ETV Bharat / bharat

ತೆಲುಗು-ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳನ್ನು ಗೌರವಿಸಿ: ಇಂಡಿಗೋಗೆ ಕೆಟಿಆರ್​ ಸಲಹೆ

author img

By

Published : Sep 19, 2022, 8:20 AM IST

Start Respecting Local Languages  Telangana Minister KTR To IndiGo  Vijaywada Hyderabad route indigo plane  ಪ್ರಾದೇಶಿಕ ಭಾಷೆಗಳನ್ನು ಗೌರವಿಸಿ  ಇಂಡಿಗೋಗೆ ಕೆಟಿಆರ್​ ಸಲಹೆ  ಇಂಡಿಗೋ ವಿಮಾನದಲ್ಲಿ ತೆಲುಗು ಪ್ರಯಾಣಿಕ  ತೆಲಂಗಾಣ ಸಚಿವ ಕೆಟಿಆರ್  ಸ್ಥಳೀಯ ಭಾಷೆಗಳನ್ನು ಗೌರವಿಸಲು ಪ್ರಾರಂಭಿಸಿ  ವಿಜಯವಾಡ ಹೈದರಾಬಾದ್ ಇಂಡಿಗೋ ವಿಮಾನ  ತೆಲಂಗಾಣ ಸಚಿವ ಕೆಟಿ ರಾಮರಾವ್  ವಿಮಾನಯಾನ ಸಚಿವ ಸಿಂಧಿಯಾ
ಇಂಡಿಗೋಗೆ ಕೆಟಿಆರ್​ ಸಲಹೆ

ಇಂಡಿಗೋ ವಿಮಾನದಲ್ಲಿ ತೆಲುಗು ಪ್ರಯಾಣಿಕರೊಬ್ಬರು ಅನುಭವಿಸಿದ ಭಾಷಾ ಸಮಸ್ಯೆಯ ಘಟನೆಯನ್ನು ತೆಲಂಗಾಣ ಸಚಿವ ಕೆಟಿಆರ್ ಖಂಡಿಸಿದ್ದಾರೆ.

ನವದೆಹಲಿ/ಹೈದರಾಬಾದ್​: ಇಂಗ್ಲಿಷ್/ಹಿಂದಿ ಭಾಷೆ ಮಾತನಾಡಲು ಬರುವುದಿಲ್ಲ ಎಂಬ ಕಾರಣಕ್ಕೆ ತೆಲುಗು ಮಹಿಳೆಯ ಸೀಟು ಬದಲಾಯಿಸಿದ ಇಂಡಿಗೋ ವಿಮಾನ ಸಿಬ್ಬಂದಿಯ ನಡೆಗೆ ತೆಲಂಗಾಣ ಸಚಿವ ಕೆ.ಟಿ.ರಾಮರಾವ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿಜಯವಾಡ-ಹೈದರಾಬಾದ್ ಇಂಡಿಗೋ ವಿಮಾನದಲ್ಲಿ (6E7297 ವಿಮಾನ) ತುರ್ತು ನಿರ್ಗಮನದ ಸಾಲಿನಲ್ಲಿ ಕುಳಿತಿದ್ದ ತೆಲುಗು ಮಹಿಳೆಯೊಬ್ಬರಿಗೆ ಇಂಗ್ಲಿಷ್ ಬಾರದ ಕಾರಣ ಸೀಟು ಬದಲಾಯಿಸುವಂತೆ ಸಿಬ್ಬಂದಿ ಒತ್ತಾಯಿಸಿದ್ದರು ಎಂದು ತಿಳಿದುಬಂದಿದೆ.

