅಂಧೇರಿ ಹುಲಿ ಸಂರಕ್ಷಿತ ಅರಣ್ಯ  ಎರಡು ಮುದ್ದಾದ ಮರಿಗಳೊಂದಿಗೆ ಸಂಭ್ರಮ  ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರಾಬಲ್ಯ
ಮಕ್ಕಳೊಂದಿಗೆ ಹೆಣ್ಣು ಹುಲಿ ಜುನಾಬಾಯಿ

ಮಕ್ಕಳೊಂದಿಗೆ ಹೆಣ್ಣು ಹುಲಿ ಜುನಾಬಾಯಿ

ಹೈದರಾಬಾದ್​: ಮಹಾರಾಷ್ಟ್ರದ ತಡೋಬಾ ಅಂಧೇರಿ ಹುಲಿ ಸಂರಕ್ಷಿತ ಅರಣ್ಯದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಅರಣ್ಯದ ಪ್ರಮುಖ ಪ್ರದೇಶದಲ್ಲಿ ವಾಸಿಸುವ ಹುಲಿಗಳು ಕಡಿಮೆ ಸುರಕ್ಷಿತ ಬಫರ್ ವಲಯದಲ್ಲಿ ಶಾಶ್ವತ ನಿವಾಸವನ್ನು ಸ್ಥಾಪಿಸುತ್ತಿವೆ. ನಿರ್ದಿಷ್ಟವಾಗಿ ಹೇಳುವುದಾದರೆ ಹೆಣ್ಣು ಹುಲಿಯಾದ ಜುನಾಬಾಯಿ ಈ ಪ್ರದೇಶದ ರಾಣಿಯಾಗಿ ಕಾಲ ಕಳೆಯುತ್ತಿದೆ.

ಜುನಾಬಾಯಿ.. ತಡೋಬಾ-ಅಂಧೇರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರಾಬಲ್ಯ ಹೊಂದಿರುವ ಹೆಣ್ಣು ಹುಲಿ. ಆ ಹೆಣ್ಣು ಹುಲಿಗೆ ಒಂಬತ್ತು ವರ್ಷ. ಐದು ಬಾರಿ ಹೆರಿಗೆಯಾಗಿದ್ದು, 17 ಮಕ್ಕಳಿಗೆ ಜನ್ಮ ನೀಡಿದೆ. ಇತ್ತೀಚಿಗೆ ಎರಡು ಮುದ್ದಾದ ಮರಿಗಳೊಂದಿಗೆ ಸಂಭ್ರಮಿಸುವ ಸುಂದರ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಪ್ರೀತಿಯನ್ನು ಹರಡುವುದರ ಜೊತೆಗೆ, ತಾಯಿ ಮರಿಗಳಿಗೆ ಆತ್ಮರಕ್ಷಣೆ ಮತ್ತು ಬೇಟೆಯ ಬಗ್ಗೆ ಕಲಿಸುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ.

tigress Junbai has given birth to 17 cubs  Junbai the reigning tigress of Tadoba  pictures buzzing with two cubs  ತಡೋಬಾ ಅರಣ್ಯಕ್ಕೆ ಹೆಣ್ಣು ಹುಲಿ ಜುನಾಬಾಯಿ  ಎರಡು ಮರಿಗಳೊಂದಿಗೆ ಕಾಡಿನಲ್ಲಿ ರಾಣಿಯಂತೆ ಕಾಲ  ರಾಣಿಯಂತೆ ಕಾಲ ಕಳೆಯುತ್ತಿದೆ ಈ ಹೆಣ್ಣು ಹುಲಿ  ತಡೋಬಾ ಅಂಧೇರಿ ಹುಲಿ ಸಂರಕ್ಷಿತ ಅರಣ್ಯ  ಎರಡು ಮುದ್ದಾದ ಮರಿಗಳೊಂದಿಗೆ ಸಂಭ್ರಮ  ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರಾಬಲ್ಯ
ಮಕ್ಕಳೊಂದಿಗೆ ಹೆಣ್ಣು ಹುಲಿ ಜುನಾಬಾಯಿ

ಈ ಅಪರೂಪದ ದೃಶ್ಯಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದವರು ಮಹಾರಾಷ್ಟ್ರದ ನಿವೃತ್ತ ಸಿವಿಲ್ ಸರ್ಜನ್ ಡಾ. ರಾಜೇಂದ್ರ ಕುಮಾರ್ ಜೈನ್, ಹುಲಿಗಳು ಸಾಮಾನ್ಯವಾಗಿ ರಕ್ಷಣೆಗಾಗಿ ಕಾಡಿನ ಮಧ್ಯಭಾಗದ ಪ್ರದೇಶದಲ್ಲಿ ಇರುತ್ತವೆ. ಜುನಾಬಾಯಿ (ಟಿ45) ಕೋಲಾರ-ಮದನಾಪುರ ಬಫರ್ ಪ್ರದೇಶದಲ್ಲಿ ವಾಸಿಸುತ್ತದೆ. ಬಫರ್ ಜೋನ್​ ಸಾಮಾನ್ಯವಾಗಿ ಜನರು ಮತ್ತು ಜಾನುವಾರುಗಳ ಚಲನೆ ಮತ್ತು ಕಳ್ಳ ಬೇಟೆಗಾರರ ​​ಹಾವಳಿಯಂತಹ ಸಮಸ್ಯೆಗಳನ್ನು ಹೊಂದಿರುತ್ತದೆ. ಆದರೆ ಈ ಹುಲಿ ಅಲ್ಲೇ ನೆಲೆಯೂರಿರುತ್ತೆ. ಆದ್ರೆ ಅದರ ಮರಿಗಳು ಬೇರೆ ಕಡೆ ಹೋಗಿ ವಾಸಿಸುತ್ತವೆ.

