ETV Bharat / bharat

ಶ್ರೇಣಿಗಳ ಸುಂದರ ನಾಡಿನಲ್ಲಿ ವಿಶ್ವದ ಮೊದಲ ಕವಿ ದರ್ಬಾರ್

author img

By

Published : Apr 21, 2021, 5:58 AM IST

The biggest poet durbar in Himachal pradesh
ಶ್ರೇಣಿಗಳ ಸುಂದರ ನಾಡಿನಲ್ಲಿ ವಿಶ್ವದ ಮೊದಲ ಕವಿ ದರ್ಬಾರ್

ಪಾವೊಂಟಾ ಸಾಹಿಬ್​ನಲ್ಲಿರುವ ಐತಿಹಾಸಿಕ ಗುರುದ್ವಾರದಲ್ಲಿ ವಿಶ್ವದ ಮೊದಲ ಕವಿ ದರ್ಬಾರ್ ಹಾಲ್ ನಿರ್ಮಾಣಗೊಳ್ಳುತ್ತಿದೆ. ಜಗತ್ತಿನ ಬೇರಾವುದೇ ಸ್ಥಳದಲ್ಲಿ ಇಂತಹ ಕವಿ ದರ್ಬಾರ್ ಹಾಲ್ ನಿರ್ಮಾಣಗೊಂಡಿಲ್ಲ. ವಿಶ್ವದ ಮೊದಲ ಕವಿ ದರ್ಬಾರ್ ಹಾಲ್​​ ಅನ್ನು ಇನ್ನಷ್ಟು ಸುಂದರವಾಗಿಸುವ ಕೆಲಸ ನಡೆಯುತ್ತಿದೆ.

ಪಾವೊಂಟಾ ಸಾಹಿಬ್ (ಹಿಮಾಚಲ ಪ್ರದೇಶ): ಹಿಮಾಲಯ ಪರ್ವತ ಶ್ರೇಣಿಗಳ ಸುಂದರ ನಾಡಿನಲ್ಲಿ ವಿಶ್ವದ ಮೊದಲ ಕವಿ ದರ್ಬಾರ್ ಹಾಲ್​​ ನಿರ್ಮಾಣಗೊಳ್ಳುತ್ತಿದೆ. ಇದಕ್ಕಾಗಿ ಚಂಡಿಗಢದಿಂದ ಮತ್ತು ರಾಜಸ್ಥಾನದಿಂದ ಕುಶಕರ್ಮಿಗಳ ಕರೆಸಲಾಗಿದೆ. ಇದಕ್ಕೆಂದೇ ಧೌಲ್​​​​ಪುರದಿಂದ ವಿಶೇಷ ಕಲ್ಲುಗಳ ತರಿಸಲಾಗಿದೆ. ಏಕೆಂದರೆ ಇಲ್ಲಿನ ಪಾವೊಂಟಾ ಸಾಹಿಬ್​ನಲ್ಲಿರುವ ಐತಿಹಾಸಿಕ ಗುರುದ್ವಾರದಲ್ಲಿ ವಿಶ್ವದ ಮೊದಲ ಕವಿ ದರ್ಬಾರ್ ಹಾಲ್ ನಿರ್ಮಾಣಗೊಳ್ಳುತ್ತಿದೆ.

ಶ್ರೇಣಿಗಳ ಸುಂದರ ನಾಡಿನಲ್ಲಿ ವಿಶ್ವದ ಮೊದಲ ಕವಿ ದರ್ಬಾರ್

ಗುರು ಗೋವಿಂದ್ ಸಿಂಗ್ ಜಿ 1683ರಲ್ಲಿ ಪಾವೊಂಟಾ ಸಾಹಿಬ್ ಗುರುದ್ವಾರಕ್ಕೆ ಅಡಿಪಾಯ ಹಾಕಿದರು ಎಂದು ಇತಿಹಾಸದಲ್ಲಿ ಉಲ್ಲೇಖವಿದೆ. ಈ ಸಮಯದಲ್ಲಿ ಗುರು ಗೋವಿಂದ್ ಸಿಂಗ್ ಜಿ ಇಲ್ಲಿ 52 ಕವಿಗಳೊಂದಿಗೆ ಕವಿಗೋಷ್ಠಿ ಪ್ರಾರಂಭಿಸಿದರು. ಅಂದಿನಿಂದ, ಪ್ರತಿ ವರ್ಷ 52 ಕವಿಗಳು ತಮ್ಮ ಕೃತಿಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತಾರೆ. ಪ್ರತಿ ತಿಂಗಳಲ್ಲೂ ಕವಿ ದರ್ಬಾರ್ ನಡೆಸಿಕೊಂಡು ಬರಲಾಗುತ್ತಿದೆ. ಈ ದರ್ಬಾರ್​​​​ನಲ್ಲಿ ಭಾಗಿಯಾಗಲು ದೂರದ ಊರಿನಿಂದಲೂ ಕವಿ, ಪಂಡಿತರು ಬರುತ್ತಾರೆ.

