ETV Bharat / bharat

ಬಸ್​ ನಿಲ್ದಾಣದ ಬಳಿ ನಿಲ್ಲಿಸಿದ್ದ ಪೊಲೀಸರ​ ಇನ್ನೋವಾ ಕಾರನ್ನೇ ಕದ್ದ ಖದೀಮರು

author img

By

Published : Dec 15, 2022, 6:18 PM IST

ತೆಲಂಗಾಣದ ಸೂರ್ಯಪೇಟ್​ನ ಹೊಸ ಬಸ್​ ನಿಲ್ದಾಣದ ಬಳಿ ನಿಲ್ಲಿಸಿದ್ದ ಪೊಲೀಸ್​ ಕಾರನ್ನು ಕದ್ದಿದ್ದು, ಅದು ನಂತರ ಬೇರೊಂದು ಸ್ಥಳದಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.

thief-stolen-a-police-vehicle-in-the-suryapeta-district-in-telangana
ಬಸ್​ ನಿಲ್ದಾಣದ ಬಳಿ ನಿಲ್ಲಿಸಿದ್ದ ಪೊಲೀಸರ​ ಇನ್ನೋವಾ ಕಾರನ್ನೇ ಕದ್ದ ಖದೀಮರು

ಹೈದರಾಬಾದ್​ (ತೆಲಂಗಾಣ): ಬಸ್​ ನಿಲ್ದಾಣದ ಬಳಿ ನಿಲ್ಲಿಸಿದ್ದ ಪೊಲೀಸರ​ ಇನ್ನೋವಾ ಕಾರನ್ನೇ ಕಳ್ಳರು ಕದ್ದಿರುವ ಘಟನೆ ತೆಲಂಗಾಣದ ಸೂರ್ಯಪೇಟ್​ ಜಿಲ್ಲೆಯಲ್ಲಿ ನಡೆದಿದ್ದು, ಪೊಲೀಸರು ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಕಳೆದ ರಾತ್ರಿ ಸೂರ್ಯಪೇಟ್​ನ ಹೊಸ ಬಸ್​ ನಿಲ್ದಾಣ ಸಮೀಪದ ಟಿಎಸ್​ 09 ಪಿಎ 0658 ಸಂಖ್ಯೆಯ ಇನ್ನೋವಾ ಕಾರನ್ನು ಪೊಲೀಸರು ನಿಲ್ಲಿಸಿದ್ದರು. ಆಗ ಯಾರೋ ಕಾರನ್ನು ಕಳ್ಳತನ ಮಾಡಿದ್ದಾರೆ. ಆಗ ತಕ್ಷಣವೇ ಎಚ್ಚರಗೊಂಡ ಪೊಲೀಸರು ಕಾರಿಗಾಗಿ ಹುಡುಕಾಟ ನಡೆಸಿದಾಗ ಕೊನೆಗೆ ಕೊಡಾಬಾ ಎಂಬಲ್ಲಿ ಕಾರು ಪತ್ತೆಯಾಗಿದೆ.

ಆದರೆ, ಕಾರು ಕದ್ದ ಕಳ್ಳ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಸದ್ಯ ಕಳ್ಳನಿಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ಸೂರ್ಯಪೇಟ್​ ಜಿಲ್ಲೆಯಲ್ಲಿ ಪೊಲೀಸರ ಕಾರು ಕಳ್ಳತನವಾಗುತ್ತಿರುವುದು ಇದು ಎರಡನೇ ಬಾರಿ ಎಂಬುದು ಇನ್ನೂ ಅಚ್ಚರಿಯ ವಿಚಾರ.

ಇದನ್ನೂ ಓದಿ: ನಡು ರಸ್ತೆಯಲ್ಲಿ ಮಹಿಳೆ ಕೊಲೆ: ಪ್ರಿಯಕರನ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.