ಜುನಾಬಾಯಿ ಅವರ ಮೊದಲ ಬಾರಿಗೆ 2017 ರಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದೆ. ಬಳಿಕ 2018 ರಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಇದಾದ ಎರಡು ವರ್ಷಗಳ ಬಳಿಕ ಅಂದ್ರೆ 2020 ರಲ್ಲಿ ಮತ್ತೆ ಮೂರು ಮಕ್ಕಳಿಗೆ ಜನ್ಮ ನೀಡಿತ್ತು. ಮತ್ತೆ 2021 ರಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದೆ. 2022 ರಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿತು. ಹೀಗ ಐದು ಬಾರಿ ಹೆರಿಗೆಯಾಗಿದ್ದು, ಇದುವರೆಗೆ 17 ಮರಿಗೆ ಜುನಾಬಾಯಿ ಜನ್ಮ ನೀಡಿದೆ.

ಗಂಡು ಹುಲಿಗಳು ತನ್ನ ಮರಿಯನ್ನು ಕೊಲ್ಲಲು ಹಲವು ಬಾರಿ ಪ್ರಯತ್ನಿಸಿದ್ದವು. ಆದರೆ ತಾಯಿ ಹುಲಿ ತಮ್ಮ ಹಿಡಿತದಿಂದ ಮರಿಗಳನ್ನು ರಕ್ಷಿಸಿತ್ತು. ಅದು ತನ್ನ ಸಂತತಿಯನ್ನು ಬಹಳವಾಗಿ ಹೆಚ್ಚಿಸುತ್ತಿದೆ. ತಡೋಬಾ-ಅಂಧೇರಿ ಹುಲಿ ಸಂರಕ್ಷಿತ ಪ್ರದೇಶವು ಮಹಾರಾಷ್ಟ್ರದ ಗಡಿಯಲ್ಲಿದೆ. ಕುಮಾರಂ ಭೀಮ್ ಆಸಿಫಾಬಾದ್ ಜಿಲ್ಲೆಯಲ್ಲಿ ಸುತ್ತಾಡುತ್ತಿರುವ ಹಲವು ಹುಲಿಗಳು ತಡೋಬಾದಿಂದ ಬಂದಿವೆ. ಅಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿದೆ. ಆವಾಸಸ್ಥಾನವು ಸಾಕಾಗದಿದ್ದರೆ ಹುಲಿಗಳು ಇತರ ಪ್ರದೇಶಗಳಿಗೆ ವಲಸೆ ಹೋಗುವುದು ಗಮನಾರ್ಹ.

'ಹುಲಿಗಳ ರಾಜ್ಯ' ಹೆಗ್ಗಳಿಕೆ ಈ ಬಾರಿ ಕರ್ನಾಟಕದ ಮುಡಿಗೆ?: ಭಾರತದ 'ಹುಲಿಗಳ ರಾಜ್ಯ' ಎಂಬ ಹೆಗ್ಗಳಿಕೆಯ ಸ್ಥಾನಮಾನವನ್ನು ಉಳಿಸಿಕೊಳ್ಳಲು ಮಧ್ಯಪ್ರದೇಶ ಮತ್ತು ಕರ್ನಾಟಕ ಪೈಪೋಟಿ ನಡೆಸುತ್ತಿವೆ. 2022ರ ಸಮೀಕ್ಷೆಯಂತೆ ಮಧ್ಯಪ್ರದೇಶವು 34 ಹುಲಿಗಳನ್ನು ಕಳೆದುಕೊಂಡಿದ್ದು, ಕರ್ನಾಟಕದಲ್ಲಿ 15 ಹುಲಿಗಳು ಸಾವನ್ನಪ್ಪಿವೆ.

ಓದಿ: ಚಾಮರಾಜನರ.. ಹುಲಿ ಉಗುರು ಸಾಗಿಸುತ್ತಿದ್ದ ಇಬ್ಬರ ಬಂಧನ: ಅಪಘಾತದಲ್ಲಿ ನಾಲ್ವರಿಗೆ ತೀವ್ರ ಗಾಯ, ಇಬ್ಬರು ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.