ಸೆಪ್ಟೆಂಬರ್ 16ರಂದು ಐಐಎಂ ಅಹಮದಾಬಾದ್‌ನ ಸಹಾಯಕ ಪ್ರಾಧ್ಯಾಪಕಿ ದೇವಸ್ಮಿತಾ ಎಂಬುವವರು ವಿಜಯವಾಡದಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ನಡೆದ ಘಟನೆಯ ಕುರಿತು ಟ್ವೀಟ್ ಮಾಡಿದ್ದರು. ಅಂದು ತೆಲುಗು ಮಹಿಳೆಯೊಬ್ಬರು ವಿಜಯವಾಡದಿಂದ ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದರು. ಆಕೆ 2A (XL ಸೀಟ್, ಎಕ್ಸಿಟ್ ರೋ) ನಲ್ಲಿ ಕುಳಿತಿದ್ದರು. ಮಹಿಳೆಗೆ ಹಿಂದಿ/ಇಂಗ್ಲಿಷ್ ಮಾತನಾಡಲು ಬರುವುದಿಲ್ಲ ಎಂದು ಸಿಬ್ಬಂದಿಗೆ ತಿಳಿದು ಆಕೆಯನ್ನು 3C ಸೀಟಿಗೆ ಬದಲಾಯಿಸಿದರು. ಈ ಮೂಲಕ ತಾರತಮ್ಯ ಎಸಗಲಾಗಿದೆ ಎಂದು ತಿಳಿಸಿದ್ದರು.

  • Dear @IndiGo6E Management, I request you to start respecting local languages & passengers who may not be well conversant in English or Hindi

    In regional routes, recruit more staff who can speak the local language like Telugu, Tamil, Kannada etc. This will be a win-win solution https://t.co/GbJGi5nl0W

    — KTR (@KTRTRS) September 18, 2022 " class="align-text-top noRightClick twitterSection" data=" ">

'ಸ್ಥಳೀಯ ಭಾಷೆಗಳನ್ನು ಗೌರವಿಸಿ': ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆಟಿಆರ್, ಇಂಡಿಗೋ ಸಂಸ್ಥೆಯನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ‘@IndiGo6E ಮ್ಯಾನೇಜ್‌ಮೆಂಟ್ ಸ್ಥಳೀಯ ಭಾಷೆಗಳು ಮತ್ತು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಚೆನ್ನಾಗಿ ಮಾತನಾಡದ ಪ್ರಯಾಣಿಕರನ್ನೂ ಗೌರವಿಸಲು ಪ್ರಾರಂಭಿಸಿ’ ಎಂದು ಮನವಿ​ ಮಾಡಿದ್ದಾರೆ.

ವಿಮಾನಗಳು ಹಾರುವ ಮಾರ್ಗಗಳ ಆಧಾರದ ಮೇಲೆ ಆಯಾ ಭಾಷೆಗಳನ್ನು ಮಾತನಾಡಬಲ್ಲ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು. ಪ್ರಾದೇಶಿಕ ಮಾರ್ಗಗಳಲ್ಲಿ ತೆಲುಗು, ಕನ್ನಡ, ತಮಿಳು ಸೇರಿದಂತೆ ಮುಂತಾದ ಸ್ಥಳೀಯ ಭಾಷೆಗಳನ್ನು ಮಾತನಾಡಬಲ್ಲ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿ. ಇದು ಸಮಸ್ಯೆಗೆ ಪರಿಹಾರವಾಗಲಿದೆ. ಅಷ್ಟೇ ಅಲ್ಲ, ಪ್ರಯಾಣಿಕರು ಹಾಗೂ ಸಿಬ್ಬಂದಿಗೂ ಯಾವುದೇ ತೊಂದರೆಯಾಗದು ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ಇಂಡಿಗೋ ಮ್ಯಾನೇಜ್​ಮೆಂಟ್​ ಪ್ರತಿಕ್ರಿಯಿಸಿಲ್ಲ.

ಇದನ್ನೂ ಓದಿ: ಖ್ಯಾತ ಗಾಯಕಿ ಮೈಥಿಲಿ ಠಾಕೂರ್​ ಜೊತೆ ಇಂಡಿಗೋ ಸಿಬ್ಬಂದಿ ಅನುಚಿತ ವರ್ತನೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.