ETV Bharat / bharat

ಗುಜರಾತ್ ಗೃಹ ಸಚಿವರು ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ

author img

By ETV Bharat Karnataka Team

Published : Dec 8, 2023, 2:10 PM IST

Stone pelting on Vande Bharat train in Rajkot
Stone pelting on Vande Bharat train in Rajkot

ಗುಜರಾತ್ ಗೃಹ ಸಚಿವರು ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆದ ಬಗ್ಗೆ ವರದಿಯಾಗಿದೆ.

ರಾಜಕೋಟ್​( ಗುಜರಾತ್​): ಗುಜರಾತ್ ಗೃಹ ಸಚಿವ ಹರ್ಷ್ ಸಾಂಘ್ವಿ ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆದ ಬಗ್ಗೆ ವರದಿಯಾಗಿದೆ. ಸಚಿವ ಸಾಂಘ್ವಿ ಅಹಮದಾಬಾದ್​ನಿಂದ ರಾಜ್​ಕೋಟ್​ಗೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿರಬೇಕಾದರೆ ಈ ಘಟನೆ ನಡೆದಿದೆ. ದುಷ್ಕರ್ಮಿಗಳ ಕಲ್ಲು ತೂರಾಟದಿಂದ ಯಾರಿಗೂ ಗಾಯವಾಗಿಲ್ಲ. ಆದರೆ ರೈಲಿನ ಕಿಟಕಿಯ ಗಾಜು ಒಡೆದಿದೆ. ರಾಜಕೋಟ್​ನ ಬಿಲೇಶ್ವರ್ ಸ್ಟೇಶನ್ ಬಳಿ ನಡೆದ ಘಟನೆಯ ಬಗ್ಗೆ ರೈಲ್ವೆ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ.

ಘಟನೆಯ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ರಾಜ್​ಕೋಟ್ ರೈಲ್ವೆ ವಿಭಾಗದ ಭದ್ರತಾ ಅಧಿಕಾರಿ ಪವನ್ ಕುಮಾರ್ ಶ್ರೀವಾಸ್ತವ, "ವಂದೇ ಭಾರತ್ ರೈಲು ಪ್ರಸ್ತುತ ರಾಜ್​ಕೋಟ್ ವಿಭಾಗದಲ್ಲಿ ಚಲಿಸುತ್ತಿದೆ. ರೈಲು ಕಳೆದ ರಾತ್ರಿ 10 ಗಂಟೆ ಸುಮಾರಿಗೆ ಬಿಲೇಶ್ವರದಿಂದ ರಾಜ್​ಕೋಟ್​ಗೆ ಬರುವಾಗ ರಾಜ್​ಕೋಟ್​ನಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿ ಈ ಘಟನೆ ನಡೆದಿದ್ದು. ಅಪರಿಚಿತ ವ್ಯಕ್ತಿ ರೈಲಿನ ಮೇಲೆ ಕಲ್ಲು ತೂರಿದ್ದಾನೆ.

ಆದರೆ ಈ ಕಲ್ಲು ತೂರಾಟದಿಂದ ದೊಡ್ಡ ಪ್ರಮಾಣದ ಹಾನಿಯಾಗಿಲ್ಲ. ರೈಲಿನ ಸಿ 4- ಸಿ 5 ಬೋಗಿಯ ಕಿಟಕಿಯಲ್ಲಿ ಸಣ್ಣ ಬಿರುಕು ಕಂಡುಬಂದಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಈ ಘಟನೆಯ ನಂತರ, ನಾವು ತಕ್ಷಣ ತಂಡವನ್ನು ಸ್ಥಳಕ್ಕೆ ಕಳುಹಿಸಿದ್ದೇವೆ. ಈವರೆಗೆ ಆರೋಪಿಯ ಬಗ್ಗೆ ಯಾವುದೇ ಪ್ರಮುಖ ಸುಳಿವು ಸಿಕ್ಕಿಲ್ಲ, ಆದರೆ ಪೊಲೀಸರು ತೀವ್ರವಾಗಿ ತನಿಖೆ ನಡೆಸುತ್ತಿದ್ದಾರೆ" ಎಂದು ಹೇಳಿದರು.

"ನಮ್ಮ ಪ್ರಾಥಮಿಕ ಅಂದಾಜಿನ ಪ್ರಕಾರ ರಾಜ್​ಕೋಟ್ ಮತ್ತು ಬಿಲೇಶ್ವರ್ ನಡುವೆ ಅನೇಕ ಗುಡಿಸಲುಗಳಿವೆ. ಅಲ್ಲಿ ಆಟವಾಡುತ್ತಿರುವ ಚಿಕ್ಕ ಮಕ್ಕಳು ಕೆಲವೊಮ್ಮೆ ರೈಲು ಬಂದಾಗ ಕಲ್ಲೆಸೆಯುತ್ತಾರೆ. ಕಲ್ಲು ತೂರಾಟ ಮಾಡದಂತೆ ಈ ಪ್ರದೇಶದಲ್ಲಿ ಪ್ರತಿವರ್ಷ ಜಾಗೃತಿ ಅಭಿಯಾನ ನಡೆಸಲಾಗುತ್ತದೆ. ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಮತ್ತು ನಮ್ಮ ತಂಡವು ಈ ವಿಷಯದಲ್ಲಿ ಸಮಗ್ರ ತನಿಖೆ ಪ್ರಾರಂಭಿಸಿದೆ." ಎಂದು ಅಧಿಕಾರಿ ಪವನ್ ಕುಮಾರ್ ಶ್ರೀವಾಸ್ತವ ತಿಳಿಸಿದರು. ಗೃಹ ಸಚಿವ ಹರ್ಷ್ ಸಾಂಘ್ವಿ ವಂದೇ ಭಾರತ್ ರೈಲಿನಲ್ಲಿ ರಾಜ್​ಕೋಟ್​ಗೆ ಬಂದು ಸಾರಿಗೆ ಸಂಸ್ಥೆಯ ಬಸ್​ನಲ್ಲಿ ಅಹಮದಾಬಾದ್​ಗೆ ಮರಳಿದರು.

ಇದನ್ನೂ ಓದಿ : 'ವ್ಯಾಸಂಗದ ವೀಸಾ'ಗಾಗಿ ತೋರಿಸಬೇಕಾದ ಕನಿಷ್ಠ ಬ್ಯಾಂಕ್ ಬ್ಯಾಲೆನ್ಸ್​ ದ್ವಿಗುಣಗೊಳಿಸಿದ ಕೆನಡಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.