ಪಾವೊಂಟಾ ಸಾಹಿಬ್ ಪ್ರದೇಶ ವಿಶ್ವದಾದ್ಯಂತ ತನ್ನ ಶ್ರೇಷ್ಠತೆ ಉಳಿಸಿಕೊಂಡಿದೆ. 10ನೇ ಚಕ್ರವರ್ತಿಯ ಕಾಲದಿಂದಲೂ ಈ ಕವಿ ದರ್ಬಾರ್ ನಡೆಯುತ್ತಿದೆ. 10ನೇ ಚಕ್ರವರ್ತಿ ತನ್ನ ಆಸ್ಥಾನದಲ್ಲಿ 50 ಕವಿಗಳ ಹೊಂದಿದ್ದ ಎಂದು ಇತಿಹಾಸ ಹೇಳುತ್ತಿದೆ. ಅಲ್ಲದೇ ವಿವಿಧ ಭಾಷೆಗಳ ಕವಿಗಳು ಇವನ ಆಸ್ಥಾನದಲ್ಲಿ ಸ್ಥಾನ ಪಡೆದಿದ್ದರು. ಕವಿಗಳು ಕವನ ಮತ್ತು ಹಾಡುಗಳ ಮೂಲಕ ಜನರ ರಂಜಿಸುತ್ತಿದ್ದರು. ಈ ಸಂಪ್ರದಾಯವನ್ನು ಇಂದಿಗೂ ಪಾವೊಂಟಾ ಸಾಹಿಬ್​ನಲ್ಲಿ ಮುನ್ನಡೆಸಿಕೊಂಡು ಬರಲಾಗಿದೆ.

ಜಗತ್ತಿನ ಬೇರಾವಿದೇ ಸ್ಥಳದಲ್ಲಿ ಇಂತಹ ಕವಿ ದರ್ಬಾರ್ ಹಾಲ್ ನಿರ್ಮಾಣಗೊಂಡಿಲ್ಲ. ವಿಶ್ವದ ಮೊದಲ ಕವಿ ದರ್ಬಾರ್ ಹಾಲ್​​ ಅನ್ನು ಇನ್ನಷ್ಟು ಸುಂದರವಾಗಿಸುವ ಕೆಲಸ ನಡೆಯುತ್ತಿದೆ. ಇಷ್ಟೇ ಅಲ್ಲ ಸಾಹಿಬ್​​ನ ಸುತ್ತಲಿನ ಜಾಗದಲ್ಲಿ ರಂಗು ರಂಗಿನ ಹೂಗಳ ಬೆಳೆಸಲಾಗಿದೆ. ಸುಮಾರು 52 ಬಗೆಯ ಹೂಗಳು ಸಾಹಿಬ್​ನ ಸೌಂದರ್ಯವನ್ನ ಇಮ್ಮಡಿಗೊಳಿಸುತ್ತಿವೆ. ಈಗಾಗಲೇ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಪೂರ್ಣಗೊಂಡರೆ ರಾಜರ ಆಸ್ಥಾನದಂತೆ ಕಂಗೊಳಿಸಲಿದೆ.

ಪಾವೊಂಟಾ ಸಾಹಿಬ್ ಗುರುದ್ವಾರದ ಕವಿ ದರ್ಬಾರ್ ನೋಡಲೆಂದೇ ಆಗಮಿಸುತ್ತಾರೆ. ಇದೀಗ ಇಲ್ಲಿನ ಕವಿ ದರ್ಬಾರ್​ಗೆ ಹೊಸ ರೂಪ ನೀಡಲು ಮುಂದಾಗಿದ್ದು, ಭವಿಷ್ಯದಲ್ಲಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಲಿದೆ ಎಂಬ ಅಭಿಲಾಷೆ ಇಲ್ಲಿನ ನಿವಾಸಿಗಳದ್ದಾಗಿದೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.